ಕಿವುಡರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಭಾರತ ತಂಡಕ್ಕೆ ಮೋದಿ ಔತಣಕೂಟ

By Naveen Kodase  |  First Published May 19, 2022, 11:14 AM IST

* ಕಿವುಡರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಭಾರತದ ಎಲ್ಲಾ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಬುಲಾವ್

* ಮೋದಿ ಮೇ 21ರಂದು ಔತಣ ಕೂಟ ಏರ್ಪಡಿಸಿದ್ದಾರೆ

* ಭಾರತ ಈ ಬಾರಿ 8 ಚಿನ್ನ, 1 ಬೆಳ್ಳಿ, 8 ಕಂಚು ಗೆದ್ದು ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ


ನವದೆಹಲಿ(ಮೇ.19): ಬ್ರೆಜಿಲ್‌ನಲ್ಲಿ ನಡೆದ 24ನೇ ಆವೃತ್ತಿಯ ಕಿವುಡರ ಒಲಿಂಪಿಕ್ಸ್‌ನಲ್ಲಿ (Deaflympics 2021) ಪಾಲ್ಗೊಂಡಿದ್ದ ಭಾರತದ ಎಲ್ಲಾ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದು, ಮೇ 21ರಂದು ಔತಣ ಕೂಟ ಏರ್ಪಡಿಸಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಸಾಧನೆ: ಭಾರತ ಈ ಬಾರಿ 8 ಚಿನ್ನ, 1 ಬೆಳ್ಳಿ, 8 ಕಂಚು (ಒಟ್ಟು 17 ಪದಕ) ಗೆದ್ದು ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ತೋರಿತು. ಈ ಹಿಂದೆ ಒಂದು ಆವೃತ್ತಿಯಲ್ಲಿ ಭಾರತ ಗೆದ್ದ ಗರಿಷ್ಠ ಪದಕಗಳ ದಾಖಲೆ 7. 1993, 1997, 2005ರಲ್ಲಿ ಭಾರತ ತಲಾ 7 ಪದಕಗಳನ್ನು ಗೆದ್ದಿತ್ತು.

ಮಿನಿ ಒಲಿಂಪಿಕ್ಸ್‌: ಧಿನಿಧಿಗೆ 3 ಚಿನ್ನ!

Tap to resize

Latest Videos

ಬೆಂಗಳೂರು: ಹಲವು ರಾಷ್ಟ್ರೀಯ ಟೂರ್ನಿಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಈಜುಪಟು ಧಿನಿಧಿ ದೇಸಿಂಗು 2ನೇ ಆವೃತ್ತಿಯ ಕರ್ನಾಟಕ ಮಿನಿ ಒಲಿಂಪಿಕ್ಸ್‌ನಲ್ಲಿ 3 ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾರೆ. ಬುಧವಾರ ನಡೆದ ಬಾಲಕಿಯರ 50 ಮೀ. ಫ್ರೀ ಸ್ಟೈಲ್‌ ಸ್ಪರ್ಧೆಯಲ್ಲಿ ಬೆಂಗಳೂರಿನ ಧಿನಿಧಿ 27.71 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಬೆಂಗಳೂರಿನ ರುಜುಲಾ, ಶ್ರೀಚರಣಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದರು. 200 ಮೀ. ಬ್ಯಾಕ್‌ಸ್ಟೊ್ರೕಕ್‌(2 ನಿಮಿಷ 34.41 ಸೆಕೆಂಡ್‌) ಮತ್ತು 50 ಮೀ.ಬಟರ್‌ಫ್ಲೈ(29.35 ಸೆಕೆಂಡ್‌) ವಿಭಾಗಗಳಲ್ಲೂ ಚಿನ್ನದ ಪದಕ ಧಿನಿಧಿ ಪಾಲಾಯಿತು. ಬೆಂಗಳೂರಿನ ಜನ್ಯ ಬಾಲಕಿಯರ 100 ಮೀ. ಬಟರ್‌ಫ್ಲೈನಲ್ಲಿ ಚಿನ್ನ, 50 ಮೀ. ಬಟರ್‌ ಫ್ಲೈ ಹಾಗೂ 200 ಮೀ. ಬಟರ್‌ ಫ್ಲೈ ಸ್ಪರ್ಧೆಗಳಲ್ಲಿ ಕಂಚು ಜಯಿಸಿದರು.

ಟೇಬಲ್‌ ಟೆನಿಸ್‌ ಬಾಲಕರ ಸಿಂಗಲ್ಸ್‌ನಲ್ಲಿ ಬೆಂಗಳೂರಿನ ತವಂತ್‌, ಆಯುಷ್‌, ಅಥರ್ವ ಮತ್ತು ತೇಶುಭ್‌ ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದರೆ, ಬಾಲಕಿಯರ ವಿಭಾಗದಲ್ಲಿ ಬೆಳಗಾವಿಯ ಸಾನ್ವಿ, ಆಯುಷಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ, ಬೆಳಗಾವಿಯ ತನಿಷ್ಕಾ ಮತ್ತು ಬೆಂಗಳೂರಿನ ಸ್ಮೃತಿ ಕಂಚು ಜಯಿಸಿದರು. ಬಾಲಕ, ಬಾಲಕಿಯರ ನೆಟ್‌ಬಾಲ್‌ನಲ್ಲಿ ಹಾಸನ ತಂಡಗಳು ಚಾಂಪಿಯನ್‌ ಆದರೆ, ಬೆಂಗಳೂರು ನಗರ ತಂಡಗಳು ರನ್ನರ್‌-ಅಪ್‌ ಆದವು. ಇನ್ನು 10 ಮೀ. ರೈಫಲ್‌ ಶೂಟಿಂಗ್‌ನ ಬಾಲಕರ ವಿಭಾಗದಲ್ಲಿ ಬೆಂಗಳೂರಿನ ನರೇನ್‌, ಬಾಲಕಿಯರ ವಿಭಾಗದಲ್ಲಿ ಶ್ರೇಯಾ ಚಿನ್ನ ಜಯಿಸಿದರು.

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ನಿಖಾತ್ ಜರೀನ್ ಫೈನಲ್‌ಗೆ ಲಗ್ಗೆ

ಫ್ರೆಂಚ್‌ ಓಪನ್‌ ಟೆನಿಸ್‌: ಸಿಂಗಲ್ಸ್‌ಗಿಲ್ಲ ಭಾರತೀಯರು

ಪ್ಯಾರಿಸ್‌: ಈ ವರ್ಷವೂ ಫ್ರೆಂಚ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂನ (French Open Grandslam) ಸಿಂಗಲ್ಸ್‌ ವಿಭಾಗದಲ್ಲಿ ಭಾರತೀಯರು ಸ್ಪರ್ಧಿಸಲು ಅರ್ಹತೆ ಪಡೆದಿಲ್ಲ. ಅರ್ಹತಾ ಸುತ್ತಿನ 2ನೇ ಪಂದ್ಯದಲ್ಲಿ ರಾಮ್‌ಕುಮಾರ್‌ ರಾಮನಾಥನ್‌, ಫ್ರಾನ್ಸ್‌ನ 18 ವರ್ಷದ ಶಾನ್‌ ಕ್ಯುನಿನ್‌ ವಿರುದ್ಧ 6-7(6), 4-6ರಲ್ಲಿ ಸೋಲುಂಡರು. ಮೊದಲ ಪಂದ್ಯದಲ್ಲಿ ಅವರು ಜರ್ಮನಿಯ ಹಾನ್ಮನ್‌ ವಿರುದ್ಧ ಜಯಿಸಿದ್ದರು. ಸುಮಿತ್‌ ನಗಾಲ್‌ ಹಾಗೂ ಯೂಕಿ ಭಾಂಬ್ರಿ ಮೊದಲ ಪಂದ್ಯದಲ್ಲೇ ಸೋತು ಹೊರಬಿದ್ದಿದ್ದರು
 

click me!