ನನ್ನ ಬೆಂಬಲ ನರೇಂದ್ರ ಮೋದಿಗೆ-ಜಡೇಜಾ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ!

By Web DeskFirst Published Apr 16, 2019, 5:55 PM IST
Highlights

ಪ್ರಧಾನಿ ನರೇಂದ್ರ ಮೋದಿಗೆ ನನ್ನ ಬೆಂಬಲ ಎಂದಿದ್ದ ರವೀಂದ್ರ ಜಡೇಜಾ ಟ್ವೀಟ್‌ಗೆ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಆಲ್ರೌಂಡರ್ ಜಡೇಜಾಗೆ ಮೋದಿ ನೀಡಿದ ಪ್ರತಿಕ್ರಿಯೆ ಏನು? ಇಲ್ಲಿದೆ ವಿವರ.

ನವದೆಹಲಿ(ಏ.16): ಟೀಂ ಇಂಡಿಯಾ ಕ್ರಿಕೆಟಿಗರು ಸದ್ಯ ಐಪಿಎಲ್ ಟೂರ್ನಿಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಆಲ್ರೌಂಡರ್ ರವೀಂದ್ರ ಜಡೇಜಾ ಲೋಕಸಭಾ ಚುನಾವಣಾ ವೇದಿಕೆಯಲ್ಲಿ ಸದ್ದು ಮಾಡುತ್ತಿದ್ದಾರೆ. ಜಡೇಜಾ ಕುಟುಂಬ ತೆಗೆದುಕೊಂಡ ನಿರ್ಧಾರದಿಂದ ಪ್ರಶ್ನೆಗಳ ಸುರಿಮಳೆ ಎದುರಿಸಿದ ಜಡೇಜಾ, ಕೊನೆಗೆ ಟ್ವೀಟ್ ಮೂಲಕ ಉತ್ತರ ನೀಡಿದ್ದರು. ನನ್ನ ಬೆಂಬಲ ನರೇಂದ್ರ ಮೋದಿಗೆ, ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದರು.

 

I support BJP. jai hind 🇮🇳 pic.twitter.com/GXNz5o07yy

— Ravindrasinh jadeja (@imjadeja)

 

ಇದನ್ನೂ ಓದಿ: ವಿಶ್ವಕಪ್’ಗೆ ಕಾರ್ತಿಕ್ ಆಯ್ಕೆ ಬಗ್ಗೆ ಉತ್ತಪ್ಪ ಹೇಳಿದ್ದಿಷ್ಟು...

ರವೀಂದ್ರ ಜಡೇಜಾ ಟ್ವೀಟ್‌ಗೆ ಇದೀಗ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಬಲಿಸಿದ ಜಡೇಜಾಗೆ ಧನ್ಯವಾದ ಹೇಳಿದ ಮೋದಿ, 2019ರ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಜಡೇಜಾಗೆ ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ.

 

Thank you !

And, congratulations on being selected for the Indian cricket team for the 2019 World Cup. My best wishes. https://t.co/wLbssqSoTB

— Chowkidar Narendra Modi (@narendramodi)

 

ಇದನ್ನೂ ಓದಿ: RCBಗೆ ಇನ್ನೂ ಇದೆಯಾ ಪ್ಲೇ ಆಫ್ ಅವಕಾಶ- ಚಹಲ್ ನೀಡಿದ್ರು ಉತ್ತರ!

ರವೀಂದ್ರ ಜಡೇಜಾ ಮೋದಿಗೆ ನನ್ನ ಬೆಂಬಲ ಎಂದು ಟ್ವೀಟ್ ಮಾಡಲು ಕಾರಣವಿದೆ. ಇತ್ತೀಚೆಗಷ್ಟೇ ಜಡೇಜಾ ತಂದೆ ಹಾಗೂ ತಂಗಿ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದರು. ಇನ್ನು ಜಡೇಜಾ ಪತ್ನಿ ಬಿಜಿಪೆ ಸೇರಿಕೊಂಡಿದ್ದರು. ಹೀಗಾಗಿ ರವೀಂದ್ರರ ಜಡೇಜಾ ಬೆಂಬಲ ಯಾರಿಗೆ ಅನ್ನೋ ಪ್ರಶ್ನೆ ಹುಟ್ಟಿಕೊಂಡಿತು. ಇದಕ್ಕೆ ಜಡೇಜಾ ಟ್ವೀಟ್ ಮೂಲಕ ಉತ್ತರಿಸಿದ್ದರು.
 

click me!