PKL6:ಬೆಂಗಳೂರು ಬುಲ್ಸ್ ತಂಡದಲ್ಲಿರುವ ಕನ್ನಡಿಗರೆಷ್ಟು?

First Published Jun 1, 2018, 12:00 PM IST
Highlights

ಪ್ರೊ ಕಬಡ್ಡಿ ಹರಾಜಿನಲ್ಲಿದ್ದ ಓಟ್ಟು 19 ಕರ್ನಾಟಕ ಆಟಗಾರರ ಪೈಕಿ 10 ಆಟಗಾರರು ವಿವಿಧ ತಂಡಗಳಿಗೆ ಬಿಕರಿಯಾಗಿದೆ. ಅದರಲ್ಲೂ ಬೆಂಗಳೂರು ಬುಲ್ಸ್ ತಂಡದಲ್ಲಿ ಓಟ್ಟು ನಾಲ್ವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ.

ಬೆಂಗಳೂರು(ಜೂನ್.1): ಕಳೆದ 5 ಪ್ರೊ ಕಬಡ್ಡಿ ಆವೃತ್ತಿಗಳಲ್ಲಿ ಬೆಂಗಳೂರು ಬುಲ್ಸ್ ತಂಡದಲ್ಲಿ ಕನ್ನಡಿಗರ ಕೊರತೆ ಎದ್ದುಕಾಣುತ್ತಿತ್ತು. ಆದರೆ ಈ ಬಾರಿ ಆ ಕೊರಗು ನೀಗಿದೆ. ರಾಜ್ಯದ ಹಿರಿಯ ಹಾಗೂ ಜನಪ್ರೀಯ ಕೋಚ್ ಬಿಸಿ ರಮೇಶ್ ಬೆಂಗಳೂರು ತಂಡದ ಮಾರ್ಗದರ್ಶಕರಾಗಿ ಸೇರಿಕೊಳ್ಳುತ್ತಿದ್ದಂತೆ, ತಂಡದಲ್ಲಿನ ಕನ್ನಡಿಗರ ಸಂಖ್ಯೆ ನಾಲ್ಕಕಕ್ಕೇರಿದೆ. ರೈಡರ್ ಹರೀಶ್ ನಾಯ್ಕರ್ ಅವರನ್ನ ರೀಟೈನ್ ಮಾಡಿಕೊಳ್ಳಲಾಗಿದೆ. ಢಿಪೆಂಡರ್‌ಗಳಾದ ಜವಾಹರ್ ವಿವೇಕ್ ಬಿ, ಆರ್ ನಿತೇಶ್, ರೈಡರ್ 
ಆನಂದ್ ಬೆಂಗಳೂರು ಬುಲ್ಸ್ ಸೇರಿಕೊಂಡ ಕನ್ನಡಿಗರಾಗಿದ್ದಾರೆ.

PKL6: ಹರಾಜಿನ ಬಳಿಕ ಪ್ರೊಕಬಡ್ಡಿ ಲೀಗ್‌ನ 12 ತಂಡಗಳು ಹೇಗಿದೆ ಗೊತ್ತಾ?

ಈ ಬಾರಿಯ ಪ್ರೊ ಕಬಡ್ಡಿ ಹರಾಜಿನಲ್ಲಿ ಒಟ್ಟು 19 ಕರ್ನಾಟಕ ಆಟಗಾರರ ಪೈಕಿ 10 ಕನ್ನಡಿಗರು ವಿವಿಧ ತಂಡ ಸೇರಿಕೊಂಡಿದ್ದಾರೆ. ಈ ಮೂಲಕ ಕರ್ನಾಟಕ ಪ್ರತಿಭೆಗಳಿಗೆ ಉತ್ತಮ ಮನ್ನಣೆ ದೊರಕಿದೆ. ಅಕ್ಟೋಬರ್ 19 ರಿಂದ ಪ್ರೊ ಕಬಡ್ಡಿ 6ನೇ ಆವೃತ್ತಿ ಅದ್ಧೂರಿಯಾಗಿ ಆರಂಭಗೊಳ್ಳಲಿದೆ. 12 ತಂಡಗಳು 13 ವಾರಗಳ ಕಾಲ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. 
 

click me!