
ಜೈಪುರ[ಸೆ.22]: ಪ್ರೊ ಕಬಡ್ಡಿ 7ನೇ ಆವೃತ್ತಿಯ ಪ್ಲೇ ಆಫ್ ಹಂತ ಹತ್ತಿರವಾಗುತ್ತಿದ್ದಂತೆ ತಂಡಗಳ ನಡುವೆ ಪೈಪೋಟಿ ಹೆಚ್ಚುತ್ತಿದೆ. ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ 42-22 ಅಂಕಗಳಲ್ಲಿ ಗೆದ್ದ ಯು.ಪಿ.ಯೋಧಾ, ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿತು. ಸತತ 2 ಸೋಲು ಕಂಡಿರುವ ಬೆಂಗಳೂರು ಬುಲ್ಸ್ 5ನೇ ಸ್ಥಾನಕ್ಕೆ ಕುಸಿದಿದೆ.
ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಬೆಳ್ಳಿ ಗದ್ದ ಮೊದಲ ಭಾರತೀಯ ಅಮಿತ್!
ಶ್ರೀಕಾಂತ್ ಜಾಧವ್ (8 ರೈಡ್ ಅಂಕ) ಹಾಗೂ ಸುಮಿತ್ (5 ಟ್ಯಾಕಲ್ ಅಂಕ)ರ ಆಷರ್ಕಕ ಪ್ರದರ್ಶನ, ಯೋಧಾ ಗೆಲುವಿಗೆ ನೆರವಾಯಿತು. ಮೊದಲಾರ್ಧದಲ್ಲಿ 13-14 ರಿಂದ ಹಿನ್ನಡೆ ಅನುಭವಿಸಿದ್ದ ಯೋಧಾ, ದ್ವಿತೀಯಾರ್ಧದ ಆಟದಲ್ಲಿ ಅದ್ಭುತ ಆಟವಾಡಿ ಎದುರಾಳಿಗೆ ಆಘಾತ ನೀಡಿತು.
ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ಪ್ರಕಟ!
ತಾರಾ ಆಟಗಾರರಿಂದ ಕೂಡಿರುವ ತಲೈವಾಸ್ಗಿದು ಈ ಆವೃತ್ತಿಯಲ್ಲಿ 12ನೇ ಸೋಲಾಗಿದ್ದು, 30 ಅಂಕಗಳೊಂದಿಗೆ ತಂಡ ಕೊನೆ ಸ್ಥಾನದಲ್ಲಿ ಮುಂದುವರಿದಿದೆ. ತಂಡ ಈಗಾಗಲೇ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿದೆ.
ಜೈಪುರ-ಗುಜರಾತ್ ಪಂದ್ಯ ಟೈನಲ್ಲಿ ಅಂತ್ಯ
ತವರಿನ ಚರಣದ ಮೊದಲ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್, ಗುಜರಾತ್ ಫಾರ್ಚೂನ್‌ಜೈಂಟ್ಸ್ ವಿರುದ್ಧ 28-28 ರಲ್ಲಿ ಟೈ ಸಾಧಿಸಿತು. ಇದು ಟೂರ್ನಿಯಲ್ಲಿ ಟೈ ಆದ 11ನೇ ಪಂದ್ಯ. ಮೊದಲಾರ್ಧದಲ್ಲಿ 15-10ರಿಂದ ಮುಂದಿದ್ದ ಜೈಪುರ, ದ್ವಿತೀಯಾರ್ಧದಲ್ಲಿ ಮಂಕಾಯಿತು. ಜೈಪುರ 7ನೇ ಸ್ಥಾನದಲ್ಲಿದ್ದು, ಗುಜರಾತ್ 10ನೇ ಸ್ಥಾನದಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.