AIBA ವಿಶ್ವ ಬಾಕ್ಸಿಂಗ್‌ನಲ್ಲಿ ಭಾರತದ ಅಮಿತ್ ಪಂಘಲ್ ದಾಖಲೆ ಬರೆದಿದ್ದಾರೆ. ಇದೇ ಮೊದಲ ಬಾರಿಗೆ ಭಾರತ ವಿಶ್ವ ಬಾಕ್ಸಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದೆ.
ರಷ್ಯಾ(ಸೆ.21): ರಷ್ಯಾದಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಭಾರತದ ಅಮಿತ್ ಪಂಘಲ್ ಬೆಳ್ಳಿ ಪದಕ ಗೆದ್ದಿದ್ದಾರೆ. ಫೈನಲ್ ಪಂದ್ಯದಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್, ಉಝೆಬೆಕಿಸ್ತಾನದ ಶಾಖೋಬಿದಿನ್ ಝೊಯಿರೊವ್ ವಿರುದ್ದ 0-5 ಅಂಕಗಳ ಅಂತರದಲ್ಲಿ ಸೋಲು ಅನುಭವಿಸಿದರು. ಬೆಳ್ಳಿ ಪದಕ ಗೆದ್ದುಕೊಂಡ ಅಮಿತ್, ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಅನ್ನೋ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ: ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಫೈನಲ್; ದಾಖಲೆ ಬರೆದ ಅಮಿತ್ ಪಂಘಲ್!
ಅದ್ಭುತ ಹೋರಾಟದ ಮೂಲಕ ಅಮಿತ್ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಫೈನಲ್ ತಲುಪಿದ್ದರು. ಇದುವರೆಗೂ ಯಾವ ಭಾರತೀಯ ಪುರುಷ ಬಾಕ್ಸರ್ AIBA ವಿಶ್ವ ಬಾಕ್ಸಿಂಗ್‌ನಲ್ಲಿ ಫೈನಲ್ ತಲುಪಿರಲಿಲ್ಲ. ಆದರೆ ಅಮಿತ್ ಫೈನಲ್ ಪ್ರವೇಶಿಸಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಭಾರತ ಕಂಚಿನ ಪದಕ ಗೆದ್ದ ಸಾಧನೆ ಮಾಡಿದೆ. ವಿಜೇಂದರ್ ಸಿಂಗ್(2009), ವಿಕಾಸ್ ಕ್ರಿಷ್ಣ(2011), ಶಿವ ತಾಪಾ(2015) ಹಾಗೂ ಗೌರವ್ ಬಿಧೂರಿ(2017) ಕಂಚಿನ ಪದಕ ಗೆದ್ದಿದ್ದಾರೆ. ಆದರೆ ಅಮಿತ್ ಪಂಘಲ್ ಬೆಳ್ಳಿ ಪದಕ ಗೆಲ್ಲೋ ಮೂಲಕ ಇತಿಹಾಸ ಬರೆದಿದ್ದಾರೆ.