ಭಾರತ-ದ.ಆಫ್ರಿಕಾ ಪಂದ್ಯ : ಬಿಎಂಟಿಸಿ ಹೆಚ್ಚುವರಿ ಬಸ್‌

Published : Sep 22, 2019, 07:53 AM IST
ಭಾರತ-ದ.ಆಫ್ರಿಕಾ ಪಂದ್ಯ : ಬಿಎಂಟಿಸಿ ಹೆಚ್ಚುವರಿ ಬಸ್‌

ಸಾರಾಂಶ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ (ಸೆ.22)ರಂದು ಸಂಜೆ 7ಕ್ಕೆ ನಿಗದಿಗೊಂಡಿರುವ ಭಾರತ-ದಕ್ಷಿಣ ಆಫ್ರಿಕಾ ಟಿ-20 ಕ್ರಿಕೆಟ್‌ ಪಂದ್ಯದ ವೀಕ್ಷಣೆಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಟಿಸಿ ಹೆಚ್ಚುವರಿ ಬಸ್‌ ಕಾರ್ಯಾಚರಣೆಗೊಳಿಲು ಮುಂದಾಗಿದೆ.

ಬೆಂಗಳೂರು (ಸೆ.22):  ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ (ಸೆ.22)ರಂದು ಸಂಜೆ 7ಕ್ಕೆ ನಿಗದಿಗೊಂಡಿರುವ ಭಾರತ-ದಕ್ಷಿಣ ಆಫ್ರಿಕಾ ಟಿ-20 ಕ್ರಿಕೆಟ್‌ ಪಂದ್ಯದ ವೀಕ್ಷಣೆಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಟಿಸಿ ಹೆಚ್ಚುವರಿ ಬಸ್‌ ಕಾರ್ಯಾಚರಣೆಗೊಳಿಲು ಮುಂದಾಗಿದೆ.

ರಾತ್ರಿ 11.30ಕ್ಕೆ ಪಂದ್ಯ ಅಂತ್ಯಗೊಂಡ ಬಳಿಕ ಸ್ಟೇಡಿಯಂನಿಂದ ಮನೆಗೆ ತೆರಳಲು ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಹೆಚ್ಚುವರಿ ಬಸ್‌ ಕಾರ್ಯಾಚರಿಸಲಾಗುವುದು. ಶಿವಾಜಿನಗರ- ಕಾಡುಗೋಡಿ ಬಸ್‌ ನಿಲ್ದಾಣ, ಮೆಯೋಹಾಲ್‌- ಸರ್ಜಾಪುರ, ಬ್ರಿಗೇಡ್‌ ರಸ್ತೆ- ಎಲೆಕ್ಟ್ರಾನಿಕ್‌ ಸಿಟಿ, ಬನ್ನೇರುಘಟ್ಟನ್ಯಾಷನಲ್‌ ಪಾರ್ಕ್, ಶಾಂತಿನಗರ ಬಸ್‌ ನಿಲ್ದಾಣ- ಕೆಂಗೇರಿ ಕೆಎಚ್‌ಬಿ ಕ್ವಾಟ್ರ್ರಸ್‌, ಕೆಂಪೇಗೌಡ ಬಸ್‌ ನಿಲ್ದಾಣ- ಜನಪ್ರಿಯ ಲೇಔಟ್‌, ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ- ನೆಲಮಂಗಲ, ಯಲಹಂಕ 5ನೇ ಹಂತ, ಬಾಗಲೂರು, ಕೆ.ಆರ್‌.ಮಾರುಕಟ್ಟೆ- ಆರ್‌.ಕೆ.ಹೆಗಡೆ ನಗರ ಮಾರ್ಗದಲ್ಲಿ ಈ ಬಸ್‌ಗಳು ಸಂಚರಿಸಲಿವೆ ಎಂದು ಬಿಎಂಟಿಸಿ ತಿಳಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!