ಲತೀಫ್ ಮೇಲೆ ಆಜೀವ ನಿಷೇಧ ಹೇರಲು ಮುಂದಾದ ಪಿಸಿಬಿ?

By Suvarna Web DeskFirst Published Nov 2, 2017, 5:01 PM IST
Highlights

ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಏಕೈಕ ಆಟಗಾರ ಎಂಬ ಕುಖ್ಯಾತಿಗೆ  ಸಲೀಮ್ ಮಲ್ಲಿಕ್ ಪಾತ್ರರಾಗಿದ್ದಾರೆ.

ಕರಾಚಿ(ನ.02): ಪಾಕಿಸ್ತಾನ ಸೂಪರ್ ಲೀಗ್ ಟಿ20 ಟೂರ್ನಿಯಲ್ಲಿ ಕಳ್ಳಾಟ ನಡೆಸಿ ಸಿಕ್ಕಬಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅವಕೃಪೆಗೆ ಪಾತ್ರವಾಗಿರುವ ಖಾಲಿದ್ ಲತೀಫ್‌'ರನ್ನು 5 ವರ್ಷಗಳ ಕಾಲ ನಿಷೇಧಿಸಿರುವು ಸಾಲದು, ಬದಲಾಗಿ ಲತೀಫ್ ಮೇಲೆ ಆಜೀವ ನಿಷೇಧ ಹೇರಲು ನ್ಯಾಯಾಲಯದ ಅನುಮತಿ ಕೋರಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕಾನೂನು ಸಲಹೆಗಾರ ತಫಾಜುಲ್ ರಿಜ್ವಿ, ನ್ಯಾಯಾಲಯದಲ್ಲಿ ವಿಶೇಷ ಅರ್ಜಿ ಸಲ್ಲಿಸಿದ್ದು ‘5 ವರ್ಷದ ನಿಷೇಧ ನಮಗೆ ಸಮಾಧಾನ ತಂದಿಲ್ಲ. ನಿಯಮ ಉಲ್ಲಂಘನೆ ಮಾಡುವವರಿಗೆ ಈ ಪ್ರಕರಣದಲ್ಲಿ ಪಿಸಿಬಿ ತೆಗೆದುಕೊಂಡ ನಿರ್ಧಾರ, ಎಚ್ಚರಿಕೆಯಾಗಬೇಕು’ ಎಂದು ಹೇಳಿದ್ದಾರೆ.

Latest Videos

ಸ್ಪಾಟ್ ಫಿಕ್ಸಿಂಗ್ ಕುರಿತು ತ್ರಿ ಸದಸ್ಯರನ್ನೊಳಗೊಂಡ ಭ್ರಷ್ಟಾಚಾರ ನಿಗ್ರಹ ತನಿಖಾ ತಂಡ ಲತೀಫ್ ಹಾಗೂ ಬ್ಯಾಟ್ಸ್'ಮನ್ ಶಾರ್ಜೀಲ್ ಖಾನ್ ಹಗರಣದಲ್ಲಿ ಭಾಗಿಯಾಗಿರುವುದನ್ನು ಪತ್ತೆ ಹಚ್ಚಿತ್ತು.

ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಏಕೈಕ ಆಟಗಾರ ಎಂಬ ಕುಖ್ಯಾತಿಗೆ  ಸಲೀಮ್ ಮಲ್ಲಿಕ್ ಪಾತ್ರರಾಗಿದ್ದಾರೆ.

click me!