ಬ್ರೇಕ್ ಟೈಮಲ್ಲಿ ನೀರಿನ ಬದಲು ಆಕ್ಸಿಜನ್; ಟಿಬೆಟಿಯನ್ ತಂಡದಿಂದ ಹೊಸ ಇತಿಹಾಸ

By Suvarna Web DeskFirst Published Nov 2, 2017, 1:50 PM IST
Highlights

ಎತ್ತರದ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಇರುತ್ತದೆ. ಇಲ್ಲಿ ಜೋರು ಚಟುವಟಿಕೆ ನಡೆಸಿದರೆ ವಾಂತಿ, ತಲೆ ಸುತ್ತು ಬರುತ್ತದೆ. ಹಾಗಾಗಿ, ಈ ಫುಟ್ಬಾಲ್ ಮೈದಾನದ ಬೌಂಡರಿ ಗೆರೆಯುದ್ದಕ್ಕೂ ಆಕ್ಸಿಜನ್ ಕ್ಯಾನಿಸ್ಟರ್'ಗಳನ್ನು ಇಡಲಾಗುತ್ತದೆ. ಪಂದ್ಯದಲ್ಲಿ ಪ್ರತೀ 15 ನಿಮಿಷಕ್ಕೊಮೆ ಕೊಡುವ ಬ್ರೇಕ್ ವೇಳೆ ಆಟಗಾರರು ಕ್ಯಾನಿಸ್ಟರ್'ಗಳ ಮೂಲಕ ಆಕ್ಸಿಜನ್ ಸೇವಿಸುತ್ತಾರೆ.

ನವದೆಹಲಿ(ನ. 02): ಯಾವುದೇ ಕ್ರೀಡೆಯಲ್ಲಿ ಬ್ರೇಕ್ ವೇಳೆ ಆಟಗಾರರಿಗೆ ಪಾನೀಯವನ್ನೋ, ತಿಂಡಿಯನ್ನೋ ಕೊಡುತ್ತಾರೆ. ಆದರೆ, ಟಿಬೆಟ್'ನ ಲ್ಹಾಸಾ ನಗರದಲ್ಲಿ ಫುಟ್ಬಾಲ್ ಪಂದ್ಯದಲ್ಲಿ ವಿರಾಮದ ವೇಳೆ ಆಟಗಾರರಿಗೆ ಆಕ್ಸಿಜನ್ ಕೊಡಲಾಗುತ್ತದೆ. ಲಾಸಾ ಚೆಂಗ್'ಟೋ ಫುಟ್ಬಾಲ್ ಕ್ಲಬ್ ತಂಡವು ಚೀನಾದ ಪ್ರೊಫೆಷನಲ್ ಲೀಗ್'ಗೆ ಅರ್ಹತೆ ಪಡೆಯುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಅದರೊಂದಿಗೆ ಲಾಸಾದ ಆಕ್ಸಿಜನ್ ಪೂರೈಕೆಯೂ ವಿಶ್ವದ ಗಮನ ಸೆಳೆದಿದೆ.

ಲಾಸಾ ನಗರದಲ್ಲಿ ಫುಟ್ಬಾಲ್ ಆಟಗಾರರಿಗೆ ಆಮ್ಲಜನಕ ಕೊಡಲು ಕಾರಣಗಳೂ ಇವೆ. ಇಲ್ಲಿರುವ  ಫುಟ್ಬಾಲ್ ಸ್ಟೇಡಿಯಂ ಸಮುದ್ರಮಟ್ಟದಿಂದ 12 ಸಾವಿರ ಅಡಿ ಎತ್ತರದಲ್ಲಿದೆ. ಇದು ಅತೀ ಎತ್ತರದ ಫುಟ್ಬಾಲ್ ಸ್ಟೇಡಿಯಂಗಳಲ್ಲೊಂದೆನಿಸಿದೆ. ಇಷ್ಟು ಎತ್ತರದ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಇರುತ್ತದೆ. ಇಲ್ಲಿ ಜೋರು ಚಟುವಟಿಕೆ ನಡೆಸಿದರೆ ವಾಂತಿ, ತಲೆ ಸುತ್ತು ಬರುತ್ತದೆ. ಹಾಗಾಗಿ, ಈ ಫುಟ್ಬಾಲ್ ಮೈದಾನದ ಬೌಂಡರಿ ಗೆರೆಯುದ್ದಕ್ಕೂ ಆಕ್ಸಿಜನ್ ಕ್ಯಾನಿಸ್ಟರ್'ಗಳನ್ನು ಇಡಲಾಗುತ್ತದೆ. ಪಂದ್ಯದಲ್ಲಿ ಪ್ರತೀ 15 ನಿಮಿಷಕ್ಕೊಮೆ ಕೊಡುವ ಬ್ರೇಕ್ ವೇಳೆ ಆಟಗಾರರು ಕ್ಯಾನಿಸ್ಟರ್'ಗಳ ಮೂಲಕ ಆಕ್ಸಿಜನ್ ಸೇವಿಸುತ್ತಾರೆ.

ಆದರೆ, ಲಾಸಾದಲ್ಲಿ ಚೀನಾದ ವೃತ್ತಿಪರ ಟೂರ್ನಿಯ ಪಂದ್ಯಗಳನ್ನು ಆಯೋಜಿಸಲು ಆ ದೇಶದ ಫುಟ್ಬಾಲ್ ಸಂಸ್ಥೆ ಹಿಂದೇಟು ಹಾಕಿದೆ. ಆಟಗಾರರಿಗೆ ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಬಹುದು ಎಂದು ಕಾರಣ ಕೊಡಲಾಗಿದೆ.

ರಾಷ್ಟ್ರಮಟ್ಟದ ಟೂರ್ನಿಗೆ ಅರ್ಹತೆ ಪಡೆದಿರುವ ಲಾಸಾ ಚೆಂಗ್'ಟೋ ಕ್ಲಬ್'ನ ಪಂದ್ಯಗಳನ್ನು ಇದೇ ಕಾರಣಕ್ಕೆ ಬೇರೆ ನಗರಗಳಲ್ಲಿ ನಡೆಸಲಾಗುತ್ತಿದೆ.

click me!