
ದುಬೈ[ಫೆ.04] 2021ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗಳಿಗೆ ಭಾರತ ಆತಿಥ್ಯ ವಹಿಸಲಿದೆ. ಈ ಟೂರ್ನಿಗಳಿಗೆ ಪಾಕಿಸ್ತಾನ ಆಟಗಾರರು, ಅಧಿಕಾರಿಗಳಿಗೆ ವೀಸಾ ನೀಡುವ ಕುರಿತು ಪಿಸಿಬಿ ಅಧ್ಯಕ್ಷ ಎಹ್ಸಾನ್ ಮಣಿ ವಿವರಣೆ ಕೋರಿದರು.
ಗುಡ್ ನ್ಯೂಸ್: 2022ರ ಏಷ್ಯನ್ ಗೇಮ್ಸ್’ನಲ್ಲಿ ಕ್ರಿಕೆಟ್ ಸೇರ್ಪಡೆ
ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್‌ಗೆ ಎಹ್ಸಾನ್ ಪತ್ರ ಬರೆದಿದ್ದು, ವೀಸಾ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಎಹ್ಸಾನ್ ಜತೆ ಮಾತುಕತೆ ನಡೆಸಿರುವ ಶಶಾಂಕ್, ‘ನಿಯಮದ ಪ್ರಕಾರ ಪಾಲ್ಗೊಳ್ಳುವ ಎಲ್ಲಾ ರಾಷ್ಟ್ರಗಳ ಆಟಗಾರರಿಗೆ ವೀಸಾ ವ್ಯವಸ್ಥೆ ಕಲ್ಪಿಸುವುದು ಆತಿಥ್ಯ ವಹಿಸುವ ಕ್ರಿಕೆಟ್ ಮಂಡಳಿಯ ಜವಾಬ್ದಾರಿ. ಟೂರ್ನಿ ಹತ್ತಿರವಾಗುತ್ತಿದ್ದಂತೆ ವೀಸಾ ಪ್ರಕ್ರಿಯೆ ಆರಂಭಗೊಳ್ಳಲಿದೆ. ಯಾವುದೇ ತಂಡಕ್ಕೆ ವೀಸಾ ಸಿಗದಿದ್ದರೆ, ಅದಕ್ಕೆ ಜವಾಬ್ದಾರಿಯಾದ ಕ್ರಿಕೆಟ್ ಮಂಡಳಿಯು ಜಾಗತಿಕ ಮಟ್ಟದ ಟೂರ್ನಿಗಳ ಆತಿಥ್ಯ ಹಕ್ಕನ್ನು ಕಳೆದುಕೊಳ್ಳಲಿದೆ’ ಎಂದು ವಿವರಿಸಿದ್ದಾರೆ ಎನ್ನಲಾಗಿದೆ. ಈ ಹೇಳಿಕೆಯ ಮೂಲಕ ಐಸಿಸಿ, ಬಿಸಿಸಿಐ ಮೇಲೆ ಪರೋಕ್ಷವಾಗಿ ಒತ್ತಡ ಹೇರಲು ಆರಂಭಿಸಿದೆ.
ಧೋನಿ ಹೇಳ್ದಂಗೆ ಕೇಳಿದ್ರೆ ಯಶಸ್ಸು ಖಚಿತ: ಜಾಧವ್
ಕಳೆದ ತಿಂಗಳು ಕಾಶ್ಮೀರದ ಪುಲ್ವಾಮಾದದಲ್ಲಿ ನಡೆದ ಆತ್ಮಾಹುತಿ ದಾಳಿಯನ್ನು ಖಂಡಿಸಿ, ಪಾಕಿಸ್ತಾನವನ್ನು ಕ್ರಿಕೆಟ್‌ನಿಂದಲೇ ದೂರವಿಡಬೇಕು ಎಂದು ಎಲ್ಲಾ ಕ್ರಿಕೆಟ್ ಆಡುವ ರಾಷ್ಟ್ರಗಳಿಗೆ ಮನವಿ ಮಾಡಿ, ಈ ವಿಚಾರದಲ್ಲಿ ಕ್ರಮಕ್ಕೆ ಕೋರಿ ಐಸಿಸಿಗೆ ಬಿಸಿಸಿಐ ಪತ್ರ ಬರೆದಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.