ಪಾಕಿಸ್ತಾನ ಕ್ರಿಕೆಟಿಗರನ್ನು ಐಪಿಎಲ್‌ಗೆ ಪರಿಗಣಿಸಲು ಪಿಸಿಬಿ ಹರಸಾಹಸ!

By Web DeskFirst Published Dec 22, 2018, 8:56 PM IST
Highlights

2008ರ ಮುಂಬೈ ದಾಳಿ ಬಳಿಕ ಪಾಕಿಸ್ತಾನ ಕ್ರಿಕೆಟಿಗರು ಭಾರತದ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿಲ್ಲ. ಇಷ್ಟೇ ಅಲ್ಲ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಕೂಡ ರದ್ದಾಯಿತು. ಇದೀಗ ಮತ್ತೆ ಐಪಿಎಲ್ ಟೂರ್ನಿಯಲ್ಲಿ ಪಾಕ್ ಕ್ರಿಕೆಟಿಗರನ್ನ ಪರಿಗಣಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಯತ್ನ ಶುರುಮಾಡಿದೆ.

ಕರಾಚಿ(ಡಿ.22): ಪಾಕಿಸ್ತಾನ ಕ್ರಿಕೆಟಿಗರನ್ನ ಭಾರತದ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಟೂರ್ನಿಗೆ ಪರಗಣಿಸುವಂತಾಗಬೇಕು ಎಂದು  ಪಾಕಿಸ್ತಾನ ಕ್ರಿಕೆಟ್ ಮಂಡಳಿಯ(ಪಿಸಿಬಿ) ನೂತನ ವ್ಯವಸ್ಥಾಪಕ ನಿರ್ದೇಶಕ ವಾಸಿಮ್ ಖಾನ್ ಅಭಿಪ್ರಾಯ ಪಟ್ಟಿದ್ದಾರೆ. 

ಇದನ್ನೂ ಓದಿ: ಮಗುವಿನ ಮೊದಲ ಫೋಟೋ ಬಹಿರಂಗ ಪಡಿಸಿದ ಸಾನಿಯಾ ಮಿರ್ಜಾ

ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ನಿಂತು ಹೋಗಿದೆ. ಉಭಯ ದೇಶಗಳನ್ನ ನಡುವಿನ ಸಂಬಂಧ ಹಳಸಿದೆ. ಆದರೆ ಇವೆಲ್ಲವನ್ನೂ ಮಾತುಕತೆಯಿಂದ ಬಗೆಹರಿಸಲು ಸಾಧ್ಯವಿದೆ. ಈ ಜವಾಬ್ದಾರಿ ನನ್ನ ಮೇಲಿದೆ. ಪಿಸಿಬಿಯ ವ್ಯವಸ್ಥಾಪಕ ನಿರ್ದೇಶಕನಾಗಿ ನಾನು ಪ್ರಾಮಾಣಿಕವಾಗಿ ಉಭಯ ದೇಶಗಳ ಬಾಂಧವ್ಯ ವೃದ್ದಿಗೆ ಶ್ರಮಿಸುತ್ತೇನೆ ಎಂದಿದ್ದಾರೆ. 

ಇದನ್ನೂ ಓದಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಬಿಸಿಸಿಐನಿಂದ ಮತ್ತೊಂದು ಶಾಕ್!

ಐಪಿಎಲ್ ಟೂರ್ನಿಗಳಲ್ಲೂ ಪಾಕಿಸ್ತಾನ ಕ್ರಿಕೆಟಿಗರನ್ನ ಸ್ವಾಗತಿಸುವಂತಾಗಬೇಕು ಎಂದು ವಾಸಿಮ್ ಖಾನ್ ಹೇಳಿದ್ದಾರೆ. 2008ರ ಐಪಿಎಲ್ ಟೂರ್ನಿಯಲ್ಲಿ ಪಾಕ್ ಕ್ರಿಕೆಟಿಗರು ಪಾಲ್ಗೊಂಡಿದ್ದರು. ಆದರೆ 2008ರ ಮುಂಬೈ ದಾಳಿಯಿಂದಾಗಿ ಬಳಿಕ ಪಾಕಿಸ್ತಾನ ಕ್ರಿಕೆಟಿಗರಿಗೆ ಐಪಿಎಲ್ ಟೂರ್ನಿಯಿಂದ ನಿರ್ಬಂಧ ಹೇರಲಾಯಿತು.

click me!