ಅಮೇರಿಕಾದ ಕಾರಿನ ನಂಬರ್ ಪ್ಲೇಟ್ ಮೇಲೆ ಧೋನಿ ಹೆಸರು!

Published : Dec 22, 2018, 07:03 PM IST
ಅಮೇರಿಕಾದ ಕಾರಿನ ನಂಬರ್ ಪ್ಲೇಟ್ ಮೇಲೆ ಧೋನಿ ಹೆಸರು!

ಸಾರಾಂಶ

ಎಂ.ಎಸ್.ಧೋನಿಗೆ ವಿಶ್ವದೆಲ್ಲಡೆ ಅಭಿಮಾನಿಗಳಿದ್ದಾರೆ. ಇದೀಗ ಅಮೇರಿಕಾದ ಧೋನಿ ಅಭಿಮಾನಿಯೊರ್ವ ತನ್ನ ಕಾರಿನ ನಂಬರ್ ಪ್ಲೇಟ್ ಮೇಲೆ ಧೋನಿ ಹೆಸರನ್ನ ಹಾಕಿಸಿ ವೈರಲ್ ಆಗಿದ್ದಾನೆ. ಧೋನಿ ಸ್ಪೆಷಲ್ ಅಭಿಮಾನಿ ಕುರಿತು ಡೀಟೇಲ್ಸ್ ಇಲ್ಲಿದೆ.  

ಲಾಸ್ಎಂಜಲೀಸ್(ಡಿ.22): ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಸದ್ಯ ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಬಳಿಕ ಸುದೀರ್ಘ ವಿಶ್ರಾಂತಿಯಲ್ಲಿರುವ ಧೋನಿಗೆ ವಿಶ್ವದೆಲ್ಲಡೆ ಅಪಾರ ಅಭಿಮಾನಿಗಳಿದ್ದಾರೆ. ಇದೀಗ ಅಮೇರಿಕಾದ ಅಭಿಮಾನಿಯೊರ್ವ ತನ್ನ ಕಾರಿನ ನಂಬರ್ ಪ್ಲೇಟ್ ಮೇಲೆ ಧೋನಿ ಹೆಸರನ್ನ ಬರೆಯಿಸಿಕೊಂಡು ಸುದ್ದಿಯಾಗಿದ್ದಾರೆ.

ಇದನ್ನೂ ಓದಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ಅಚ್ಚರಿ ಆಯ್ಕೆ

ಅಮೇರಿಕಾದ ಲಾಸ್ ಎಂಜಲೀಸ್‌ನಲ್ಲಿರುವ ಅಭಿಮಾನಿಯೊರ್ವ ತನ್ನ ಕಾರಿನ ನಂಬರ್ ಪ್ಲೇಟ್ ಮೇಲೆ ಎಂ.ಎಸ್.ಧೋನಿ ಎಂದು ಬರೆಯಿಸಿಕೊಂಡಿದ್ದಾರೆ. ಹಿಂಭಾಗದ ನಂಬರ್ ಪ್ಲೇಟ್ ಮೇಲೆ ಧೋನಿ ಹೆಸರು ಸ್ಪಷ್ಟವಾಗಿ ಕಾಣುತ್ತಿದ್ದರೆ, ಕಾರಿನ ನಂಬರ್ ಕಾಣುತ್ತಲೇ ಇಲ್ಲ. ಆ ಮಟ್ಟಿಗೆ ಧೋನಿ ಹೆಸರನ್ನ ಈತ ನಂಬರ್ ಪ್ಲೇಟ್‌ನಲ್ಲಿ ಬರೆಯಿಸಿಕೊಂಡಿದ್ದಾರೆ.

 

 

ಧೋನಿ ಅಭಿಮಾನಿಕುರಿತು ಮೈನಾಕ್ ಮೊಂಡಲ್ ಟ್ವಿಟರ್ ಮೂಲಕ ಬೆಳಕು ಚೆಲ್ಲಿದ್ದಾರೆ. ಇದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಧೀಕೃತ ಟ್ವಿಟರ್ ಖಾತೆ ರಿಪ್ಲೈ ಮಾಡಿದೆ. ಲೆಜೆಂಡರರಿ ಸ್ವಪ್ನ ಸುಂದರಿ ಲಾಸ್ ಎಂಜಲೀಸ್‌ನಲ್ಲಿದ್ದಾಳೆ ಎಂದು ಪ್ರತಿಕ್ರಿಯಿಸಿದೆ.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ20: ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ!
ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ