ಐಸಿಸಿ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡ ಪ್ರಕಟಗೊಂಡಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಪಾಕ್ ವೇಗಿಗೆ ಕೊಕ್ ನೀಡಿರುವ ಪಾಕ್ ಆಯ್ಕೆ ಸಮಿತಿ, ಕೇವಲ 2 ಏಕದಿನ ಪಂದ್ಯ ಆಡಿರುವ ಯುವ ಕ್ರಿಕೆಟಿಗನಿಗೆ ಅವಕಾಶ ನೀಡಿದೆ. ಇಲ್ಲಿದೆ ಸಂಪೂರ್ಣ ತಂಡದ ವಿವರ.
ಇಸ್ಲಮಾಬಾದ್(ಏ.18): ಪ್ರತಿಷ್ಠಿತ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡ ಪ್ರಕಟಗೊಂಡಿದೆ. ಸರ್ಫರಾಜ್ ಅಹಮ್ಮದ್ ನಾಯಕತ್ವದ 15 ಸದಸ್ಯರ ತಂಡ ಪ್ರಕಟಿಸಿರುವ ಪಾಕ್ ಕ್ರಿಕೆಟ್ ಮಂಡಳಿ, ಸ್ಟಾರ್ ವೇಗಿ ಮೊಹಮ್ದಮ್ ಅಮೀರ್‌ಗೆ ಕೊಕ್ ನೀಡಲಾಗಿದೆ. 2016ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಮಾರಕ ದಾಳಿ ನಡೆಸಿ ಪಾಕ್ ಗೆಲುವಿಗೆ ಕಾರಣರಾಗಿದ್ದ ಮೊಹಮ್ಮದ್ ಅಮೀರ್ ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ; ಕನ್ನಡಿಗನಿಗೆ ಚಾನ್ಸ್
undefined
ಇನ್ಜಮಾಮ್ ಉಲ್ ಹಕ್ ನೇತೃತ್ವದ ಆಯ್ಕೆ ಸಮಿತಿ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಹಿರಿಯ ಕ್ರಿಕೆಟಿಗ ಶೋಯಿಬ್ ಮಲಿಕ್ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದಂತೆ, ಯುವ ಶೈನ್ ಶಾ ಅಫ್ರಿದಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಶತಕ ಸಿಡಿಸಿ ಆಯ್ಕೆ ಸಮಿತಿ ಗಮನಸೆಳೆದಿದ್ದ ಅಬಿದ್ ಆಲಿ, ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮಾರ್ಚ್ ತಿಂಗಳ 29 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಡೆಬ್ಯೂ ಮಾಡಿದ್ದ, ಅಬಿದ್ ಆಲಿ ಕೇವಲ 20 ದಿನಗಳ ಒಳಗೆ ವಿಶ್ವಕಪ್ ಟೂರ್ನಿಗೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ -ಸ್ಟೇನ್, ಆಮ್ಲಾಗೆ ಸ್ಥಾನ!
ಬಾಬರ್ ಅಜಮ್, ಫಕರ್ ಝಮಾನ್, ಹ್ಯಾರಿಸ್ ಸೊಹೈಲ್, ಇಮಾಮ್ ಉಲ್ ಹಕ್, ಮೊಹಮ್ಮಗ್ ಹಫೀಜ್ ಬ್ಯಾಟಿಂಗ್ ಬಲ ತುಂಬಲಿದ್ದಾರೆ. ಬೌಲಿಂಗ್‌ನಲ್ಲಿ ಶದಬ್ ಖಾನ್, ಜುನೈದ್ ಖಾನ್, ಇಮಾದ್ ವಾಸಿಮ್, ಮೊಹಮ್ಮದ್ ಹಸೀನ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಟೂರ್ನಿಗೆ ಶ್ರೀಲಂಕಾ ತಂಡ ಪ್ರಕಟ- ಮಾಜಿ ನಾಯಕರಿಗೆ ಸ್ಥಾನ!
ಮೇ.31 ರಂದು ಟ್ರೆಂಟ್‌ಬ್ರಿಡ್ಜ್‌ನಲ್ಲಿ ಪಾಕಿಸ್ತಾನ ತಂಡ, ವೆಸ್ಟ್ ಇಂಡೀಸ್ ತಂಡವನ್ನು ಎದುರಿಸುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಇನ್ನು ಜೂನ್ 16 ರಂದು ಒಲ್ಡ್ ಟ್ರಾಫೋರ್ಡ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ತಂಡವನ್ನು ಎದುರಿಸಲಿದೆ.
BREAKING: Pakistan have announced their squad. 🇵🇰 pic.twitter.com/NBlvAc2vbo
— Cricket World Cup (@cricketworldcup)