ಕೋಚ್ ಸೆಲೆಕ್ಟ್ ಮಾಡ್ತೀವಿ, ಮೊದ್ಲು ನಮ್ಗೆ ಸಂಬಳ ಕೊಡಿ: ಸಚಿನ್, ಗಂಗೂಲಿ, ಲಕ್ಷ್ಮಣ್ ಬೇಡಿಕೆ

By Suvarna Web DeskFirst Published Jun 11, 2017, 6:27 PM IST
Highlights

ಬಿಸಿಸಿಐ ಸಮಿತಿಗಳ ಸದಸ್ಯರಿಗೆ ಸಂಬಳ ನೀಡುವ ಪದ್ಧತಿ ಇಲ್ಲ. ಅವರಿಗೆ ಗೌರವ ಧನವನ್ನಷ್ಟೇ ನೀಡುವ ಪರಂಪರೆ ಇದೆ. ಸಭೆ ಇದ್ದಾಗ ಆ ದಿನದಂದು ಸದಸ್ಯರಿಗೆ ಉಚಿತವಾಗಿ ವಸತಿ, ದಿನಭತ್ಯೆ ಮತ್ತು ಕಾರಿನ ಸೌಲಭ್ಯ ಒದಗಿಸಲಾಗುತ್ತದೆ. ಸದಸ್ಯರಿಗೆ ಕ್ರಿಕೆಟ್ ಸಲಹಾ ಸಮಿತಿಯು ಬಿಸಿಸಿಐನ ಉಪ-ಸಮಿತಿಯಾಗಿದ್ದು, ಇದಕ್ಕೂ ಕೂಡ ಇವೇ ಸೌಲಭ್ಯಗಳನ್ನು ಒದಗಿಸಲಾಗಿದೆ.

ನವದೆಹಲಿ(ಜೂನ್ 11): ಭಾರತ ಕ್ರಿಕೆಟ್ ತಂಡಕ್ಕೆ ಕೋಚ್ ಆಯ್ಕೆ ಮಾಡಲು ಬಿಸಿಸಿಐ ಸಿಕ್ಕಾಪಟ್ಟೆ ತಲೆಬಿಸಿ ಮಾಡಿಕೊಂಡಿದೆ. ಕೋಚ್ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರಾದ ಮೂವರು ಕ್ರಿಕೆಟ್ ತ್ರಿಮೂರ್ತಿಗಳು ಬಿಸಿಸಿಐಗೆ ಕೈಕೊಡುವ ಸೂಚನೆ ಇದೆ. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಅವರು ತಮಗೆ ಸಂಬಳ ಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ. ಸಂಬಳ ಕೊಟ್ಟರೆ ತಾವು ಕೋಚ್ ಆಯ್ಕೆಯ ಪ್ರಕ್ರಿಯೆಯಲ್ಲಿ ಭಾಗಿಯಾಗುವುದಾಗಿ ಈ ತ್ರಿಮೂರ್ತಿಗಳು ಹೇಳಿದ್ದಾರೆ.

ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಸದಸ್ಯರಾಗಿ ಈ ಮೂವರು ಕ್ರಿಕೆಟ್ ಲೆಜೆಂಡ್'ಗಳಿಗೆ ಯಾವುದೇ ಸಂಬಳವಿಲ್ಲ. ಗೌರವಧನವಷ್ಟೇ ಅವರಿಗೆ ಸಿಗುತ್ತದೆ. ತಮ್ಮ ಸೇವೆಗಳಿಗೆ ಗೌರವಧನ ಬೇಕಾಗಿಲ್ಲ ಎಂದು ಬಿಸಿಸಿಐನ ಸಿಇಒ ರಾಹುಲ್ ಜೋಹ್ರಿಗೆ ಸ್ಪಷ್ಟ ಸಂದೇಶದಲ್ಲಿ ತಿಳಿಸಿದ್ದಾರೆ. ಗುರುವಾರ ನಡೆದ ಸಮಿತಿಯ ಮೊದಲ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ. ಸಿಎಸಿಯ ಈ ನಿರ್ಧಾರವನ್ನು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಅವರು ಸುಪ್ರೀಂಕೋರ್ಟ್ ನೇಮಿತ ಆಡಳಿತಗಾರರ ಸಮಿತಿ(ಸಿಒಎ)ಗೆ ಈ ವಿಚಾರವನ್ನು ತಿಳಿಸುವ ಸಾಧ್ಯತೆ ಇದೆ. ಆ ಬಳಿಕ, ಆಡಳಿತಗಾರರ ಸಮಿತಿಯು ಸಚಿನ್, ಲಕ್ಷ್ಮಣ್ ಮತ್ತು ಗಂಗೂಲಿಗೆ ಸಂಬಳ ಫಿಕ್ಸ್ ಮಾಡಬೇಕೋ ಬೇಡವೋ ಎಂದು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.

ಸಂಬಳ ಸಾಧ್ಯವಿಲ್ಲ?
ಬಿಸಿಸಿಐ ಸಮಿತಿಗಳ ಸದಸ್ಯರಿಗೆ ಸಂಬಳ ನೀಡುವ ಪದ್ಧತಿ ಇಲ್ಲ. ಅವರಿಗೆ ಗೌರವ ಧನವನ್ನಷ್ಟೇ ನೀಡುವ ಪರಂಪರೆ ಇದೆ. ಸಭೆ ಇದ್ದಾಗ ಆ ದಿನದಂದು ಸದಸ್ಯರಿಗೆ ಉಚಿತವಾಗಿ ವಸತಿ, ದಿನಭತ್ಯೆ ಮತ್ತು ಕಾರಿನ ಸೌಲಭ್ಯ ಒದಗಿಸಲಾಗುತ್ತದೆ. ಸದಸ್ಯರಿಗೆ ಕ್ರಿಕೆಟ್ ಸಲಹಾ ಸಮಿತಿಯು ಬಿಸಿಸಿಐನ ಉಪ-ಸಮಿತಿಯಾಗಿದ್ದು, ಇದಕ್ಕೂ ಕೂಡ ಇವೇ ಸೌಲಭ್ಯಗಳನ್ನು ಒದಗಿಸಲಾಗಿದೆ. ಹೀಗಾಗಿ, ಈ ಸಮಿತಿ ಸದಸ್ಯರಿಗೆ ಸಂಬಳದ ಬದಲು ಗೌರವ ಧನವನ್ನಷ್ಟೇ ನಿಗದಿ ಮಾಡಲಾಗಿದೆ.

ಈ ಹಿಂದೆಯೂ ಕ್ರಿಕೆಟ್ ಸಲಹಾ ಸಮಿತಿಯಿಂದ ಸಂಬಳಕ್ಕಾಗಿ ಬೇಡಿಕೆ ಹೋಗಿತ್ತು. ಆಗೆಲ್ಲಾ ಅವರ ಬೇಡಿಕೆಯನ್ನು ಬಿಸಿಸಿಐ ತಿರಸ್ಕರಿಸಿದ್ದು ಇಲ್ಲಿ ಗಮನಾರ್ಹ. ಆದರೆ, ಸುಪ್ರೀಂಕೋರ್ಟ್ ನೇಮಿತ ಆಡಳಿತಗಾರರ ಸಮಿತಿಯು ಇಲ್ಲಿ ವಿಭಿನ್ನ ನಿಲುವು ತೆಗೆದುಕೊಳ್ಳುತ್ತಾ ಎಂಬುದನ್ನು ಕಾದುನೋಡಬೇಕು.

click me!