ಕ್ರಿಕೆಟ್'ನಲ್ಲಿ ಮತ್ತೆ ಹಿಸ್ಟ್ರಿ ರಿಪೀಟ್ಸ್..! ಇಲ್ಲಿವೆ ಕೆಲವು ಸ್ಯಾಂಪಲ್

By Suvarna Web DeskFirst Published Jun 11, 2017, 5:08 PM IST
Highlights

ಕ್ರಿಕೆಟ್'ನಲ್ಲಿ ಇತಿಹಾಸ ಮರುಕಳಿಸಿದ ಕೆಲವೊಂದು ಪಂದ್ಯಗಳ ಮೆಲುಕು ನಿಮ್ಮ ಮುಂದೆ:

ಕ್ರಿಕೆಟ್ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಕ್ರೀಡೆ. ಇಲ್ಲಿ ಅನಿರೀಕ್ಷಿತ ಫಲಿತಾಂಶಗಳಿಗೇನು ಕಮ್ಮಿಯಿಲ್ಲ. ಇನ್ನೂ ಕೆಲವೊಮ್ಮೆ ಕಾಕಾತಾಳೀಯಗಳು ಸಂಭವಿಸಿ ನಮ್ಮನ್ನೇ ಅಚ್ಚರಿಗೆ ನೂಕುತ್ತವೆ.

ಕ್ರಿಕೆಟ್ ಫೈನಲ್ ಪಂದ್ಯಗಳ ಏಳು-ಬೀಳುಗಳ ಕಥೆಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ತಂಡಗಳು ಮತ್ತೊಮ್ಮೆ ಕಾಕತಾಳೀಯ ಪಂದ್ಯಕ್ಕೆ ಸಾಕ್ಷಿಯಾದವು.

ಕ್ರಿಕೆಟ್'ನಲ್ಲಿ ಇತಿಹಾಸ ಮರುಕಳಿಸಿದ ಕೆಲವೊಂದು ಪಂದ್ಯಗಳ ಮೆಲುಕು ನಿಮ್ಮ ಮುಂದೆ:

* 2003ರ ವಿಶ್ವಕಪ್ ರನ್ನರ್ ಅಪ್ ಟೀಂ ಇಂಡಿಯಾ 2007ರಲ್ಲಿ ಲೀಗ್ ಹಂತದಲ್ಲೇ ಔಟ್

*2007ರ ವಿಶ್ವಕಪ್'ನಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್'ನಲ್ಲಿ ಕ್ರಮವಾಗಿ ಚಾಂಪಿಯನ್ ಹಾಗೂ ರನ್ನರ್ ಅಫ್ ಎನಿಸಿಕೊಂಡವು.

*2007ರ ವಿಶ್ವಕಪ್'ನಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದಿದ್ದ ಟೀಂ ಇಂಡಿಯಾ, 2011ರಲ್ಲಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಮೆರೆದಾಡಿತು.

* ಈಗ ಅದಕ್ಕೆ ಹೊಸ ಸೇರ್ಪಡೆಯೆಂದರೆ 2015ರಲ್ಲಿ ವಿಶ್ವಕಪ್ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ ಹಾಗೂ ರನ್ನರ್ ಅಫ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ನ್ಯೂಜಿಲ್ಯಾಂಡ್ ತಂಡಗಳು ಕೇವಲ ಎರಡು ವರ್ಷ ಕಳೆಯುವಷ್ಟರಲ್ಲೇ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದು ಮತ್ತೊಂದು ಕಾಕತಾಳೀಯ ಫಲಿತಾಂಶಕ್ಕೆ ಸಾಕ್ಷಿಯಾಯದವು.    

click me!