ಡೆಲ್ಲಿಗೆ ಮತ್ತೇ ಸೋಲು: ಪಾಟ್ನಾ ಗೆಲುವಿನ ರುವಾರಿ ಪ್ರದೀಪ್ ನರ್ವಾಲ್

By Suvarna Web DeskFirst Published Sep 26, 2017, 11:18 PM IST
Highlights

ಪಂದ್ಯದ 5ನೇ ನಿಮಿಷದಲ್ಲಿ ಮೊದಲ ಬಾರಿಗೆ ದಬಾಂಗ್ ಡೆಲ್ಲಿಯನ್ನು ಆಲೌಟ್ ಮಾಡಿದ ಪ್ರದೀಪ್ ನರ್ವಾಲ್ ಪಡೆ 0-10 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು. ಮೊದಲಾರ್ಧ ಮುಕ್ತಾಯದ ವೇಳಗೆ ಪಾಟ್ನಾ ಪೈರೇಟ್ಸ್ 13-18 ಅಂಕಗಳ ಮುನ್ನಡೆ ಸಾಧಿಸಿತ್ತು.

ನವದೆಹಲಿ(ಸೆ.26): ತವರಿನಲ್ಲಿ ಜಯದ ಕನವರಿಕೆಯಲ್ಲಿರುವ ದಬಾಂಗ್ ಡೆಲ್ಲಿಗೆ ಮತ್ತೊಮ್ಮೆ ನಿರಾಸೆ ಎದುರಾಗಿದೆ. ಪಾಟ್ನಾ ಪೈರೇಟ್ಸ್ ವಿರುದ್ಧ 36-34 ಅಂಕಗಳಿಂದ ಸೋಲು ಅನುಭವಿಸಿತು. ಈ ಮೂಲಕ ಮೂಲಕ ಡೆಲ್ಲಿ ತವರಿನಲ್ಲಿ ಸತತ 4ನೇ ಸೋಲಿಗೆ ಸಾಕ್ಷಿಯಾಯಿತು.

ಪಂದ್ಯದ 5ನೇ ನಿಮಿಷದಲ್ಲಿ ಮೊದಲ ಬಾರಿಗೆ ದಬಾಂಗ್ ಡೆಲ್ಲಿಯನ್ನು ಆಲೌಟ್ ಮಾಡಿದ ಪ್ರದೀಪ್ ನರ್ವಾಲ್ ಪಡೆ 0-10 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು. ಮೊದಲಾರ್ಧ ಮುಕ್ತಾಯದ ವೇಳಗೆ ಪಾಟ್ನಾ ಪೈರೇಟ್ಸ್ 13-18 ಅಂಕಗಳ ಮುನ್ನಡೆ ಸಾಧಿಸಿತ್ತು.

5 ಅಂಕಗಳ ಹಿನ್ನಡೆಯೊಂದಿಗೆ ದ್ವಿತಿಯಾರ್ಧ ಆರಂಭಿಸಿದ ದಬಾಂಗ್ ಡೆಲ್ಲಿ ಪ್ರದೀಪ್ ನರ್ವಾಲ್ ಪಡೆಗೆ ದಿಟ್ಟ ಪ್ರತಿರೋಧವನ್ನೇ ನೀಡಿತು. ಉತ್ತರಾರ್ಧದ 7ನೇ ನಿಮಿಷದಲ್ಲಿ ಪಾಟ್ನಾ ತಂಡವನ್ನು ಆಲೌಟ್ ಮಾಡುವಲ್ಲಿ ಮಿರಾಜ್ ಶೇಖ್ ಪಡೆ ಯಶಸ್ವಿಯಾಯಿತು. ಒಂದು ಹಂತದಲ್ಲಿ 28-28 ಅಂಕಗಳ ಸಮಬಲ ಸಾಧಿಸಿದ್ದ ದಬಾಂಗ್ ಡೆಲ್ಲಿ ತವರಿನ ಪ್ರೇಕ್ಷಕರಿಗೆ ಮೊದಲ ಜಯದ ಆಸೆ ತೋರಿಸಿತ್ತು. ಆದರೆ ಕೊನೆ ಕೆಲ ನಿಮಿಷಗಳಿದ್ದಾಗ ಮತ್ತೊಮ್ಮೆ ಆಲೌಟ್ ಆದ ದಬಾಂಗ್ ಡೆಲ್ಲಿ ಮತ್ತೆ ಸೋಲು ಕಂಡಿತು.

ಪಾಟ್ನಾ ಪರ 14 ರೈಡಿಂಗ್  ಅಂಕ ಕಲೆ ಹಾಕಿದ ನಾಯಕ ಪ್ರದೀಪ್ ನರ್ವಾಲ್ ಗೆಲುವಿನ ರೂವಾರಿ ಎನಿಸಿದರು.

ಟರ್ನಿಂಗ್ ಪಾಯಿಂಟ್:  ಪಂದ್ಯ ಮುಕ್ತಾಯಕ್ಕೆ ಕೊನೆ 2 ನಿಮಿಷಗಳಿದ್ದಾಗ 31-31 ಅಂಕಗಳ ಸಮಬಲ ಸಾಧಿಸಿದ್ದಾಗ ಮತ್ತೆ ಡೆಲ್ಲಿ ಆಲೌಟ್ ಆಗಿದ್ದು ಪಾಟ್ನಾ ಗೆಲುವಿಗೆ ಸಹಕಾರಿಯಾಯಿತು.

ಶ್ರೇಷ್ಠ ರೈಡರ್: ಪ್ರದೀಪ್ ನರ್ವಾಲ್(14 ಅಂಕ)

ಶ್ರೇಷ್ಠ ಡಿಫೆಂಡರ್: ಜೈದೀಪ್(6 ಅಂಕ)

 

click me!