* ಪ್ಯಾರಾಲಿಂಪಿಯನ್ ಅವನಿ ಲೇಖರಾ ಹೆಸರಿಗೆ ಮತ್ತೊಂದು ವಿಶ್ವದಾಖಲೆ ಸೇರ್ಪಡೆ
* ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಅವನಿ
* 2024 ಪ್ಯಾರಿಸ್ ಪ್ಯಾರಾ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡ ಅವನಿ
ನವದೆಹಲಿ(ಜೂ.08): ಟೋಕಿಯೋ ಪ್ಯಾರಾಲಿಂಪಿಕ್ಸ್ (Tokyo Paralympics) ಚಾಂಪಿಯನ್ ಅವನಿ ಲೇಖರಾ (Avani Lekhara) ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಮಂಗಳವಾರ ಮಹಿಳೆಯರ 10 ಮೀ. ಏರ್ ರೈಫಲ್‌ನಲ್ಲಿ ಅವರು 250.6 ಅಂಕ ಗಳಿಸಿ ತನ್ನದೇ ಹೆಸರಲ್ಲಿದ್ದ ಟೋಕಿಯೋದಲ್ಲಿ ನಿರ್ಮಿಸಿದ್ದ 249.6 ಅಂಕಗಳ ವಿಶ್ವ ದಾಖಲೆಯನ್ನು ಮುರಿದರು. ಅಲ್ಲದೇ 2024 ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡರು. ಒಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಕಂಚು ಗೆದ್ದಿದ್ದ ಅವರು ಪ್ಯಾರಾಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದರು.
ಖೇಲೋ ಇಂಡಿಯಾ: 3 ಪದಕ ಬಾಚಿದ ಕರ್ನಾಟಕ
ಪಂಚಕುಲ: 2ನೇ ಆವೃತ್ತಿಯ ಖೇಲೋ ಇಂಡಿಯಾ (Khelo India) ಕಿರಿಯರ ಕ್ರೀಡಾಕೂಟದಲ್ಲಿ ಕರ್ನಾಟಕ ಮಂಗಳವಾರ 3 ಪದಕಗಳನ್ನು ಬಾಚಿಕೊಂಡಿದೆ. ಬಾಲಕಿಯರ ವಿಭಾಗದಲ್ಲಿ 4*100 ರಿಲೇ ಸ್ಪರ್ಧೆಯಲ್ಲಿ ರಾಜ್ಯದ ತಂಡ ಬೆಳ್ಳಿ ಪದಕ ಗೆದ್ದುಕೊಂಡಿತು. ಬಾಲಕರ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಸನೀತ್ ಕಂಚಿನ ಪದಕ ತಮ್ಮದಾಗಿಸಿಕೊಂಡರೆ, ಬಾಲಕು ಕುಸ್ತಿಯಲ್ಲಿ 51 ಕೆ.ಜಿ. ವಿಭಾಗದ ಫ್ರೀಸ್ಟೈಲ್‌ನಲ್ಲಿ ಪರಶುರಾಮ್ ಕಂಚು ಪಡೆದರು.
ಇದರೊಂದಿಗೆ ರಾಜ್ಯ ತಂಡ 1 ಚಿನ್ನ, 1 ಬೆಳ್ಳಿ ಹಾಗೂ 3 ಕಂಚಿನ ಪದಕದೊಂದಿಗೆ ಪದಕ ಪಟ್ಟಿಯಲ್ಲಿ 21ನೇ ಸ್ಥಾನದಲ್ಲಿದೆ. ಇನ್ನು, ಮಹಾರಾಷ್ಟ್ರದ 16ರ ಸಂಯುಕ್ತಾ ಜಿಮ್ನಾಸ್ಟಿಕ್‌ನ ಎಲ್ಲಾ 5 ಚಿನ್ನದ ಪದಕ ಗೆದ್ದು ಗಮನ ಸೆಳೆದರು. ಅಂಡಮಾನ್ ನಿಕೋಬಾರ್‌ನ ಸೈಕ್ಲಿಂಗ್‌ನಲ್ಲಿ 3ನೇ ಚಿನ್ನ ಗೆದ್ದರು. ಸದ್ಯ 24 ಚಿನ್ನ ಸೇರಿ 67 ಪದಕದೊಂದಿಗೆ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದ್ದು, 23 ಚಿನ್ನ ಸೇರಿ 73 ಪದಕ ಪಡೆದಿರುವ ಹರಾರಯಣ 2ನೇ ಸ್ಥಾನದಲ್ಲಿದೆ.
ನಾರ್ವೆ ಚೆಸ್: 2ನೇ ಸ್ಥಾನಕ್ಕೆ ಕುಸಿದ ವಿಶ್ವನಾಥನ್ ಆನಂದ್
ಸ್ಟಾವೆಂಜರ್(ನಾರ್ವೆ): 5 ಬಾರಿ ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಅವರು ನಾರ್ವೆ ಚೆಸ್ ಟೂರ್ನಿಯ ಕ್ಲಾಸಿಕಲ್ ವಿಭಾಗದ 6ನೇ ಸುತ್ತಿನಲ್ಲಿ ನೆದರ್ಲೆಂಡ್‌್ಸನ ಅನೀಶ್ ಗಿರಿ ವಿರುದ್ಧದ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದಾರೆ. ಬುಧವಾರ ನಡೆದ ಪಂದ್ಯ 35 ನಡೆಗಳ ಬಳಿಕ ಡ್ರಾಗೊಂಡಿತು. ಇದರೊಂದಿಗೆ 11.5 ಅಂಕಗಳನ್ನು ಹೊಂದಿರುವ ಆನಂದ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.
Ironman Triathlon: ಟ್ರಯಾಥ್ಲಾನ್ ಸಾಧಿಸಿದ ಕನ್ನಡಿಗ ಶ್ರೇಯಸ್ ಹೊಸೂರು
ಸೋಮವಾರ ಆನಂದ್ ವಿರುದ್ಧ ಸೋತಿದ್ದ ವಿಶ್ವ ನಂ.1 ನಾರ್ವೆಯ ಮ್ಯಾಗ್ಸನ್ ಕಾಲ್‌ರ್‍ಸನ್ ಅವರು 6ನೇ ಸುತ್ತಿನಲ್ಲಿ ಅಜರ್‌ಬೈಜಾನ್‌ನ ಶಕ್ರಿಯಾರ್ ವಿರುದ್ಧ ಗೆದ್ದಿದ್ದು, 12.5 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಮೊದಲ 3 ಸುತ್ತುಗಳಲ್ಲಿ ಗೆದ್ದಿದ್ದ ಆನಂದ್ 4ನೇ ಸುತ್ತಿನಲ್ಲಿ ಸೋಲು ಕಂಡಿದ್ದರು. ಟೂರ್ನಿಯಲ್ಲಿ ಒಟ್ಟು 9 ಸುತ್ತಿನ ಪಂದ್ಯಗಳು ನಡೆಯಲಿವೆ.
ಎಎಫ್‌ಸಿ ಅರ್ಹತೆ: ಇಂದು ಭಾರತ-ಕಾಂಬೋಡಿಯಾ ಪಂದ್ಯ
ಕೋಲ್ಕತಾ: ಎಎಫ್‌ಸಿ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಯ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಭಾರತ ತಂಡ ಬುಧವಾರ ಕಾಂಬೋಡಿಯಾ ವಿರುದ್ಧ ಸೆಣಸಾಡಲಿದೆ. ಸುನಿಲ್ ಚೆಟ್ರಿ ನೇತೃತ್ವದ ಭಾರತ ಟೂರ್ನಿಯಲ್ಲಿ ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಬಳಿಕ ಆಫ್ಘಾನಿಸ್ತಾನ, ಹಾಂಕಾಂಗ್ ಸವಾಲನ್ನು ಎದುರಿಸಲಿದೆ. ಭಾರತ ಫಿಫಾ ರಾರಯಂಕಿಂಗ್‌ನಲ್ಲಿ ಸದ್ಯ 106ನೇ ಸ್ಥಾನದಲ್ಲಿದ್ದು, ತನಗಿಂತ ಕೆಳಗಿನ ಸ್ಥಾನದಲ್ಲಿರುವ ಕಾಂಬೊಡಿಯಾ(171) ವಿರುದ್ಧ ಗೆದ್ದು ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ಎಎಫ್‌ಸಿ ಏಷ್ಯನ್ ಕಪ್ 2023ರ ಕೊನೆಯಲ್ಲಿ ಅಥವಾ 2024ರ ಆರಂಭದಲ್ಲಿ ನಡೆಯಲಿದೆ.