ಚಾಂಪಿಯನ್ಸ್ ಟ್ರೋಫಿ ಗೆದ್ದ ಪಾಕ್' ತಂಡಕ್ಕೆ ಸಿಕ್ತು ಬಂಪರ್

By Suvarna Web DeskFirst Published Jun 21, 2017, 4:57 PM IST
Highlights

ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಜಯಿಸಿದ ಪಾಕಿಸ್ತಾನ ಆಟಗಾರರಿಗೆ ತವರು ದೇಶದಲ್ಲಿ ಅದ್ದೂರಿ ಸ್ವಾಗತದ ಜೊತೆಗೆ ಅಭಿನಂದನೆಯ ಸುರಿಮಳೆ. ಸ್ವತಃ ಪ್ರಧಾನಿ ನವಾಜ್ ಷರೀಫ್ ಸೇರಿದಂತೆ ಹಲವು ಗಣ್ಯಾತಿಗಣ್ಯರು ತಂಡದ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರಾಚಿ(ಜೂ.21): ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಗೆದ್ದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಐಸಿಸಿ ಬಹುಮಾನದ ಜೊತೆಗೆ ಬಂಪರ್ ಬಹುಮಾನವು ದೊರಕಿದೆ. ವಿಜೇತ ತಂಡದ ಪ್ರತಿಯೊಬ್ಬ ಸದಸ್ಯರಿಗೂ 1 ಕೋಟಿ ರೂ.ನಗದು ಬಹುಮಾನವನ್ನು ಪಾಕ್ ಪ್ರಧಾನಿ ನವಾಜ್ ಷರೀಫ್ ಘೋಷಿಸಿದ್ದಾರೆ.

ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಜಯಿಸಿದ ಪಾಕಿಸ್ತಾನ ಆಟಗಾರರಿಗೆ ತವರು ದೇಶದಲ್ಲಿ ಅದ್ದೂರಿ ಸ್ವಾಗತದ ಜೊತೆಗೆ ಅಭಿನಂದನೆಯ ಸುರಿಮಳೆ. ಸ್ವತಃ ಪ್ರಧಾನಿ ನವಾಜ್ ಷರೀಫ್ ಸೇರಿದಂತೆ ಹಲವು ಗಣ್ಯಾತಿಗಣ್ಯರು ತಂಡದ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್'ನ ಕೆನ್ನಿಂಗ್'ಟನ್ ಓವಲ್'ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ತಂಡ 50 ಓವರ್'ಗಳಲ್ಲಿ 338 ರನ್'ಗಳ ಬೃಹತ್ ರನ್ ಕಲೆ ಹಾಕಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ 33.3 ಓವರ್'ಗಳಲ್ಲಿ 158 ರನ್'ಗಳಿಗೆ ಆಲ್'ಔಟ್ ಆಗಿ 180 ರನ್'ಗಳ ಭಾರಿ ಅಂತರದಲ್ಲಿ ಸೋಲನ್ನು ಅನುಭವಿಸಿತ್ತು.

click me!