ಕುಂಬ್ಳೆ ರಾಜಿನಾಮೆಗೆ ಕಾರಣವಾಯ್ತಾ ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಆ ಘಟನೆ?

By Suvarna Web DeskFirst Published Jun 21, 2017, 3:16 PM IST
Highlights

ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 180 ರನ್'ಗಳ ಹೀನಾಯ ಸೋಲಿನ ಬಳಿಕ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪಾಕ್ ತಂಡವನ್ನು ಹೊಗಳಿದ್ದಾರಾದರೂ, ಕುಂಬ್ಳೆ ಮಾತ್ರ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಧ್ಯಮಗಳಲ್ಲಿ ಪ್ರಸಾರವಾದ ಮಾಹಿತಿ ಅನ್ವಯ ಫೈನಲ್ ಪಂದ್ಯದ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಟೀಂ ಇಂಡಿಯಾದ ಬಹುತೇಕ ಆಟಗಾರರ ಕ್ಲಾಸ್ ತೆಗೆದುಕೊಂಡ ಕುಂಬ್ಳೆ ಫೈನಲ್'ನಲ್ಲಿ ನಿರೀಕ್ಷೆಗಿಂತಲೂ ಕೆಳ ಮಟ್ಟದಲ್ಲಿ ಆಡಿದ್ದೀರೆಂದು ತರಾಟೆಗೆ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ. ಇದೇ ಕುಂಬ್ಳೆಯ ರಾಜಿನಾಮೆಗೆ ಕೊನೆಯ ಕಾರಣವಾಯ್ತು ಎನ್ನಲಾಗಿದೆ.

ಮುಂಬೈ(ಜೂ.21): ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 180 ರನ್'ಗಳ ಹೀನಾಯ ಸೋಲಿನ ಬಳಿಕ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪಾಕ್ ತಂಡವನ್ನು ಹೊಗಳಿದ್ದಾರಾದರೂ, ಕುಂಬ್ಳೆ ಮಾತ್ರ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಧ್ಯಮಗಳಲ್ಲಿ ಪ್ರಸಾರವಾದ ಮಾಹಿತಿ ಅನ್ವಯ ಫೈನಲ್ ಪಂದ್ಯದ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಟೀಂ ಇಂಡಿಯಾದ ಬಹುತೇಕ ಆಟಗಾರರ ಕ್ಲಾಸ್ ತೆಗೆದುಕೊಂಡ ಕುಂಬ್ಳೆ ಫೈನಲ್'ನಲ್ಲಿ ನಿರೀಕ್ಷೆಗಿಂತಲೂ ಕೆಳ ಮಟ್ಟದಲ್ಲಿ ಆಡಿದ್ದೀರೆಂದು ತರಾಟೆಗೆ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ. ಇದೇ ಕುಂಬ್ಳೆಯ ರಾಜಿನಾಮೆಗೆ ಕೊನೆಯ ಕಾರಣವಾಯ್ತು ಎನ್ನಲಾಗಿದೆ.

ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಘಟನೆಯ ವಿವರ

ಎನ್'ಡಿಟಿವಿ ಈ ಕುರಿತಾಗಿ ವರದಿ ಮಾಡಿದ್ದು, 'ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾದ ಸೋಲಿನಿಂದಲೇ ಕೋಪಗೊಂಡಿದ್ದರು. ಇತ್ತ ಈ ಸೋಲಿನ ಬಳಿಕವೂ ಆಟಗಾರರ ಮುಖದಲ್ಲಿ ಕಿಂಚಿತ್ತೂ ನೋವಿರಲಿಲ್ಲ ಅಲ್ಲದೇ ಮೈದಾನದಲ್ಲಿ ಪಾಕ್ ಆಟಗಾರರೊಂದಿಗೆ ನಗುತ್ತಲೇ ಮಾತನಾಡುತ್ತಿದ್ದರು ಇದರಿಂದ ಕುಂಬ್ಳೆಯ ಕೋಪ ಹೆಚ್ಚಾಗಿದೆ. ಹೀಗಾಗಿ ಆಟಗಾರರು ಡ್ರೆಸ್ಸಿಂಗ್ ರೂಂಗೆ ಆಗಮಿಸುತ್ತಿದ್ದಂತೆಯೇ ಬೌಲರ್ಸ್'ಗಳನ್ನು ತರಾಟಗೆ ತೆಗೆದುಕೊಂಡಿದ್ದು, ಇಂತಹ ಪ್ರದರ್ಶನದಿಂದ ಟೀಂ ಇಂಡಿಯಾದಲ್ಲಿ ಉಳಿದುಕೊಳ್ಳುವುದು ಕಷ್ಟ ಎಂದಿದ್ದಾರೆ. ಕುಂಬ್ಳೆಯ ಈ ಕಹಿ ಮಾತುಗಳು ಕೊಹ್ಲಿಗೆ ಇಷ್ಟವಾಗಲಿಲ್ಲ ಯಾಕೆಂದರೆ ಟೀಂ ಇಂಡಿಯಾದ ಆಟಗಾರರ ಪ್ರಯತ್ನ ತುಂಬಾ ಒಳ್ಳೆಯದಿತ್ತು. ಆದರೆ ಪಾಕ್ ನಮಗಿಂತಲೂ ಒಂದು ಹೆಜ್ಜೆ ಮುಂದಿತ್ತು ಎಂಬುವುದು ಕೊಹ್ಲಿಯ ಮಾತಾಗಿತ್ತು. ಕೊಹ್ಲಿಯ ಮಾತನ್ನು ಕುಂಬ್ಳೆ ಒಪ್ಪಿಕೊಳ್ಳಲು ತಯಾರಿರಲಿಲ್ಲ.

ಮೊದಲೇ ಕೊಹ್ಲಿ ಹಾಗೂ ಕುಂಬ್ಳೆ ನಡುವೆ ಮನಸ್ತಾಪವಿತ್ತು. ಆದರೆ ಈ ಘಟನೆಯಿಂದ ಇವರ ನಡುವಿದ್ದ ಕೊನೆಯ ಕೊಂಡಿ ಕಳಚಿತು. ಹೀಗಗಿ ಮರುದಿನ ಬಿಸಿಸಿಐ ಅಧಿಕಾರಿಗಳನ್ನು ಭೇಟಿಯಾದ ಕುಂಬ್ಳೆ ಕೊಹ್ಲಿ ತನ್ನನ್ನು ತಂಡದ ಕೋಚ್ ಆಗಿ ನೋಡಲು ಇಷ್ಟಪಡುವುದಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ ಅಲ್ಲದೇ ಕೋಚ್ ರಾಜಿನಾಮೆ ನೀಡುವ ದೃಢ ನಿರ್ಧಾರವನ್ನೂ ಕೈಗೊಂಡಿರುವುದಾಗಿ' ಮಾಧ್ಯಮ ತಿಳಿಸಿದೆ.

ಇನ್ನು ರಾಜಿನಾಮೆ ನೀಡಿರುವ ಕುಂಬ್ಳೆ ತಾನು ಬಿಸಿಸಿಐಗೆ ಬರೆದ ಪತ್ರವನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇವರು ತಮ್ಮ ಪತ್ರದಲ್ಲಿ ತನ್ನ ಹಾಗೂ ನಾಯಕನ ನಡವಿನ ಮನಸ್ತಾಪಗಳು ಬಗೆಹರಿಯದಿರುವ ಕುರಿತಾಗಿ ಬರೆದುಕೊಂಡಿದ್ದರು.

ಕೃಪೆ: NDTv

 

click me!