
ಹರಾರೆ[ಜು.08]: ಕ್ರಿಕೆಟ್’ನಲ್ಲಿ ಪ್ರತಿದಿನ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತಲೇ ಇರುತ್ತವೆ. ಕೆಲವೊಂದು ದಾಖಲೆಗಳು ಸ್ಮರಣಿಯವಾದರೆ, ಮತ್ತೆ ಕೆಲವು ದಾಖಲೆಗಳು ಕುಖ್ಯಾತಿಗೆ ಕಾರಣವಾಗುತ್ತವೆ. ಅಂತಹ ಪಟ್ಟಿಗೆ ಇಂದು ಮತ್ತೊಂದು ದಾಖಲೆ ಸೇರ್ಪಡೆಗೊಂಡಿದೆ.
ಹೌದು, ಇಂದು ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಟಿ20 ಪಂದ್ಯದಲ್ಲಿ ಪಾಕ್’ನ ಆರಂಭಿಕ ಬ್ಯಾಟ್ಸ್’ಮನ್ ಸಾಹೀಬ್’ಜಾದ ಫರ್ಹಾನ್ ಶೂನ್ಯ ಸುತ್ತಿ ಅಪರೂಪದ ದಾಖಲೆ ಬರೆದಿದ್ದಾರೆ. ಅರೇ ಅದರಲ್ಲೇನು ವಿಶೇಷ ಅಂತಿರಾ..? ಇಲ್ಲಿದೆ ನೋಡಿ ಅದರ ಅಸಲಿಯತ್ತು..
ಇಂದು ಪಾಕಿಸ್ತಾನ ಪರ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಸಾಹೀಬ್’ಜಾದ ಫರ್ಹಾನ್ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯದಲ್ಲಿಯೇ ತಾವೆದುರಿಸಿದ ಮೊದಲ ಎಸೆತದಲ್ಲೇ ಸ್ಟಂಪ್’ಔಟ್ ಆಗುವ ಮೂಲಕ ಶೂನ್ಯ ಸುತ್ತಿದ ಮೊದಲ ಬ್ಯಾಟ್ಸ್’ಮನ್ ಎನ್ನುವ ಅಪರೂಪದ ಕುಖ್ಯಾತಿಯ ದಾಖಲೆಯನ್ನು ಬರೆದಿದ್ದಾರೆ.
ಆಸ್ಟ್ರೇಲಿಯಾ, ಪಾಕಿಸ್ತಾನ ಹಾಗೂ ಜಿಂಬಾಬ್ವೆ ನಡುವಿನ ತ್ರಿಕೋನ ಟಿ20 ಸರಣಿಯಲ್ಲಿ ಇಂದು ಆಸೀಸ್ ಹಾಗೂ ಪಾಕ್ ತಂಡಗಳು ಕಾದಾಡುತ್ತಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 8 ವಿಕೆಟ್ ಕಳೆದುಕೊಂಡು 183 ರನ್ ಬಾರಿಸಿತ್ತು. ಆ ಬಳಿಕ ಗುರಿ ಬೆನ್ನತ್ತಿದ ಪಾಕಿಸ್ತಾನ ಮೊದಲ ಓವರ್’ನಲ್ಲೇ ಎರಡು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿದರೂ ಫಖರ್ ಜಮಾನ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಜಯದತ್ತ ದಾಪುಗಾಲಿಟ್ಟಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.