ಮಧ್ಯಮ ಕ್ರಮಾಂಕಕ್ಕೆ ಯಾರು ಸೂಕ್ತ? ಸುರೇಶ್ ರೈನಾ ಅಥವಾ ದಿನೇಶ್ ಕಾರ್ತಿಕ್?

First Published Jul 8, 2018, 4:14 PM IST
Highlights

ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಬದಲಾವಣೆ ಮಾಡುತ್ತಾರ? ಮಧ್ಯಮ ಕ್ರಮಾಂಕದಲ್ಲಿ ಬದಲಾವಣೆಗಾಗಿ ಕೂಗು ಕೇಳಿಬರುತ್ತಿದೆ. ಹಾಗಾದರೆ ಮಧ್ಯಮ ಕ್ರಮಾಂಕದಲ್ಲಿ ಯಾರು ಇನ್? ಯಾರು ಔಟ್? ಇಲ್ಲಿದೆ ವಿವರ.

ಮುಂಬೈ(ಜು.08): ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ  ಸಜ್ಜಾಗಿದೆ. ಸರಣಿ ಗೆಲುವಿಗೆ ಈ ಪಂದ್ಯ ನಿರ್ಣಾಯಕವಾಗಿದೆ. ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದ ಭಾರತ, 2ನೇ ಪಂದ್ಯದಲ್ಲಿ ಮುಗ್ಗರಿಸಿತು. ಹೀಗಾಗಿ ಇವತ್ತಿನ ಅಂತಿಮ ಪಂದ್ಯಕ್ಕೆ ಟೀಂಇಂಡಿಯಾದಲ್ಲಿ ಕೆಲ ಬದಲಾವಣೆ ಅಗತ್ಯ ಅನ್ನೋ ಮಾತುಗಳು ಕೇಳಿ ಬರುತ್ತಿದೆ.

ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಮುರಳಿ ಕಾರ್ತಿಕ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಬದಲಾವಣೆ ಅವಶ್ಯಕ ಎಂದಿದ್ದಾರೆ. ಸುರೇಶ್ ರೈನಾ ಬದಲು ದಿನೇಶ್ ಕಾರ್ತಿಕ್ ಸೂಕ್ತ ಅನ್ನೋದು ಮುರಳಿ ಕಾರ್ತಿಕ್ ಅಭಿಪ್ರಾಯ.

ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮಧ್ಯಮ ಕ್ರಮಾಂಕ ಕುಸಿದು ಬಿದ್ದಿತ್ತು. ಹೀಗಾಗಿ ಪಂದ್ಯದಲ್ಲಿ ಭಾರತ ಸಾಧರಣ ಮೊತ್ತ ಪೇರಿಸಿತು. ಇದೀಗ ರೈನಾಗಿಂತ, ದಿನೇಶ್ ಕಾರ್ತಿಕ್ ಹೆಚ್ಚು ಪರಿಣಾಮಕಾರಿ ಎಂದು ಮುರಳಿ ಕಾರ್ತಿಕ್ ಸೂಚಿಸಿದ್ದಾರೆ.

ನಿದಾಸ್ ಟ್ರೋಫಿಯಲ್ಲಿ ದಿನೇಶ್ ಕಾರ್ತಿಕ್ ತಮ್ಮ ಸಾಮರ್ಥ್ಯವನ್ನ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಹೀಗಾಗಿ ದಿನೇಶ್ ಕಾರ್ತಿಕ್‌ಗೆ ಅವಕಾಶ ಕಲ್ಪಿಸಬೇಕು ಎಂದು ಮುರಳಿ ಕಾರ್ತಿಕ್ ಆಗ್ರಹಿಸಿದ್ದಾರೆ.
 

click me!