ಗಾಯಗೊಂಡಿರುವ ಜಸ್‌ಪ್ರೀತ್ ಬುಮ್ರಾ ತಂಡ ಸೇರಿಕೊಳ್ಳೋದು ಯಾವಾಗ?

First Published Jul 8, 2018, 3:48 PM IST
Highlights

ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿರುವ ಟೀಂ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ, ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಗಾಯದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಬುಮ್ರಾ, ಟೀಂ ಇಂಡಿಯಾ ಸೇರಿಕೊಳ್ಳೋದು ಯಾವಾಗ? ವೈದ್ಯರ ಹೇಳೋದೇನು? ಇಲ್ಲಿದೆ ವಿವರ.

ಮುಂಬೈ(ಜು.08): ಗಾಯಗೊಂಡಿರುವ ಟೀಂ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ ಸದ್ಯ ತಂಡದಿಂದ ಹೊರಗುಳಿದಿದ್ದಾರೆ. ಹೆಬ್ಬೆರಳಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಬುಮ್ರಾ ಈಗಾಗಲೇ ಟಿ20 ಹಾಗೂ ಏಕದಿನ ಟೂರ್ನಿಯಿಂದ ಹೊರಗುಳಿದಿದ್ದಾರೆ. ಆದರೆ ಸದ್ಯ ಹೊರಬಿದ್ದಿರೋ ವೈದ್ಯರ ವರದಿ ಪ್ರಕಾರ ಬುಮ್ರಾ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ.

ಐರ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಬುಮ್ರಾ ಕೈಬೆರಳಿಗೆ ಗಾಯಮಾಡಿಕೊಂಡಿದ್ದರು. ಬುಮ್ರಾ ಗಾಯವನ್ನ ಹೇರ್‌ಲೈನ್ ಫ್ರಾಕ್ಟರ್ ಎಂದಿರುವ ವೈದ್ಯರು, ಕನಿಷ್ಠ 4 ರಿಂದ 6 ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದಿದ್ದಾರೆ. 

ವೈದ್ಯರ ಪ್ರಕಾರ 4 ರಿಂದ 6 ವಾರಗಳ ವಿಶ್ರಾಂತಿ ಬಳಿಕ ತಂಡಕ್ಕೆ ಮರಳೋದಾದರೆ, ಬುಮ್ರಾ ಆಗಸ್ಟ್ 1 ರಿಂದ ಆರಂಭಗೊಳ್ಳಲಿರು ಮೊದಲ ಟೆಸ್ಟ್ ಪಂದ್ಯವನ್ನ ಮಿಸ್ ಮಾಡಿಕೊಳ್ಳಲಿದ್ದಾರೆ. ಆದರೆ ಬುಮ್ರಾ ಶೀಘ್ರದಲ್ಲೇ ಚೇತರಿಸಿಕೊಂಡರೆ ಟೆಸ್ಟ್ ಪಂದ್ಯಕ್ಕೆ ಕಮ್‌ಬ್ಯಾಕ್ ಸಾಧ್ಯತೆಗಳಿವೆ.

click me!