4 ರನ್‌ಗೆ 4 ವಿಕೆಟ್ ಕಿತ್ತ ಪಾಕ್ ಬೌಲರ್, ಹ್ಯಾಟ್ರಿಕ್ ಮೇಲೊಂದು ಹುದ್ದರಿ!

Published : Nov 22, 2018, 09:25 PM ISTUpdated : Nov 22, 2018, 09:37 PM IST
4 ರನ್‌ಗೆ 4 ವಿಕೆಟ್ ಕಿತ್ತ ಪಾಕ್ ಬೌಲರ್, ಹ್ಯಾಟ್ರಿಕ್ ಮೇಲೊಂದು ಹುದ್ದರಿ!

ಸಾರಾಂಶ

ಕ್ರಿಕೆಟ್ ಅಂದರೆ ಪ್ರತಿದಿನ ಒಂದಿಲ್ಲೊಂದು ಹೊಸ ದಾಖಲೆ ನಿರ್ಮಾಣ ಆಗುತ್ತಲೆ ಇರುತ್ತದೆ.  ಟಿ10 ಲೀಗ್​​ನಲ್ಲಿ ದಾಖಲೆಗಳ ಮೇಲೆ ದಾಖಲೆ ಸೃಷ್ಠಿಯಾಗುತ್ತಿದ್ದು, ನಿನ್ನೆಯಷ್ಟೇ ಅಫ್ಘಾನಿಸ್ತಾನ ಶಹಜಾದ್  16 ಎಸೆತಗಳಲ್ಲಿ 74 ರನ್​ ಚಚ್ಚಿ ದಾಖಲೆ ಬರೆದಿದ್ದರು ಇಂದು ಪಾಕಿಸ್ತಾನದ ಬೌಲರ್ ಸರದಿ.

ಶಾರ್ಜಾ[ನ.22]  ಪಾಕಿಸ್ತಾನ ಕ್ರಿಕೆಟ್​ ತಂಡದ ವೇಗದ ಬೌಲರ್​ ಅಮೀರ್ ಯಮಿನ್  ದಾಖಲೆ ಬರೆದಿದ್ದಾರೆ. ಬೆಂಗಾಲ್​ ಟೈಗರ್ಸ್​​ ಹಾಗೂ ನಾರ್ಥನ್​ ವಾರಿಯರ್ಸ್​ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಹ್ಯಾಟ್ರಿಕ್ ಮೇಲೆ ಮತ್ತೊಂದು ವಿಕೆಟ್ ಸಾಧನೆ ಮಾಡಿದ್ದಾರೆ.

ಬೆಂಗಾಲ್ ಟೈಗರ್ಸ್ ನ ಪಾಕ್​ ಬೌಲರ್​ ಅಮೀರ್​ ಯಮಿನ್​ ತಾವು ಎಸೆದ 2 ಓವರ್​ಗಳಲ್ಲಿ 1 ಓವರ್​ ಮೆಡನ್​ ಸೇರಿ ಕೇವಲ 4ರನ್​ ನೀಡಿದ್ದು, ಪ್ರಮುಖ ನಾಲ್ಕು ವಿಕೆಟ್​ ಪಡೆದುಕೊಂಡರು. ಇನ್ನು ಟಿ10 ಲೀಗ್​​ನಲ್ಲಿ ಅಮೀರ್​ ಒಂದು ಓವರ್​ ಮೆಡನ್​ ಮಾಡಿರುವ ದಾಖಲೆ ಸಹ ನಿರ್ಮಿಸಿದ್ದಾರೆ. ಜತೆಗೆ ಹ್ಯಾಟ್ರಿಕ್​ ಸಹ ಪಡೆದುಕೊಂಡರು.

ಮಿನಿ ಧೋನಿ: 16 ಚೆಂಡಲ್ಲಿ 74 ರನ್

ಮೊದಲು ಬ್ಯಾಟ್​ ಮಾಡಿದ ಬೆಂಗಾಲ್​ ತಂಡ, ನಿಗದಿತ 10 ಓವರ್​ಗಳಲ್ಲಿ ಜಾಸನ್​ ರಾಯ್​ ಅಜೇಯ(60)ರನ್​ ಹಾಗೂ ರುದರ್ಫೋರ್ಡ್ ಅಜೇಯ(47)ರನ್​ಗಳ ನೇರವಿನಿಂದ ಕೇವಲ 1ವಿಕೆಟ್​ ಕಳೆದುಕೊಂಡು 130ರನ್​ ಗಳಿಕೆ ಮಾಡಿತ್ತು. ಇದರ ಬೆನ್ನತ್ತಿದ್ದ ವಾರಿಯರ್ಸ್​ ತಂwಡ 7ವಿಕೆಟ್​ ಕಳೆದುಕೊಂಡು ಕೇವಲ 94ರನ್​ಗಳಿಕೆ ಮಾಡಲು ಶಕ್ತವಾಯಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಹ್ಲಿ-ರೋಹಿತ್ ನಿವೃತ್ತಿ ಬಳಿಕ ಏಕದಿನ ಕ್ರಿಕೆಟ್ ಉಳಿಸಲು ಮಾಸ್ಟರ್ ಪ್ಲಾನ್ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್
ಐಸಿಸಿ ರ‍್ಯಾಂಕಿಂಗ್‌: ಟಿ20, ಏಕದಿನ ಕ್ರಿಕೆಟ್‌ನಲ್ಲಿ ನಂ.1 ಸ್ಥಾನಿಯಾಗಿ ಹೊಸ ವರ್ಷಕ್ಕೆ ಕಾಲಿಟ್ಟ ಟೀಂ ಇಂಡಿಯಾ!