
ನವದೆಹಲಿ: ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ)ಯಿಂದ ಮಾನ್ಯತೆ ಪಡೆದ ಎಲ್ಲಾ ರಾಷ್ಟ್ರಗಳ ಕ್ರೀಡಾಪಟುಗಳಿಗೆ ವೀಸಾ ಮಂಜೂರು ಮಾಡುವುದಾಗಿ ಭಾರತ ಸರ್ಕಾರ ಲಿಖಿತ ಭರವಸೆ ನೀಡಿದೆ.
ಭಾರತಕ್ಕೆ ಕ್ರೀಡಾತಿಥ್ಯ ಕೈತಪ್ಪುವ ಭೀತಿ!
ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಮೂಲಕ ಐಒಸಿಗೆ ಪತ್ರವನ್ನು ತಲುಪಿಸಿದೆ. ಇದರೊಂದಿಗೆ ಪಾಕಿಸ್ತಾನಿ ಕ್ರೀಡಾಪಟುಗಳಿಗೂ ಭಾರತಕ್ಕೆ ಆಗಮಿಸಲು ಅವಕಾಶ ಸಿಗಲಿದೆ. ಎಲ್ಲಾ ರಾಷ್ಟ್ರಗಳಿಗೆ ಪ್ರವೇಶ ನೀಡುವ ವರೆಗೂ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳ ಆತಿಥ್ಯ ಹಕ್ಕು ನೀಡುವುದಿಲ್ಲ ಎಂದು ಐಒಎ ಎಚ್ಚರಿಕೆ ನೀಡಿತ್ತು.
ಗಂಭೀರ್‌ಗೆ ಚಿಕಿತ್ಸೆ ಅಗತ್ಯವಿದೆ, ನಾನೇ ವೀಸಾ ಕೊಡಿಸುವೆ'
ಪಾಕಿಸ್ತಾನಿ ಶೂಟರ್‌ಗಳಿಗೆ ವೀಸಾ ನಿರಾಕರಿಸಿದ್ದಕ್ಕೆ 2 ಒಲಿಂಪಿಕ್ಸ್ ಕೂಟಗಳನ್ನು ಹಿಂಪಡೆಯಲಾಗಿತ್ತು. ಕಿರಿಯರ ಡೇವಿಸ್ ಕಪ್, ಕಿರಿಯರ ಏಷ್ಯನ್ ಕುಸ್ತಿ, ಆರ್ಚರಿ ವಿಶ್ವಕಪ್‌ನ ಮೊದಲ ಹಂತದ ಸ್ಪರ್ಧೆಗಳಿಗೆ ಆತಿಥ್ಯ ವಹಿಸುವ ಅವಕಾಶವನ್ನು ಭಾರತ ಕಳೆದುಕೊಂಡಿತ್ತು. ಮುಂದಿನ ದಿನಗಳಲ್ಲಿ ಭಾರತ ಒಲಿಂಪಿಕ್ಸ್ ಅರ್ಹತಾ ಟೂರ್ನಿಗಳನ್ನು ಸೇರಿದಂತೆ ಮಹತ್ವದ ಅಂ.ರಾ.ಟೂರ್ನಿಗಳಿಗೆ ಆತಿಥ್ಯ ವಹಿಸುವ ಅವಕಾಶ ಪಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.