
ಬೆಂಗಳೂರು(ಜೂ.19): ವಿಶ್ವಕಪ್ ಟೂರ್ನಿ ಆರಂಭವಾದ ಬಳಿಕ ಎಲ್ಲರೂ ಭಾರತ ಹಾಗೂ ಪಾಕಿಸ್ತಾನವನ್ನೇ ಎದುರುನೋಡುತ್ತಿದ್ದರು. ರೋಚಕ ಹೋರಾಟದಲ್ಲಿ ಪಾಕಿಸ್ತಾನ ಮಣಿಸಿದ ಟೀಂ ಇಂಡಿಯಾ ದಾಖಲೆ ಬರೆಯಿತು. ಇತ್ತ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗಿದರು. ಆದರೆ ಇಂಡೋ-ಪಾಕ್ ಪಂದ್ಯದ ಅಬ್ಬರದಿಂದ ಬೆಂಗಳೂರಿನ ಪ್ಯಾರಾ ಈಜುಪಟು ಸಾಧನೆ ಮರೆಯಾಗಿದೆ.
ಇದನ್ನೂ ಓದಿ: ವಾಘಾ ಗಡಿಯಲ್ಲಿ ತೊಡೆ ತಟ್ಟಿದ್ದ ಹಸನ್ ಅಲಿಗೆ ಚಳಿ ಬಿಡಿಸಿದ ಪಾಕ್ ಕ್ರಿಕೆಟಿಗರು..!
ನಾರ್ವೆಯಲ್ಲಿ ನಡೆದ ನಾರ್ವೆಯನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಬೆಂಗಳೂರಿನ ಪ್ಯಾರ ಈಜುಪಟು ನಿರಂಜನ್ ಮುಕುಂದನ್ ಒಂದಲ್ಲ, ಎರಡಲ್ಲ ಬರೊಬ್ಬರಿ 5 ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಹುಟ್ಟಿನಿಂದಲೇ ಬೆನ್ನು ಮೂಳೆ ಸಂಬಂಧಿತ ಆರೋಗ್ಯ ಸಮಸ್ಯೆ ಎದುರಿಸಿದ ನಿರಂಜನ್‌ಗೆ ಎದ್ದು ನಡೆಯಲು ಸಾಧ್ಯವಿಲ್ಲ. 17 ಸರ್ಜರಿ ಮಾಡಿಸಿಕೊಂಡಿರುವ ನಿರಂಜನ್ ಇದೀಗ ಪ್ಯಾರಾ ಸ್ಮಿಮ್ಮಿಂಗ್‌ನಲ್ಲಿ 5 ಚಿನ್ನದ ಪದಕ ಗೆದ್ದಿದ್ದಾರೆ.
ಇದನ್ನೂ ಓದಿ: Fact Check| ಕಾಶ್ಮೀರ ಬೇಡ, ಕೊಹ್ಲಿ ಕಳುಹಿಸಿಕೊಡಿ: ಪಾಕ್ ಅಭಿಮಾನಿಗಳು!
ಕಳೆದ ಡಿಸೆಂಬರ್‌ನಲ್ಲಿ ಮೇಜರ್ ಸರ್ಜರಿ ಮಾಡಿಸಿಕೊಂಡಿದ್ದ 24 ವರ್ಷದ ನಿರಂಜನ್ ಸತತ 2 ತಿಂಗಳು ವಿಶ್ರಾಂತಿ ಪಡೆದಿದ್ದರು. ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಮೀನು ಎಂದೇ ಖ್ಯಾತಿಯಾಗಿರುವ ಅಮೇರಿಕಾ ಮೈಕಲ್ ಪೆಲ್ಫ್ಸ್, ನಮ್ಮ ಬೆಂಗಳೂರು ಈಜುಪಟು ನಿರಂಜನ್ ಸ್ಪೂರ್ತಿ. ಟೀಂ ಇಂಡಿಯಾ ಮಾಜಿ ನಾಯಕ, ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಅಭಿಮಾನಿಯಾಗಿರುವ ನಿರಂಜನ್, 2016ರಲ್ಲಿ ಕರ್ನಾಟಕ ಸರಕಾರದಿಂದ ಏಕಲವ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.