
ಪಾಕಿಸ್ತಾನಕ್ಕೆ 2019ರ ವಿಶ್ವಕಪ್ ಆಡಲು ಅವಕಾಶವಿಲ್ಲ. ಹೌದು 1992ರಲ್ಲಿ ಚಾಂಪಿಯನ್'ಗಳಾಗಿದ್ದ ಪಾಕಿಸ್ತಾನ 2019ರ ವಿಶ್ವಕಪ್ ಮರಿಚಿಕೆಯಾಗಿದೆ. ಅಷ್ಟಕ್ಕೂ ಪಾಕಿಸ್ತಾನ ವಿಶ್ವಕಪ್'ನಲ್ಲಿ ಆಡಲು ಅಡೆತಡೆಗಳಾದ್ರು ಏನು.? ಅವರನ್ನ ಕ್ರಿಕೆಟ್ನ ಮಹತ್ತರ ಟೂರ್ನಿಯಲ್ಲಿ ಭಾಗವಹಿಸದಂತೆ ಮಾಡುತ್ತಿರುವವರು ಯಾರು.? ಇಲ್ಲಿದೆ ವಿವರ
2019ರಲ್ಲಿ ಇಂಗ್ಲೆಂಡ್'ನಲ್ಲಿ ನಡೆಯುವ ವಿಶ್ವಕಪ್ ಕ್ರಿಕೆಟ್'ಗೆ ಈಗಾಗಲೇ ಎಲ್ಲಾ ದೇಶಗಳು ತಯಾರಿಯನ್ನು ಆರಂಭಿಸಿವೆ. ಕ್ರಿಕೆಟ್'ನ ಮಹತ್ತರ ಟೂರ್ನಿಗಾಗಿ ಮಾಸ್ಟರ್ ಪ್ಲಾನ್'ಗಳನ್ನ ಹಾಕಿಕೊಳ್ಳುತ್ತಿವೆ. ಆದರೆ ನೆರೆ ರಾಷ್ಟ್ರ ಪಾಕಿಸ್ತಾನ ಮಾತ್ರ 2019ರ ವಿಶ್ವಕಪ್ ಆಡುತ್ತೇವೋ ಇಲ್ಲವೋ ಎಂಬ ಚಿಂತೆಯಲ್ಲಿದೆ.
ಐಸಿಸಿ ಹೊಸ ಚಿಂತನೆಗೆ ಪಾಕ್ ತಂಡ ಬಲಿ?
ಪಾಕ್'ಗೆ 2019ರ ವಿಶ್ವಕಪ್ ಮರಿಚಿಕೆಯಾಗುವಂತೆ ಮಾಡಿದ್ದು ಐಸಿಸಿ. ಹೌದು ಸದ್ಯ ಐಸಿಸಿ 2019ರ ವಿಶ್ವಕಪ್ ತಯಾರಿಯಲ್ಲಿದೆ. ಅದಕ್ಕಾಗಿ ವಿಶೇಷ ನಿಯಮಗಳನ್ನ ತರಲು ಚಿಂತನೆ ನಡೆಸಿದೆ. ಐಸಿಸಿಯ ಒಂದು ನಿಯಮವೇನಾದರೂ ಚಾಲ್ತಿಗೆ ಬಂದರೆ ಪಾಕ್ ಈ ಬಾರಿ ವಿಶ್ವಕಪ್ ಪಟ್ಟಿಯಿಂದ ಹೊರಬೀಳುವುದು ಗ್ಯಾರೆಂಟಿ.
ಐಸಿಸಿ 2019ರ ವಿಶ್ವಕಪ್'ಗೆ ಕೇವಲ 10 ರಾಷ್ಟ್ರಗಳಿಗೆ ಅವಕಾಶ ನೀಡಲು ಚಿಂತನೆ ನಡೆಸಿದೆ. ಅದರಲ್ಲೂ ಐಸಿಸಿ ಱಂಕಿಂಗ್ ಪಟ್ಟಿಯಲ್ಲಿರುವ ಮೊದಲ 7 ರಾಷ್ಟ್ರಗಳಿಗೆ ಮಾತ್ರ 2019ರ ವಿಶ್ವಕಪ್'ಗೆ ನೇರವಾಗಿ ಆಯ್ಕೆಯಾಗುತ್ತವೆ. ಇನ್ನುಳಿದ 3 ಸ್ಥಾನಗಳಿಗೆ ಅಸೋಸಿಯೇಟ್ ರಾಷ್ಟ್ರಗಳು ಕಾದಾಡಬೇಕು.
ಬಾಂಗ್ಲಾ ಇನ್... ಪಾಕ್ ಔಟ್
ಐಸಿಸಿ ಏನಾದರೂ ಈ ಯೋಜನೆಯನ್ನು ಪ್ರಕಟಿಸಿದ್ದೇ ಆದರೆ ಪಾಕ್'ಗೆ ಕುತ್ತು ಖಚಿತ. ಸದ್ಯ ಪಾಕಿಸ್ತಾನ ಐಸಿಸಿ ಱಂಕಿಂಗ್'ನಲ್ಲಿ 8ನೇ ಸ್ಥಾನದಲ್ಲಿದೆ. ಬಾಂಗ್ಲಾ 7ನೇ ಸ್ಥಾನದಲ್ಲಿದೆ. ಐಸಿಸಿ ನಿಯಮ ಪ್ರಕಾರ ಪಾಕ್ 2019ರ ವಿಶ್ವಕಪ್ ಆಡಬೇಕಾದರೆ ಅಸೋಸಿಯೇಟ್ ರಾಷ್ಟ್ರಗಳೊಂದಿಗೆ ಕಾದಾಡಬೇಕಿದೆ.
ಭಾರತದ ಕ್ರಿಕೆಟ್ ಪ್ರಿಯರಿಗೂ ಶಾಕ್..!
ಒಂದು ವೇಳೆ ಪಾಕಿಸ್ಥಾನಕ್ಕೆ ಈ ಸ್ಥಿತಿ ಬಂದಾದಲ್ಲಿ ಪಾಕಿಸ್ತಾನದ ಕ್ರಿಕೆಟ್ ಪ್ರಿಯರಿಗೆ ಮಾತ್ರವಲ್ಲ ಭಾರತದ ಅಭಿಮಾನಿಗಳಿಗೂ ನಿರಾಸೆಯಾಗಲಿದೆ. ಕಾರಣ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಮುಖಿಯಾಗುತ್ತಿರುವುದು ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ. ಸದ್ಯ ಚಾಂಪಿಯನ್ಸ್ ಟ್ರೋಫಿ ಬಿಟ್ಟರೆ ಇನ್ನೆರಡು ವರ್ಷಗಳಲ್ಲಿ ಇನ್ಯಾವ ಐಸಿಸಿ ಟೂರ್ನಿಗಳಿಲ್ಲ. ಹೀಗಾಗಿ ಇವೆರಡೂ ತಂಡಗಳು ಕಾದಾಡೋದನ್ನ ನೋಡಲು ಹಲವು ವರ್ಷಗಳೇ ಕಾಯಬೇಕಾಗುತ್ತದೆ.
ಒಟ್ಟಿನಲ್ಲಿ ಒಂದು ಕಾಲದಲ್ಲಿ ಚಾಂಪಿಯನ್'ಗಳಂತೆ ಮೆರೆದಿದ್ದ ತಂಡಕ್ಕೆ ಇಂತಹ ಸ್ಥಿತಿ ಬರಬಾರದಾಗಿತ್ತು. ಆದದ್ರೆ ಕ್ರಿಕೆಟ್'ನ ದೊಡ್ಡಣ್ಣನ ನಿಯಮಕ್ಕೆ ತಲೆಬಾಗಲೇಬೇಕು. ಆದರೆ ಐಸಿಸಿ ಈ ಚಿಂತನೆಯನ್ನು ಜಾರಿಗೆ ತರದೆ ಇರಲಿ ಭಾರತ-ಪಾಕ್ ಪಂದ್ಯವನ್ನು ನೋಡುವಂತಾಗಲಿ ಎಂಬುವುದೇ ಎಲ್ಲರ ಆಶಯ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.