2036 ಒಲಿಂಪಿಕ್ಸ್: ಅಹಮದಾಬಾದ್‌ನಲ್ಲಿ 10 ಕ್ರೀಡಾಂಗಣ ನಿರ್ಮಾಣ!

Published : Mar 11, 2025, 04:23 PM ISTUpdated : Mar 11, 2025, 04:50 PM IST
2036 ಒಲಿಂಪಿಕ್ಸ್: ಅಹಮದಾಬಾದ್‌ನಲ್ಲಿ 10 ಕ್ರೀಡಾಂಗಣ ನಿರ್ಮಾಣ!

ಸಾರಾಂಶ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಕಾರ, 2036ರ ಒಲಿಂಪಿಕ್ಸ್‌ಗಾಗಿ ಅಹಮದಾಬಾದ್‌ನಲ್ಲಿ 10 ಕ್ರೀಡಾಂಗಣಗಳನ್ನು ನಿರ್ಮಿಸಲಾಗುವುದು ಮತ್ತು ಗುಜರಾತ್ ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಇದಲ್ಲದೆ, ರಾಷ್ಟ್ರೀಯ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಚಿರಂತ್ ಚಿನ್ನದ ಪದಕ ಮತ್ತು ರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಬಸವರಾಜ ಪಾಟೀಲ್ ಕಂಚಿನ ಪದಕ ಗೆದ್ದಿದ್ದಾರೆ.

ಅಹಮದಾಬಾದ್: 2036ರ ಒಲಿಂಪಿಕ್ಸ್‌ಗಾಗಿ ಅಹಮಬಾದ್‌ನಲ್ಲಿ 10 ಕ್ರೀಡಾಂಗಣಗಳನ್ನು ನಿರ್ಮಿಸಲಾಗುತ್ತದೆ. ಗುಜರಾತ್ ಈಗಾಗಲೇ ಒಲಿಂಪಿಕ್‌ಗೆ ಸಿದ್ಧತೆ ಆರಂಭಿಸಿದೆ' ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. 

ಗಾಂಧಿನಗರದಲ್ಲಿ ಪ್ಯಾರಾ ಅಥೀಟ್ಸ್ ಗೆ ಮೂಲಸೌಕರ್ಯ ಒದಗಿಸುವ ಅಭಿವೃದ್ಧಿ ಕಾರ್ಯಕ್ರಮವೊಂದಕ್ಕೆ ವರ್ಚುವಲ್ ಆಗಿ ಚಾಲನೆ ನೀಡಿ ಅವರು ಮಾತನಾಡಿದರು. ಭಾರತವು 2036ರ ಒಲಿಂಪಿಕ್ಸ್ ಆಯೋಜನೆ ಮಾಡಲಿದೆ ಎನ್ನುವ ಮಾತನ್ನು ಶಾ ಪುನರ್‌ಉಚ್ಚರಿಸಿದರು. 

'ಸರ್ದಾರ್ ಪಟೇಲ್ ಸಂಕೀರ್ಣದಲ್ಲಿ 2036ರ ಒಲಿಂಪಿಕ್ ಗೆ 10 ಕ್ರೀಡಾಂಗಣ ನಿರ್ಮಾಣವಾಗಲಿದೆ. ಗುಜರಾತ್  ಈಗಾಗಲೇ ಸಿದ್ಧತೆ ಆರಂಭಿಸಿದೆ. ಗುಜರಾತ್ ಸರ್ಕಾರವು ಕ್ರೀಡಾ ವಲಯಕ್ಕೆ ಹಲವು ಯೋಜನೆಗಳನ್ನು ಕೈಗೊಂಡಿದೆ. ಇದರಿಂದಾಗಿ ರಾಜ್ಯವು ದೇಶದಲ್ಲೇ ಅತ್ಯುತ್ತಮ ಕ್ರೀಡಾ ಮೂಲ ಸೌಕರ್ಯವನ್ನು ಹೊಂದಿದೆ' ಎಂದರು.

ಇದನ್ನೂ ಓದಿ: ಅಳಿಯ ಕೆ ಎಲ್ ರಾಹುಲ್ ಆಟವನ್ನು 4 ಪದಗಳಲ್ಲಿ ಬಣ್ಣಿಸಿದ ಮಾವ ಸುನಿಲ್ ಶೆಟ್ಟಿ!

ಅಥ್ಲೆಟಿಕ್ಸ್‌: ಕರ್ನಾಟಕದ ಚಿರಂತ್‌ಗೆ ಚಿನ್ನದ ಪದಕ

ಪಾಟ್ನಾ(ಬಿಹಾರ): 20ನೇ ರಾಷ್ಟ್ರೀಯ ಯೂತ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಚಿರಂತ್‌ ಪಿ. ಬಾಲಕರ 100 ಮೀ. ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅವರು 10.89 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಇದೇ ವೇಳೆ ಬಾಲಕರ 400 ಮೀ. ಓಟದ ಸ್ಪರ್ಧೆಯಲ್ಲಿ ಸಯ್ಯದ್ ಶಬೀರ್‌ 48.06 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡವೇ 2027ರ ಏಕದಿನ ವಿಶ್ವಕಪ್‌ನಲ್ಲಿ ಕಣಕ್ಕೆ?

ರಾಷ್ಟ್ರೀಯ ಕುಸ್ತಿ: ಕಂಚು ಗೆದ್ದ ರಾಜ್ಯದ ಬಸವರಾಜ

ಜಲಂಧರ್‌(ಪಂಜಾಬ್‌): ಇಲ್ಲಿ ನಡೆದ ಫೆಡರೇಷನ್‌ ಕಪ್‌ನ ರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಕರ್ನಾಟಕದ ಬಸವರಾಜ ಪಾಟೀಲ್‌ ಕಂಚಿನ ಪದಕ ಗೆದ್ದರು. ಅವರು ಪುರುಷರ ಫ್ರೀಸ್ಟೈಲ್‌ 97 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಈ ವಿಭಾಗದಲ್ಲಿ ಹರ್ಯಾಣದ ಸಾಹಿಲ್‌ ಚಿನ್ನ ಗೆದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ