ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ನೇರಳೆ ಬಣ್ಣದ ಟ್ರ್ಯಾಕ್..!

By Kannadaprabha News  |  First Published Apr 16, 2024, 9:35 AM IST

1976ರಿಂದಲೂ ಇಟಲಿಯ ಮೊಂಡೊ ಸಂಸ್ಥೆಯು ಒಲಿಂಪಿಕ್ಸ್‌ಗೆ ಟ್ರ್ಯಾಕ್‌ ಅಳವಡಿಕೆ ಕಾರ್ಯ ಮಾಡುತ್ತಿದ್ದು, ನೇರಳೆ ಬಣ್ಣದ ಟ್ರ್ಯಾಕ್‌ ಅನ್ನು ಆಧುನಿಕ ತಂತ್ರಜ್ಞಾನ ಬಳಸಿ ತಯಾರಿಸಿರುವುದಾಗಿ ಹೇಳಿದೆ. ಈ ಬಾರಿ ಮತ್ತಷ್ಟು ವಿಶ್ವ ಹಾಗೂ ಒಲಿಂಪಿಕ್ಸ್‌ ದಾಖಲೆಗಳು ನಿರ್ಮಾಣಗೊಳ್ಳಲಿವೆ ಎಂದು ಮೊಂಡೊ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.


ಪ್ಯಾರಿಸ್‌: ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸಂಪ್ರದಾಯಿಕ ಇಟ್ಟಿಗೆ-ಕೆಂಪು ಬಣ್ಣದ ಟ್ರ್ಯಾಕ್‌ ಬದಲಾಗಿ ನೇರಳೆ ಬಣ್ಣದ ಸಿಂಥೆಟಿಕ್‌ ಟ್ರ್ಯಾಕ್‌ ಬಳಕೆಯಾಗಲಿದೆ. ಇಲ್ಲಿನ ಸ್ಟೇಡ್‌ ಡಿ ಫ್ರಾನ್ಸ್‌ (ರಾಷ್ಟ್ರೀಯ ಕ್ರೀಡಾಂಗಣ)ನಲ್ಲಿ ನೇರಳ ಬಣ್ಣದ ಟ್ರ್ಯಾಕ್‌ ಅಳವಡಿಕೆ ಕಾರ್ಯ ಶುರುವಾಗಿದೆ. ಇಟಲಿಯಲ್ಲಿ ತಯಾರಾಗಿರುವ ಈ ಟ್ರ್ಯಾಕ್‌ ಅಳವಡಿಸಲು ಒಂದು ತಿಂಗಳ ಸಮಯ ಬೇಕಿದ್ದು, ಸುಮಾರು 2800 ಗಡಿಗೆ ಅಂಟು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

1976ರಿಂದಲೂ ಇಟಲಿಯ ಮೊಂಡೊ ಸಂಸ್ಥೆಯು ಒಲಿಂಪಿಕ್ಸ್‌ಗೆ ಟ್ರ್ಯಾಕ್‌ ಅಳವಡಿಕೆ ಕಾರ್ಯ ಮಾಡುತ್ತಿದ್ದು, ನೇರಳೆ ಬಣ್ಣದ ಟ್ರ್ಯಾಕ್‌ ಅನ್ನು ಆಧುನಿಕ ತಂತ್ರಜ್ಞಾನ ಬಳಸಿ ತಯಾರಿಸಿರುವುದಾಗಿ ಹೇಳಿದೆ. ಈ ಬಾರಿ ಮತ್ತಷ್ಟು ವಿಶ್ವ ಹಾಗೂ ಒಲಿಂಪಿಕ್ಸ್‌ ದಾಖಲೆಗಳು ನಿರ್ಮಾಣಗೊಳ್ಳಲಿವೆ ಎಂದು ಮೊಂಡೊ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.

Tap to resize

Latest Videos

undefined

ಸೀನ್‌ ನದಿಯ ಬದಲಾಗಿ ಸ್ಟೇಡಿಯಂನಲ್ಲೇ ಪಥ ಸಂಚಲನ?

ಪ್ಯಾರಿಸ್‌: ಭದ್ರತಾ ಸಮಸ್ಯೆ ಭೀತಿ ಹಿನ್ನೆಲೆಯಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭದ ವೇಳೆ ಸೀನ್‌ ನದಿಯಲ್ಲಿ ನಡೆಸಲು ಉದ್ದೇಶಿಸಿದ್ದ ಪಥ ಸಂಚಲನವನ್ನು ಕ್ರೀಡಾಂಗಣದಲ್ಲೇ ನಡೆಸುವ ಸಾಧ್ಯತೆಯಿದೆ. ಈ ಬಗ್ಗೆ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರಾನ್‌ ಸುಳಿವು ನೀಡಿದ್ದು, ಭದ್ರತಾ ಸಮಸ್ಯೆ ಎದುರಾಗುವುದಾದದರೆ ಪಥ ಸಂಚಲನವನ್ನು ಸ್ಥಳಾಂತರಿಸುವುದಾಗಿ ತಿಳಿಸಿದ್ದಾರೆ.

IPL 2024 ಸನ್‌ರೈಸರ್ಸ್ ಹೈದರಾಬಾದ್ ಎದುರು ಹೋರಾಡಿ ಸೋಲುಂಡ ಆರ್‌ಸಿಬಿ..!

ಜು.26ಕ್ಕೆ ಉದ್ಘಾಟನಾ ಸಮಾರಂಭ ನಿಗದಿಯಾಗಿದ್ದು, 10500ಕ್ಕೂ ಹೆಚ್ಚಿನ ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ. ಸೀನ್‌ ನದಿಯಲ್ಲಿ ಸುಮಾರು 6 ಕಿ.ಮೀ. ವರೆಗೆ ಬೋಟ್‌ ಮೂಲಕ ಅಥ್ಲೀಟ್‌ಗಳ ಪಥ ಸಂಚಲನ ನಡೆಸಲಿದ್ದಾರೆ ಎಂದು ಆಯೋಜಕರು ಈ ಮೊದಲು ತಿಳಿಸಿದ್ದರು.

ತಾರಾ ಶೂಟರ್‌ ಪಾಲಕ್‌ ಒಲಿಂಪಿಕ್ಸ್‌ಗೆ ಅರ್ಹತೆ

ರಿಯೊ ಡೆ ಜನೈರೊ(ಬ್ರೆಜಿಲ್): ಐಎಸ್‌ಎಸ್‌ಎಫ್‌ ಫೈನಲ್‌ ಒಲಿಂಪಿಕ್‌ ಅರ್ಹತಾ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತದ ತಾರಾ ಶೂಟರ್‌ ಪಾಲಕ ಗುಲಿಯಾ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇದು ಭಾರತಕ್ಕೆ ದೊರೆತ 20ನೇ ಒಲಿಂಪಿಕ್ಸ್‌ ಕೋಟಾ. ಇದರಲ್ಲಿ ಪಿಸ್ತೂಲ್‌ ಮತ್ತು ಶೂಟಿಂಗ್‌ ವಿಭಾಗದಲ್ಲಿ ಭಾನುವಾರ ಪಾಲಕ್‌ ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದ ಫೈನಲ್‌ನಲ್ಲಿ 3ನೇ ಸ್ಥಾನಿಯಾದರು.

click me!