ಅತ್ತೆಯನ್ನು ಬಡಿದು ಕೊಂದ ಸೊಸೆಯರು, ಎದುರಿಗಿದ್ದರೂ ನೆರವಿಗೆ ಬಾರದ ಮಗ, ವಿಡಿಯೋ ವೈರಲ್!

By Suvarna News  |  First Published Apr 15, 2024, 10:49 PM IST

ಇಬ್ಬರು ಸೊಸೆಯರು ಅತ್ತೆಯನ್ನೇ ಕೋಲು, ಕಲ್ಲಗಳಿಂದ ಬಡಿದು ಕೊಂದಿದ್ದಾರೆ. ಮಗ ಎದುರಿಗೆ ನಿಂತಿದ್ದರೂ ತಾಯಿಯ ರಕ್ಷಣೆಗೆ ಬಾರದೆ ಪತ್ನಿಯನ್ನು ಪ್ರೋತ್ಸಾಹಿಸಿದ ಘಟನೆ ನಡೆದಿದೆ. ಬೆಚ್ಚಿ ಬೀಳಿಸುವ ವಿಡಿಯೋ ವೈರಲ್ ಆಗಿದೆ.
 


ಇಂದೋರ್(ಏ.15) ಅತ್ತೆ ಸೊಸೆ ಜಗಳ ಹೊಸದೇನಲ್ಲ. ಕೆಲವು ಬಾರಿ ಕೊಲೆಯಲ್ಲಿ ಅಂತ್ಯವಾದ ಘಟನೆಗಳು ಇವೆ. ಆದರೆ ಇಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಇಬ್ಬರು ಸೊಸೆಯಂದಿರುವ ಅತ್ತೆಯನ್ನು ಕೋಲು, ಕಲ್ಲುಗಳಿಂದ ಬಡಿದು ಕೊಂದಿದ್ದಾರೆ. ದುರಂತ ಅಂದರೆ ಘಟನೆ ನಡೆಯುವಾಗ ಮಗ ಎದುರಿಗೇ ಇದ್ದ. ಆದರೆ ತನ್ನ ತಾಯಿಯನ್ನು ರಕ್ಷಿಸಲಿಲ್ಲ. ಬದಲಾಗಿದೆ ಪತ್ನಿಯ ಕ್ರೌರ್ಯಕ್ಕೆ ಪ್ರೋತ್ಸಾಹ ನೀಡಿ ಭೀಕರ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.

65 ವರ್ಷದ ಮುನ್ನಾ ದೇವಿ ಮೃತ ದುರ್ದೈವಿ. ಮುನ್ನಾ ದೇವಿಗೆ ಇಬ್ಬರು ಗಂಡು ಮಕ್ಕಳು. ಮೊದಲ ಪುತ್ರನ ಪತ್ನಿ ಸಾವಿತ್ರಿ ಎರಡು ವರ್ಷದ ಹಿಂದೆ ಅತ್ತೆ ಜೊತೆ ಜಗಳ ಮಾಡಿದ್ದಳು. ಈ ವೇಳೆ ಮುನ್ನಾ ದೇವಿಯ ತಲೆಗೆ ಹೊಡೆದಿದ್ದಳು. ಇದರ ಪರಿಣಾಮ ಮುನ್ನಾ ದೇವಿ ತೆಲೆಗೆ 5 ಹೊಲಿಗೆ ಹಾಕಲಾಗಿತ್ತು. ಈ ಘಟನೆ ಬಳಿಕ ಸ್ಥಳೀಯರ ಪಂಚಾಯಿತಿಯಲ್ಲಿ ಸಾವಿತ್ರಿಯನ್ನು ಮನೆಯಿಂದ ಹೊರಗೆ ಹಾಕಲಾಗಿತ್ತು. ಮೊದಲ ಪುತ್ರ ಸಾವಿತ್ರಿ ಯನ್ನು ಕರೆದುಕೊಂಡು ಬೇರೆ ಮನೆ ಮಾಡಿದ್ದ.

Tap to resize

Latest Videos

ಲೋಕಸಭಾ ಚುನಾವಣಾ ಹೊತ್ತಲ್ಲೇ ಪಂಜಾಬ್‌ನಲ್ಲಿ ವಿಎಚ್‌ಪಿ ಮುಖಂಡ ಬಗ್ಗಾ ಹತ್ಯೆ!

ಇತ್ತ ಎರಡನೇ ಪುತ್ರ ಇತ್ತೀಚೆಗೆ ಚಂದಾ ಕುಮಾರಿಯನ್ನು ಮದುವೆಯಾಗಿದ್ದ. ಕಿರಿಯ ಸೊಸೆ ಚಂದಾ ಕುಮಾರಿ ಹಾಗೂ ಮುನ್ನಾ ದೇವಿ ನಡುವೆ ಶೀತಲ ಸಮರ ನಡೆಯುತ್ತಲೇ ಇತ್ತು. ಇದೇ ವೇಳೆ ಕಿರಿಯ ಸೊಸೆ ಚಂದಾ ಕುಮಾರಿ ಹಾಗೂ ಹಿರಿಯ ಸೊಸೆ ಸಾವಿತ್ರಿ ಆತ್ಮೀಯರಾಗಿದ್ದರು. ಇವರಿಬ್ಬರು ಆತ್ಮೀಯತೆ ಹಾಗೂ ಮಾತುಕತೆ ಅತ್ತೆ ಮುನ್ನಾ ದೇವಿಗೆ ಹಿಡಿಸಿರಲಿಲ್ಲ. ಹೀಗಾಗಿ ಪದೇ ಪದೆ ಜಗಳವಾಗುತ್ತಿತ್ತು.

 

ये वीडियो आपको विचलित कर देगा...
ग्वालियर में सास को बहुओं ने बेरहमी से पीटा...इलाज के दौरान सास की मौत...
समाज को देखिए वीडियो बनाते रहे बचाने की जहमत नही उठाई... pic.twitter.com/aKygcC0WyU

— Pramod Sharma (@Zeepramod)

 

ರೊಚ್ಚಿಗೆದ್ದ ಚಂದಾ ಕುಮಾರಿ ತನ್ನ ತಂದೆ ಹಾಗೂ ಸಹೋದರರನ್ನು ಪಂಚಾಯಿತಿಗೆ ಮಾಡಲು ಕರೆಸಿದ್ದಾಳೆ. ಪತಿ ರವಿ ಕುಮಾರ್ ಕೂಡ ಜೊತೆಗಿದ್ದ. ಮಾತುಕತೆ ವೇಳೆ ಆಕ್ರೋಶಗಳು ಹೊರಬಿದ್ದಿದೆ. ಮಾತಿಗೆ ಮಾತು ಬೆಳೆದಿದೆ. ರೊಚ್ಚಿಗೆದ್ದ ಸೊಸೆಯಂದಿರುವ ಅತ್ತೆ ಮುನ್ನಾ ದೇವಿ ಮೇಲೆ ಕೋಲಿನಿಂದ ದಾಳಿ ಮಾಡಿದ್ದಾರೆ. ಪಕ್ಕದಲ್ಲೇ ಎಲ್ಲರೂ ಇದ್ದರೂ ಯಾರು ಕೂಡ ಬಿಡಿಸುವ ಪ್ರಯತ್ನ ಮಾಡಲಿಲ್ಲ. ಕಿರಿಯ ಮಗ ರವಿ ಪಕ್ಕದಲ್ಲೇ ಇದ್ದರು ರಕ್ಷಣೆಗೆ ಧಾವಿಸಲಿಲ್ಲ. ಪತ್ನಿಯ ಸಹೋದರರು ಹಾಗೂ ತಂದೆ ಜೊತೆ ಸೇರಿ ಹಲ್ಲೆಗೆ ಪ್ರೋತ್ಸಾಹ ನೀಡಿದ್ದಾನೆ.

ಚಪ್ಪಾಳೆ ತಟ್ಟುತ್ತಾ ಮಗ ನಿಂತರೆ ಸೊಸೆಯಿಂದರು ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ತೀವ್ರವಾಗಿ ಹಲ್ಲೆಗೊಳಗಾದ ಮುನ್ನಾ ದೇವಿಯನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಮುನ್ನಾ ದೇವಿ ಬದುಕುಳಿಯಲಿಲ್ಲ. ಇತ್ತ ಪುತ್ರ, ಇಬ್ಬರು ಸೊಸೆ, ಕಿರಿಯ ಸೊಸೆಯ ತಂದೆ ಹಾಗೂ ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ. 

ಜಮೀನು ವ್ಯಾಜ್ಯ: ಮಹಿಳೆಯ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಪರಾರಿ!

click me!