ಯುಎಸ್ ಓಪನ್ ಗ್ರ್ಯಾನ್‌ ಸ್ಲಾಂ: ಚಾಂಪಿಯನ್ ಜೋಕೋವಿಚ್ ಶುಭಾರಂಭ

By Kannadaprabha News  |  First Published Aug 28, 2024, 8:56 AM IST

ಒಲಿಂಪಿಕ್ ಚಾಂಪಿಯನ್ ನೋವಾಕ್ ಜೋಕೋವಿಚ್, ಯುಎಸ್ ಓಪನ್ ಟೆನಿಸ್ ಗ್ರ್ಯಾನ್‌ ಸ್ಲಾಂ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ನ್ಯೂಯಾರ್ಕ್: 25ನೇ ಗ್ಯಾನ್ ಸ್ಲಾಂ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿರುವ ಸರ್ಬಿಯಾದ ಟೆನಿಸ್ ದೊರೆ ನೋವಾಕ್ ಜೋಕೋವಿಚ್, ಯುಎಸ್ ಓಪನ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಹಾಲಿ ಚಾಂಪಿಯನ್ ಜೋಕೋವಿಚ್, ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಮಾಲ್ಗೊವಾದ ರಾಡು ಅಲೌಟ್ ವಿರುದ್ಧ 6-2, 6-2, 6-2 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ದ್ವಿತೀಯ ಶ್ರೇಯಾಂಕಿತ ಜೋಕೋಗೆ ಇದು ಯುಎಸ್ ಓಪನ್‌ನ ಮೊದಲ ಸುತ್ತಿನಲ್ಲಿ ಸತತ 18ನೇ ಗೆಲುವು. 2ನೇ ಸುತ್ತಿನಲ್ಲಿ ಜೋಕೋಗೆ ಸರ್ಬಿಯಾದವರೇ ಆದ ಲಾಸ್ಕೊ ಜೆರೆ ಎದುರಾಗಲಿದ್ದಾರೆ.

ಇದೇ ವೇಳೆ ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್, ಅಮೆರಿಕದ ಕೊಕೊ ಗಾಫ್ ಸಹ ಮೊದಲ ಸುತ್ತಿನಲ್ಲಿ ಸುಲಭ ಗೆಲುವಿನೊಂದಿಗೆ 2ನೇ ಸುತ್ತಿಗೇರಿದ್ದಾರೆ. ಕೊಕೊಗೆ ಫ್ರಾನ್ಸ್‌ನ ವರ್ಷಾರಾ ಗ್ರಚೆವಾ ವಿರುದ್ಧ 6-2, 6-0 ಸೆಟ್‌ಗಳಲ್ಲಿ ಜಯ ದೊರೆಯಿತು.

Tap to resize

Latest Videos

undefined

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ: ರಾಜ್ಯದ ಶ್ರೇಯಾಂಕ ಪಾಟೀಲ್‌ಗೆ ಸ್ಥಾನ..!

ಸುಮಿತ್ ನಗಾಲ್ ಔಟ್: ಪುರುಷರ ಸಿಂಗಲ್ಸ್‌ನ ಪ್ರಧಾನ ಸುತ್ತಿಗೆ ನೇರ ಅರ್ಹತೆ ಪಡೆದಿದ್ದ ಭಾರತದ ಸುಮಿತ್ ನಗಾಲ್, ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ನೆದರ್‌ಲೆಂಡ್ಸ್ ನ ಟ್ಯಾಲೊನ್ ಗ್ರೀಕ್ಸ್‌ಪೂರ್ ವಿರುದ್ಧ 1-6, 3-6, 6-7 ಸೆಟ್ ಗಳಲ್ಲಿ ಸೋಲುಂಡರು.

ಡುರಾಂಡ್ ಕಪ್ ಸೆಮೀಸ್ ಸೋತ ಬೆಂಗೂರು ಎಫ್‌ಸಿ

ಕೋಲ್ಕತಾ: ಶೂಟೌಟ್‌ನಲ್ಲಿ ವಿಶಾಲ್ ಕೈಥ್ 2 ಗೋಲು ತಡೆದ ಪರಿಣಾಮ ಡುರಾಂಡ್ ಕಪ್‌ನ ಸೆಮಿಫೈನಲ್‌ನಲ್ಲಿ ಮೋಹನ್ ಬಗಾನ್ ವಿರುದ್ಧ ಬೆಂಗಳೂರು ಎಫ್‌ಸಿ 3-4 ಗೋಲುಗಳ ಅಂತರದಲ್ಲಿ ಸೋಲುಂಡಿತು. 

ವಿಶ್ವದ ಕಿರಿಯ ಅಜ್ಜನಾದೆ ಎನ್ನುತ್ತಿದ್ದಾರೆ ಪಾಕ್‌ನ ಈ ದಿಗ್ಗಜ ಕ್ರಿಕೆಟರ್..!

ಮಂಗಳವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ 2-0 ಆರಂಭಿಕ ಮುನ್ನಡೆ ಸಾಧಿಸಿತ್ತು. ಆದರೆ 90 ನಿಮಿಷಗಳ ಆಟ ಮುಗಿಯುವುದ ರೊಳಗೆ ಮೋಹನ್ ಬಗಾನ್ 2-2ರಲ್ಲಿ ಸಮಬಲ ಸಾಧಿಸಿ ಪಂದ್ಯವನ್ನು ಶೂಟೌಟ್‌ಗೆ ಕೊಂಡೊಯ್ದಿತು. 30ನೇ ಬಾರಿಗೆ ಫೈನಲ್ ಪ್ರವೇಶಿಸಿರುವ 17 ಬಾರಿ ಚಾಂಪಿಯನ್ ಮೋಹನ್ ಬಗಾನ್, ಶನಿವಾರ ಪ್ರಶಸ್ತಿಗಾಗಿ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧ ಸೆಣಸಲಿದೆ.

click me!