ಪುಲ್ವಾಮಾ ದಾಳಿ: ಕಂಗಾಲಾದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಹತಾಶೆ ಮಾತು!

By Web Desk  |  First Published Feb 18, 2019, 12:23 PM IST

ಪುಲ್ವಾಮ ದಾಳಿಯಿಂದ  ಪಾಕಿಸ್ತಾನ ತಲೆ ಎತ್ತಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ಹಲವು ಅಡೆ ತಡೆಗಳಿಂದ ಸಾಗುತ್ತಿರುವ ಪಾಕಿಸ್ತಾನ ಕ್ರಿಕೆಟ್ ಲೀಗ್ ಟೂರ್ನಿಯಿಂದ IMG ರಿಲಯನ್ಸ್ ಹಿಂದೆ ಸರಿದ ಬೆನ್ನಲ್ಲೇ ಪಾಕ್ ಕ್ರಿಕೆಟ್ ಮಂಡಳಿ ಹತಾಶೆ ಮಾತನಾಡುತ್ತಿದೆ. 
 


ಲಾಹೋರ್(ಫೆ.18): ಭಯೋತ್ಪಾದಕರ ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ಊಹಿಸಲು ಅಸಾಧ್ಯವಾದ ರೀತಿಯಲ್ಲಿ ಹೊಡೆತ ತಿನ್ನುತ್ತಿದೆ. ಪಾಕಿಸ್ತಾನ ಸೂಪರ್ ಲೀಗ್ ಕ್ರಿಕೆಟ್ ಭಾರತದಲ್ಲಿ ಪ್ರಸಾರ ನಿರ್ಬಂಧಿಸಿದ ಬೆನ್ನಲ್ಲೇ, ಟೂರ್ನಿಯ ನಿರ್ಮಾಣ ಒಪ್ಪಂದಿಂದ IMG ರಿಲಯನ್ಸ್ ಹಿಂದೆ ಸರಿದ ಬೆನ್ನಲ್ಲೇ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಂಗಲಾಗಿದೆ. ಇದೀಗ ಹತಾಶೆ ಮಾತನಾಡುತ್ತಿದೆ.

ಇದನ್ನೂ ಓದಿ: ಪುಲ್ವಾಮ ದಾಳಿ: ಪಾಕಿಸ್ತಾನ ಬಿಗ್ ಶಾಕ್ ನೀಡಿದ IMG ರಿಲಯನ್ಸ್!

Tap to resize

Latest Videos

ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿ ಪ್ರಸಾರದ ಸಂಪೂರ್ಣ ಜವಾಬ್ದಾರಿ IMG ರಿಲಯನ್ಸ್ ಕೈಯಲ್ಲಿತ್ತು.  ಆದರೆ ಪುಲ್ವಾಮಾ ದಾಳಿಯಿಂದ ನಿರ್ಮಾಣದಿಂದ IMG ರಿಲಯನ್ಸ್ ಹೊರಬಂದಿದೆ. ಇದರಿಂದ ಹತಾಶೆಗೊಂಡಿರುವ ಪಾಕಿಸ್ತಾನ, ಐಸಿಸಿಗೆ ದೂರು ನೀಡುವುದಾಗಿ ಹೇಳಿದೆ. ಇಷ್ಟೇ ಅಲ್ಲ ರಾಜಕೀಯ ಹಾಗೂ ಕ್ರೀಡೆಯನ್ನ ಒಂದೇ ತಕ್ಕಡಿಯಲ್ಲಿ ನೋಡಬಾರದು ಎಂದಿದೆ.

ಇದನ್ನೂ ಓದಿ: ಪುಲ್ವಾಮ ದಾಳಿ: ಭಾರತದಲ್ಲಿ ಪಾಕಿಸ್ತಾನ ಲೀಗ್ ಕ್ರಿಕೆಟ್ ಪ್ರಸಾರ ನಿರ್ಬಂಧ!

ಸೋಮವಾರ ಹೊಸ ಬ್ರಾಡ್‌ಕಾಸ್ಟ್ ಪ್ರೊಡಕ್ಷನ್ ಒಪ್ಪಂದ ಘೋಷಿಸುವುದಾಗಿ ಪಾಕ್ ಕ್ರಿಕೆಟ್ ಮಂಡಳಿ ಹೇಳಿದೆ. ಈ ವಿಚಾರವಾಗಿ ಭಾರತದ ನಿರ್ಧಾರ ಅಚ್ಚರಿ ತಂದಿದೆ. ಪಾಕ್ ಕ್ರಿಕೆಟಿಗರ ಫೋಟೋ ತೆರವು, ಪಾಕಿಸ್ತಾನ ಕ್ರಿಕೆಟ್ ಲೀಗ್ ಪ್ರಸಾರ ನಿರ್ಬಂಧ ಎರಡು ದೇಶದ ಅಂತರವನ್ನ ಹೆಚ್ಚಿಸಲಿದೆ ಎಂದು ಪಿಸಿಬಿ ಹೇಳಿದೆ. ಆದರೆ ಬಿಟ್ಟಿ ಸಲಹೆ, ಉಪದೇಶ ನೀಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಪುಲ್ವಾಮಾ ಘಟನೆಯನ್ನ ಖಂಡಿಸೋ ಪ್ರಯತ್ನಕ್ಕೆ ಮುಂದಾಗಿಲ್ಲ. 

click me!