
ನವದೆಹಲಿ[ಜು.19]: ಈ ವರ್ಷದಿಂದ ರಣಜಿ ಟ್ರೋಫಿಯಲ್ಲಿ ಈಶಾನ್ಯ ರಾಜ್ಯಗಳ ತಂಡಗಳು ಸಹ ಆಡಲಿವೆ. ಬುಧವಾರ ಬಿಸಿಸಿಐ ಮಹತ್ವದ ವಿಚಾರವನ್ನು ಪ್ರಕಟಗೊಳಿಸಿತು. ಮಣಿಪುರ, ಮೇಘಾಲಯ, ಮಿಜೋರಾಮ್, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಪುದುಚೇರಿ, ಸಿಕ್ಕಿಂ, ಉತ್ತರಾಖಂಡ ಹಾಗೂ ಬಿಹಾರ ತಂಡಗಳು ಸೇರ್ಪಡೆಗೊಂಡಿದ್ದು, ರಣಜಿಯಲ್ಲಿ ಆಡುವ ಒಟ್ಟು ತಂಡಗಳ ಸಂಖ್ಯೆ 37ಕ್ಕೇರಿದೆ.
ಈ ತಂಡಗಳು ವಿವಿಧ ವಯೋಮಿತಿಯ ಪಂದ್ಯಾವಳಿಗಳಲ್ಲೂ ಆಡಲಿದ್ದು, 2018-19ರ ದೇಸಿ ಋತುವಿನಲ್ಲಿ ಒಟ್ಟು ಬರೋಬ್ಬರಿ 2017 ಪಂದ್ಯಗಳು ನಡೆಯಲಿವೆ. ಈ ವರ್ಷದ ದೇಸಿ ಋತು ಆ.13ರಿಂದ ಆರಂಭಗೊಳ್ಳಲಿದ್ದು ಹಿರಿಯ ಮಹಿಳೆಯರ ಚಾಲೆಂಜರ್ ಟ್ರೋಫಿ ಆ.20ರ ವರೆಗೂ ನಡೆಯಲಿದೆ. ಪುರುಷರ ವೇಳಾಪಟ್ಟಿ ದುಲೀಪ್ ಟ್ರೋಫಿಯೊಂದಿಗೆ (ಆ.17-ಸೆ.9) ಆರಂಭಗೊಳ್ಳಲಿದೆ. ಬಳಿಕ ಸೆ.19ರಿಂದ ಅ.20ರವರೆಗೂ ವಿಜಯ್ ಹಜಾರೆ(ಏಕದಿನ) ಟೂರ್ನಿ ನಡೆಯಲಿದ್ದು ಒಟ್ಟು 160 ಪಂದ್ಯಗಳು ನಿಗದಿಯಾಗಿವೆ.
ನ.1ರಿಂದ ಫೆ.6, 2019ರ ವರೆಗೂ ನಡೆಯುವ ರಣಜಿ ಟ್ರೋಫಿಯಲ್ಲಿ ಒಟ್ಟು 160 ಪಂದ್ಯಗಳು ನಡೆಯಲಿವೆ. ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಒಟ್ಟು 140 ಪಂದ್ಯ, ಪುರುಷರ ಅಂಡರ್-23 ವಿಭಾಗದಲ್ಲಿ ಒಟ್ಟು 302 ಪಂದ್ಯ, ಬಾಲಕರ ಅಂಡರ್-19 ವಿಭಾಗದಲ್ಲಿ ಒಟ್ಟು 286 ಪಂದ್ಯ, ಹಿರಿಯ ಮಹಿಳೆಯರ ವಿಭಾಗದಲ್ಲಿ 295 ಪಂದ್ಯ, ಅಂಡರ್ -23 ವಿಭಾಗದಲ್ಲಿ ಒಟ್ಟು 292 ಪಂದ್ಯಗಳು ನಡೆಯಲಿವೆ.
ರಣಜಿಯಲ್ಲಿ ಪ್ಲೇಟ್ ಗುಂಪು ವಾಪಸ್:
ಈಶಾನ್ಯ ರಾಜ್ಯಗಳ ತಂಡಗಳು ಸೇರ್ಪಡೆಗೊಂಡಿರುವ ಕಾರಣ, ಈ ವರ್ಷದಿಂದ ರಣಜಿ ಟ್ರೋಫಿಯಲ್ಲಿ ಪ್ಲೇಟ್ ಗುಂಪು ವಾಪಸಾಗಲಿದೆ. ‘ಎ’ ಹಾಗೂ ‘ಬಿ’ ಗುಂಪಿನಲ್ಲಿ ತಲಾ 9 ತಂಡಗಳು,
‘ಸಿ’ ಗುಂಪಿನಲ್ಲಿ 10 ತಂಡ ಹಾಗೂ ಹೊಸದಾಗಿ ಸೇರ್ಪಡೆಗೊಂಡಿರುವ ತಂಡಗಳು ಪ್ಲೇಟ್ ಗುಂಪಿನಲ್ಲಿ ಆಡಲಿವೆ. ‘ಎ’, ‘ಬಿ’ ಗುಂಪಿನಿಂದ ಒಟ್ಟು 5, ‘ಸಿ’ ಗುಂಪಿನಿಂದ 2, ಪ್ಲೇಟ್ ಗುಂಪಿನಿಂದ 1 ತಂಡ ಕ್ವಾರ್ಟರ್ ಫೈನಲ್‌ಗೇರಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.