ಮತ್ತೆ ದಕ್ಷಿಣ ಆಫ್ರಿಕಾ ತಂಡಕ್ಕೆ ಎಬಿಡಿ..! ಆದರೆ...?

First Published Jul 19, 2018, 12:16 PM IST
Highlights

2004ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಎಬಿಡಿ, 114 ಟೆಸ್ಟ್ ಹಾಗೂ 228 ಏಕದಿನ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ಒಂದುವೇಳೆ ದಕ್ಷಿಣ ಆಫ್ರಿಕಾ ತಂಡಕ್ಕೆ ಎಬಿಡಿ ಸಲಹೆಗಾರರಾಗಿ ಸೇರ್ಪಡೆಗೊಂಡರೆ ಖಂಡಿತಾ ಹರಿಣಗಳ ಪಡೆಗೆ ಬಲ ಬರಲಿದೆ. 

ಕೇಪ್‌ಟೌನ್(ಜು.19]: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್‌, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ಸಲಹೆಗಾರರಾಗುವ ಸಾಧ್ಯತೆಗಳಿವೆ. 

ಇದನ್ನು ಓದಿ:  ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಎಬಿ ಡಿವಿಲಿಯರ್ಸ್

ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಥಬಾಂಗ್ ಮೋರೆ, ‘ಮುಂದಿನ ದಿನಗಳಲ್ಲಿ ಡಿ ವಿಲಿಯರ್ಸ್‌ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ಸಲಹೆಗಾರರಾಗುವ ಅವಕಾಶಗಳಿವೆ. ಈ ಸಂಬಂಧ ಡಿವಿಲಿಯರ್ಸ್‌ರೊಂದಿಗೆ ಮಾತನಾಡಿದ್ದು, ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ವೇತನ ವಿಚಾರ ಚರ್ಚೆ ಬಾಕಿ ಇದೆ’ ಎಂದಿದ್ದಾರೆ. 

ಇದನ್ನು ಓದಿ: ಬಿಗ್ ಬ್ರೇಕಿಂಗ್ ನ್ಯೂಸ್: ಅಂತರಾಷ್ಟ್ರೀಯ ಕ್ರಿಕೆಟ್’ಗೆ ಎಬಿಡಿ ಗುಡ್’ಬೈ

ಕೆಲ ತಿಂಗಳುಗಳ ಹಿಂದಷ್ಟೇ ಎಬಿ ಡಿವಿಲಿಯರ್ಸ್ ತಮ್ಮ 14 ವರ್ಷಗಳ ಸುದೀರ್ಘ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ದಿಢೀರ್ ನಿವೃತ್ತಿ ಘೋಷಿಸಿದ್ದರು. 2004ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಎಬಿಡಿ, 114 ಟೆಸ್ಟ್ ಹಾಗೂ 228 ಏಕದಿನ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ಒಂದುವೇಳೆ ದಕ್ಷಿಣ ಆಫ್ರಿಕಾ ತಂಡಕ್ಕೆ ಎಬಿಡಿ ಸಲಹೆಗಾರರಾಗಿ ಸೇರ್ಪಡೆಗೊಂಡರೆ ಖಂಡಿತಾ ಹರಿಣಗಳ ಪಡೆಗೆ ಬಲ ಬರಲಿದೆ. 

ಇದನ್ನು ಓದಿ:  ಐಪಿಎಲ್’ನಲ್ಲಿ ಇದುವರೆಗೂ ಎಬಿ ಡಿವಿಲಿಯರ್ಸ್ ಸಂಪಾದಿಸಿದ್ದೆಷ್ಟು..?

click me!