ಪಾಕ್ ಮಣಿಸಿದ ನ್ಯೂಜಿಲೆಂಡ್ ಕ್ರಿಕೆಟಿಗರಿಂದ ಪಂಜಾಬಿ ಬಾಂಗ್ರಾ ಡ್ಯಾನ್ಸ್!

By Web DeskFirst Published Nov 20, 2018, 3:41 PM IST
Highlights

ಪಾಕಿಸ್ತಾನ ವಿರುದ್ದ ಮೊದಲ ಟೆಸ್ಟ್ ಪಂದ್ಯದ ಗೆಲುವನ್ನ ನ್ಯೂಜಿಲೆಂಡ್ ಕ್ರಿಕೆಟಿಗರು ಆಚರಿಸಿದ್ದು ವಿಶೇಷವಾಗಿತ್ತು. ಪಂಜಾಬಿ ಡ್ಯಾನ್ಸ್ ಮಾಡೋ ಮೂಲಕ ನ್ಯೂಜಿಲೆಂಡ್ ಕ್ರಿಕೆಟಿಗರು ಇದೀಗ ಭಾರತೀಯರ ಮನಗೆದ್ದಿದಾರೆ.
 

ಅಬುಧಾಬಿ(ನ.20): ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನ 4 ರನ್‌ಗಳಿಂದ ಗೆದ್ದ ನ್ಯೂಜಿಲೆಂಡ್ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಈ ಮೂಲಕ 5ನೇ ಅತ್ಯಂತ ಕಡಿಮೆ ರನ್‌ ಅಂತರದ ಗೆಲುವು ಅನ್ನೋ ಹೆಗ್ಗಳಿಕೆಗೂ ನ್ಯೂಜಿಲೆಂಡ್ ಪಾತ್ರವಾಗಿದೆ.

ಪಾಕಿಸ್ತಾನ ತಂಡವನ್ನ ಬಗ್ಗು ಬಡಿದ ನ್ಯೂಜಿಲೆಂಡ್, ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಪಂಜಾಬಿ ಬಾಂಗ್ರಾ ನೃತ್ಯ ಮಾಡಿ ಸಂಭ್ರಮಿಸಿತು. ಇದೀಗ ನ್ಯೂಜಿಲೆಂಡ್ ಕ್ರಿಕೆಟಿಗ ಪಂಜಾಬಿ ಡ್ಯಾನ್ಸ್ ವೈರಲ್ ಆಗಿದೆ.

 

New Zealand players celebrating the win in Abu Dhabi with a bit of bhangra pic.twitter.com/UJNN0FRnH7

— Saj Sadiq (@Saj_PakPassion)

 

ನ್ಯೂಜಿಲೆಂಡ್ ತಂಡದಲ್ಲಿರುವ ಐಶ್ ಸೋದಿ ಹಾಗೂ ಅಜಾಜ್ ಪಟೇಲ್ ಇಬ್ಬರ ಮೂಲ ಭಾರತ. ಆದರೆ ನ್ಯೂಜಿಲೆಂಡ್‌ನಲ್ಲಿ ಬೆಳೆದಿರುವ ಈ ಇಬ್ಬರೂ ನ್ಯೂಜಿಲೆಂಡ್ ತಂಡದ ಪ್ರಮುಖ ಕ್ರಿಕೆಟಿಗರು. ಹೀಗಾಗಿ ಇವರಿಗೆ ಪಂಜಾಬಿ ಡ್ಯಾನ್ಸ್‌ ಹೊಸದೇನಲ್ಲ. ಇಷ್ಟೇ ಅಲ್ಲ ಐಪಿಎಲ್ ಟೂರ್ನಿಯಿಂದಾಗಿ ಬಹುತೇಕ ವಿದೇಶಿ ಕ್ರಿಕೆಟಿಗರ ಭಾರತೀಯ ಡ್ಯಾನ್ಸ್, ಆಹಾರ, ಉಡುಪು, ಇಲ್ಲಿನ ಸಂಸ್ಕೃತಿಗಳ ಕುರಿತು ಉತ್ತಮ ಅರಿವಿದೆ. ಹೀಗಾಗಿ ಕಿವೀಸ್ ಕ್ರಿಕೆಟಿಗರು ಪಂಜಾಬಿ ಡ್ಯಾನ್ಸ್ ಮೂಲಕ ಸಂಭ್ರಮ ಆಚರಿಸಿದ್ದಾರೆ.
 

click me!