ಧೋನಿ ರೀತಿ ಹೆಲಿಕಾಪ್ಟರ್ ಶಾಟ್ ಹೊಡೆದ ಜಸ್ಪ್ರೀತ್ ಬುಮ್ರಾ!

By Web DeskFirst Published Nov 20, 2018, 12:25 PM IST
Highlights

ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಯಾರ್ಕರ್, ಗುಡ್ ಲೆಂಥ್ ಬೌಲಿಂಗ್ ಮಾಡೋದನ್ನ ನೋಡಿದ್ದೇವೆ. ಆದರೆ ಧೋನಿ ರೀತಿ ಹೆಲಿಕಾಪ್ಟರ್ ಶಾಟ್ ಹೊಡೆಯೋದನ್ನ ನೋಡಿದ್ದೀರಾ? ಆಸಿಸ್ ಪ್ರವಾಸದಲ್ಲಿರುವ ಬುಮ್ರಾ ಬ್ಯಾಟಿಂಗ್‌ನಲ್ಲಿ ಗಮನಸೆಳೆದಿದ್ದಾರೆ.

ಬ್ರಿಸ್ಬೇನ್(ನ.20): ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ಅಂತಿಮ ಕಸರತ್ತು ನಡೆಸುತ್ತಿದೆ. ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಕಠಿಣ ಅಭ್ಯಾಸದಲ್ಲಿ ತೊಡಗಿದೆ. ಈ ವೇಳೆ ವೇಗಿ ಜಸ್‌ಪ್ರೀತ್ ಬುಮ್ರಾ ಬೌಲಿಂಗ್ ಬದಲು ಬ್ಯಾಟಿಂಗ್ ಅಭ್ಯಾಸ ಮಾಡಿದರು.

ಇದನ್ನೂ ಓದಿ: ಇಂಡೋ-ಆಸಿಸ್ ಕ್ರಿಕೆಟ್ ಸರಣಿ-ಎಲ್ಲಿ?ಯಾವಾಗ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿದ ಜಸ್ಪ್ರೀತ್ ಬುಮ್ರಾ ಎಂ.ಎಸ್.ಧೋನಿ ರೀತಿ ಹೆಲಿಕಾಪ್ಟರ್ ಶಾಟ್ ಹೊಡೆದಿದ್ದಾರೆ. ಭರ್ಜರಿ ಶಾಟ್ ಪ್ರಾಕ್ಟೀಸ್ ಮಾಡಿದ ಬುಮ್ರಾ ಅಚ್ಚರಿ ಮೂಡಿಸಿದರು. ಪ್ರತಿ ಎಸೆತಕ್ಕೂ ಬುಮ್ರಾ ಬೌಂಡರಿ-ಸಿಕ್ಸರ್ ಶಾಟ್ ಮೂಲಕ ಉತ್ತರ ನೀಡಿದರು.

 

That moment at the nets when went Hammer and Tongs 💥💥💥👌🏻 pic.twitter.com/mWLIlGYHby

— BCCI (@BCCI)

 

ನವೆಂಬರ್ 21 ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿ ಆರಂಭಗೊಳ್ಳಲಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ 3 ಟಿ20, 4 ಟೆಸ್ಟ್ ಹಾಗೂ 3 ಏಕದಿನ ಪಂದ್ಯ ಆಡಲಿದೆ.
 

click me!