ಸೌತ್ಆಫ್ರಿಕಾ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ 360 ಡಿಗ್ರಿ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿ. ಇದೀಗ ಎಬಿಡಿ ಸ್ವಿಚ್ ಹಿಟ್ ಮೂಲಕ ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದಾರೆ. ಎಬಿಡಿ ಸ್ವಿಚ್ ಹಿಟ್ ಸಿಕ್ಸರ್ ಹೇಗಿತ್ತು? ಇಲ್ಲಿದೆ ನೋಡಿ.
ಕೇಪ್‌ಟೌನ್(ನ.20): ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಸೌತ್ಆಫ್ರಿಕಾ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಇದೀಗ ಮಜಾನ್ಸಿ ಸೂಪರ್ ಲೀಗ್ ಟೂರ್ನಿಯಲ್ಲಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ್ದಾರೆ.
ವಿದಾಯದ ಬಳಿಕ ಮೊದಲ ಟಿ20 ಲೀಗ್ ಪಂದ್ಯದಲ್ಲೇ ಸ್ಫೋಟಕ ಅರ್ಧಶತಕ ಸಿಡಿಸಿದ ಎಬಿ ಡಿವಿಲಿಯರ್ಸ್, ಇದೀಗ ಸ್ವಿಚ್ ಹಿಟ್ ಮೂಲಕ ಸಿಕ್ಸರ್ ಸಿಡಿಸಿ ಎಲ್ಲರ ಗಮನಸೆಳೆದಿದ್ದಾರೆ. ಎಬಿಡಿ ಸ್ವಿಚ್ ಹಿಟ್ ವೀಡಿಯೋ ಇದೀಗ ವೈರಲ್ ಆಗಿದೆ.
You Beauty 😍😍 pic.twitter.com/DfBINQFw24
— Grishma Sharma (@GrishmaSharma17)
ಜಾರ್ಜ್ ಲಿಂಡೆ ಓವರ್‌ನ ನಾಲ್ಕನೇ ಎಸೆತದಲ್ಲಿ ಎಬಿ ಡಿವಿಲಿಯರ್ಸ್ ಸ್ವಿಚ್ ಹಿಟ್ ಮೂಲಕ ಸಿಕ್ಸರ್ ಸಿಡಿಸಿದ್ದಾರೆ. 360 ಡಿಗ್ರಿ ಶೈಲಿಯಲ್ಲಿ ಬ್ಯಾಟಿಂಗ್ ಮಾಡೋ ಎಬಿಡಿ, ಇದೀಗ ಸ್ವಿಚ್ ಹಿಟ್ ಮೂಲಕವೂ ಅಬ್ಬರಿಸಿದ್ದಾರೆ.