ಐಸಿಸಿಯಿಂದ ನೇಪಾಳಕ್ಕೆ ODI ಮಾನ್ಯತೆ

By Suvarna Web DeskFirst Published Mar 17, 2018, 3:22 PM IST
Highlights

ನೇಪಾಳ ತಂಡ 2014ರ ಐಸಿಸಿ ಟಿ20 ವಿಶ್ವಕಪ್‌'ನಲ್ಲೂ ಪಾಲ್ಗೊಂಡಿತ್ತು.

ಹರಾರೆ(ಮಾ.17): ಚೊಚ್ಚಲ ಬಾರಿಗೆ ನೇಪಾಳ ಕ್ರಿಕೆಟ್ ತಂಡ ಐಸಿಸಿಯಿಂದ ಏಕದಿನ ಮಾನ್ಯತೆ ಪಡೆದುಕೊಂಡಿದೆ.

ಇಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಅರ್ಹತಾ ಸುತ್ತಿನ ಪ್ಲೇ-ಆಫ್‌'ನಲ್ಲಿ ಪಪುವಾ ನ್ಯೂಗಿನಿ ವಿರುದ್ಧ ಗೆಲುವು ಸಾಧಿಸಿದ ಬಳಿಕ, ನೇಪಾಳಕ್ಕೆ ಏಕದಿನ ಮಾನ್ಯತೆ ದೊರೆಯಿತು. ಸೋಲಿನಿಂದಾಗಿ ಪಪುವಾ ನ್ಯೂಗಿನಿ, ಏಕದಿನ ಮಾನ್ಯತೆ ಕಳೆದುಕೊಳ್ಳಲಿದೆ. 1996ರಿಂದ ಐಸಿಸಿಯ ಸದಸ್ಯ ರಾಷ್ಟ್ರಗಳಲ್ಲಿ ಒಂದಾಗಿರುವ ನೇಪಾಳಕ್ಕೆ 2014ರಲ್ಲಿ ಅಂತಾರಾಷ್ಟ್ರೀಯ ಟಿ20 ಮಾನ್ಯತೆ ದೊರೆತಿತ್ತು.

ನೇಪಾಳ ತಂಡ 2014ರ ಐಸಿಸಿ ಟಿ20 ವಿಶ್ವಕಪ್‌'ನಲ್ಲೂ ಪಾಲ್ಗೊಂಡಿತ್ತು.

 

click me!