
ನವದೆಹಲಿ(ಮಾ.17): ಕಿರುಕುಳ, ಕೊಲೆ ಯತ್ನ ಆರೋಪ ಎದುರಿಸುತ್ತಿರುವ ಭಾರತ ತಂಡದ ವೇಗಿ ಮೊಹಮದ್ ಶಮಿ, ತಮ್ಮ ಹಾಗೂ ಪತ್ನಿ ಹಸೀನ್ ಜಹಾನ್‌ರ ಸಂಬಂಧ ಮುಗಿದ ಅಧ್ಯಾಯ ಎಂದಿದ್ದಾರೆ.
ಪತ್ನಿ ಮಾಡಿರುವ ಆರೋಪಗಳ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಸತ್ಯ ಹೊರ ಬರಬೇಕು ಎಂದು ಶಮಿ ಆಗ್ರಹಿಸಿದ್ದಾರೆ. ‘ನನ್ನ ಕುಟುಂಬದವರೆಲ್ಲಾ ಮಾತುಕತೆ ಮೂಲಕ ಪ್ರಕರಣ ಇತ್ಯರ್ಥ ಮಾಡಲು ಪ್ರಯತ್ನಿಸಿದರು. ಆದರೆ ಹಸೀನ್ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾಳೆ. ತನಿಖೆ ಸರಿಯಾಗಿ ನಡೆದರೆ, ಆಕೆಯ ಆರೋಪಗಳೆಲ್ಲಾ ಸುಳ್ಳು ಎನ್ನುವುದು ಬಯಲಾಗಲಿದೆ’ ಎಂದಿದ್ದಾರೆ.
‘ಡಿ.7ರಂದು ಭುವನೇಶ್ವರ್ ಮದುವೆಗೆ ಒಟ್ಟಿಗೆ ಹೋಗಿದ್ದೇವೆ. ಆಕೆಗೆ ₹18 ಲಕ್ಷ ಮೌಲ್ಯದ ಒಡವೆ ತೆಗೆದುಕೊಟ್ಟ ರಸೀದಿ ನನ್ನ ಬಳಿ ಇದೆ. ಮಳಿಗೆಯ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಲಿ. ನನ್ನ ಅಣ್ಣನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾಳೆ. ಅದು ಸಹ ಸುಳ್ಳು ಎಂದು ಸಾಬೀತು ಪಡಿಸಲು ನನ್ನ ಬಳಿ ಸಾಕ್ಷ್ಯವಿದೆ’ ಎಂದು ಶಮಿ ಹೇಳಿದ್ದಾರೆ. ಇದೇ ವೇಳೆ ಐಪಿಎಲ್ 11ನೇ ಆವೃತ್ತಿಯಲ್ಲಿ ಶಮಿ ಪಾಲ್ಗೊಳ್ಳುವಿಕೆ ಬಗ್ಗೆ ತನಿಖೆ ಪೂರ್ಣಗೊಂಡ ಬಳಿಕ ನಿರ್ಧರಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.