ವಿಶ್ವ ಅಥ್ಲೆಟಿಕ್ ಮ್ಯೂಸಿಯಂ ಸೇರಿದ ಚೋಪ್ರಾರ ಪ್ಯಾರಿಸ್ ಒಲಿಂಪಿಕ್ಸ್‌ ಜೆರ್ಸಿ

By Naveen Kodase  |  First Published Dec 15, 2024, 10:57 AM IST

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ನೀರಜ್, ತಮ್ಮ ಜೆರ್ಸಿಯನ್ನು ಮ್ಯೂಸಿಯಂ ಆಫ್ ವರ್ಲ್ಡ್ ಅಥ್ಲೆಟಿಕ್ಸ್‌ಗೆ ನೀಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.


ಮೊನಾಕೋ: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್‌ ಚೋಪ್ರಾ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಧರಿಸಿದ್ದ ಟೀ ಶರ್ಟ್ ವಿಶ್ವ ಅಥ್ಲೆಟಿಕ್ಸ್‌ನ ಪಾರಂಪರಿಕ ವಸ್ತು ಸಂಗ್ರಹಾಲಯಕ್ಕೆ ಸೇರ್ಪಡೆಗೊಂಡಿದೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ನೀರಜ್, ತಮ್ಮ ಜೆರ್ಸಿಯನ್ನು ಮ್ಯೂಸಿಯಂ ಆಫ್ ವರ್ಲ್ಡ್ ಅಥ್ಲೆಟಿಕ್ಸ್ (ಎಂಒಡಬ್ಲ್ಯುಎ)ಗೆ ನೀಡಿದ್ದಾರೆ. ಈ ಮ್ಯೂಸಿಯಂನಲ್ಲಿ ಇದುವರೆಗೆ ನೀರಜ್ ಸೇರಿ ಒಟ್ಟು 23 ಅಥ್ಲೆಟ್‌ಗಳ ವಿವಿಧ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ. ಈ ವರ್ಷ ಚೋಪ್ರಾ ಜೊತೆ ಉಕ್ರೇನ್‌ನ ಅಲ್ಲೀಟ್ ಯಾರೋಸ್ಲಾವಾ ಮಹುಚಿಖ್ ಹಾಗೂ ಡೊಮಿನಿಕಾದ ಥಿಯಾ ಲಾಂಡ್ ಕೂಡಾ ತಮ್ಮ ವಸ್ತುಗಳನ್ನು ಮ್ಯೂಸಿಯಂಗೆ ಕೊಟ್ಟಿದ್ದಾರೆ.

Tap to resize

Latest Videos

ಏಷ್ಯಾ ಕಪ್ ಜೂನಿಯರ್ ವನಿತಾ ಹಾಕಿ: ಭಾರತ ಫೈನಲ್‌ಗೆ ಲಗ್ಗೆ

ಮಸ್ಕತ್ (ಒಮಾನ್): ಕಿರಿಯ ಮಹಿಳೆಯರ ಏಷ್ಯಾಕಪ್ ಹಾಕಿ ಭಾರತ ತಂಡ ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಜಪಾನ್ ವಿರುದ್ಧ ಟೂರ್ನಿಯಲ್ಲಿ ಫೈನಲ್‌ಗೆ ಹಾಲಿ ಚಾಂಪಿಯನ್ 3-1 ಗೋಲುಗಳಿಂದ ಜಯ ಗಳಿಸಿತು. ಗುಂಪು ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಭಾರತ, ಸೆಮಿಫೈನಲ್‌ನಲ್ಲೂ ನಿರೀಕ್ಷಿತ ಆಟವಾಡಿತು. 

undefined

ಮುಷ್ತಾಕ್‌ ಅಲಿ ಟಿ20 ಟ್ರೋಫಿ: ಬೆಂಗ್ಳೂರಲ್ಲಿಂದು ಮುಂಬೈ vs ಮಧ್ಯ ಪ್ರದೇಶ ಫೈನಲ್‌ ಫೈಟ್

ಮೊದಲ ಕ್ವಾರ್ಟರ್‌ನಲ್ಲೇ ತಂಡ 3 ಗೋಲು ಬಾರಿಸಿತು. ಮುಮ್ರಾಜ್ (4ನೇ ನಿಮಿಷ), ಸಾಕ್ಷಿ (5ನೇ ನಿ.) ಹಾಗೂ ದೀಪಿಕಾ (13ನೇ ನಿ.) ಗೋಲು ಬಾರಿಸಿ ತಂಡಕ್ಕೆ ಭರ್ಜರಿ ಮುನ್ನಡೆ ಒದಗಿಸಿದರು. 23ನೇ ನಿಮಿಷದಲ್ಲಿ ಜಪಾನ್ ಗೋಲು ಬಾರಿಸಿತಾದರೂ, ಚೆಂಡಿನ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದ ಭಾರತ ಗೆಲುವನ್ನು ತನ್ನದಾಗಿಸಿಕೊಂಡಿತು. ಶನಿವಾರ ಮತ್ತೊಂದು ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಚೀನಾ 4-1 ಗೋಲುಗಳಿಂದ ಜಯಗಳಿಸಿತು.

3ನೇ ಸಲ ಭಾರತ ಫೈನಲ್‌ಗೆ ಲಗ್ಗೆ

ಭಾರತ ಟೂರ್ನಿಯಲ್ಲಿ 3ನೇ ಬಾರಿ ಫೈನಲ್‌ಗೇರಿತು. 2012ರಲ್ಲಿ ಫೈನಲ್‌ಗೇ ರಿದ್ದ ತಂಡ ಚೀನಾ ವಿರುದ್ಧ ಸೋತಿತ್ತು. ಕಳೆದ ಬಾರಿ ಫೈನಲ್‌ನಲ್ಲಿದ.ಕೊರಿಯಾ ವಿರುದ್ಧ ಗೆದ್ದು ಚಾಂಪಿಯನ್ ಎನಿಸಿಕೊಂಡಿತ್ತು.

ಕಿರಿಯ ಭಾರತೀಯ ಡಿ ಗುಕೇಶ್ ಗೆದ್ದಿದ್ದಕ್ಕೆ ಮಾಜಿ ಚಾಂಪಿಯನ್‌ಗೆ ಸಹಿಸೋಕೆ ಆಗ್ತಿಲ್ವಾ? ಚೆಸ್‌ ದುರಂತ ಅಂದಿದ್ದೇಕೆ?

ಭಾರತ vs ಚೀನಾ ಫೈನಲ್ ಇಂದು

ಟೂರ್ನಿಯ ಫೈನಲ್ ಪಂದ್ಯ ಭಾನುವಾರ ನಡೆಯಲಿದ್ದು, ಪ್ರಶಸ್ತಿಗಾಗಿ ಭಾರತ ಹಾಗೂ ಚೀನಾ ತಂಡಗಳು ಸೆಣಸಾಡಲಿವೆ. ಸತತ 2ನೇ ಬಾರಿ ಫೈನಲ್‌ಗೇರಿರುವ ಭಾರತ 2ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ದಾಖಲೆಯ 8ನೇ ಬಾರಿ ಫೈನಲ್‌ಗೇರಿರುವ ಚೀನಾ 4ನೇ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ.
 

click me!