ಧೋನಿ ನಿವೃತ್ತಿಯ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್ ತುಟಿಬಿಚ್ಚಿದ್ದಾರೆ. ಹಾಗಾದ್ರೆ ಗಂಭೀರ್ ಏನಂದ್ರು ನೀವೇ ನೋಡಿ...
ನವದೆಹಲಿ[ಜು.19]: ಭವಿಷ್ಯದ ದೃಷ್ಟಿಯಿಂದ ಧೋನಿ ವಿಚಾರವಾಗಿ ಭಾವನಾತ್ಮಕ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಪ್ರಾಯೋಗಿಕ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಆಯ್ಕೆ ಸಮಿತಿ ಭಾನುವಾರ ತಂಡವನ್ನು ಆಯ್ಕೆ ಮಾಡಲಿದ್ದು ಯುವ ಕ್ರಿಕೆಟಿಗರಿಗೆ ಅವಕಾಶ ನೀಡಬೇಕು ಎಂದು ಗಂಭೀರ್ ಹೇಳಿದ್ದಾರೆ.
ವಿಂಡೀಸ್‌ಗೆ ಭಾರತ ತಂಡದ ಆಯ್ಕೆ ಮುಂದಕ್ಕೆ..!
undefined
ಧೋನಿ ನಾಯಕರಾಗಿದ್ದಾಗ ಕೂಡಾ ಭವಿಷ್ಯದ ಬಗ್ಗೆ ದೃಷ್ಟಿ ನೆಟ್ಟಿದ್ದರು ಎಂದಿರುವ ಗಂಭೀರ್, ಆಸ್ಟ್ರೇಲಿಯಾ ಪ್ರವಾಸದ ವೇಳೆ ಧೋನಿ ಹೇಳಿದ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ. ಮೈದಾನ ದೊಡ್ಡದಿರುವುದರಿಂದ CB ಸರಣಿಯಲ್ಲಿ ಸಚಿನ್ ತೆಂಡುಲ್ಕರ್, ವಿರೇಂದ್ರ ಸೆಹ್ವಾಗ್ ಒಟ್ಟಾಗಿ ಆಡುವುದಿಲ್ಲ ಎಂದು ಧೋನಿ ತಮ್ಮಲ್ಲಿ ಹೇಳಿದ್ದರು ಎಂದು ಗೌತಿ ಗುಟ್ಟು ಬಿಟ್ಟುಕೊಟ್ಟಿದ್ದಾರೆ.
ಕೊಹ್ಲಿ ನಾಯಕತ್ವ ಪ್ರಶ್ನಿಸಿದ ಗಂಭೀರ್ ವಿರುದ್ಧ ಫ್ಯಾನ್ಸ್ ಗರಂ!
ಈಗ ಯುವಕರಿಗೆ ಅವಕಾಶ ನೀಡಬೇಕು. ರಿಷಭ್ ಪಂತ್, ಸಂಜು ಸ್ಯಾಮ್ಸನ್, ಇಶನ್ ಕಿಶನ್ ಇಲ್ಲವೇ ಯಾರಲ್ಲಿ ವಿಕೆಟ್ ಕೀಪಿಂಗ್ ಮಾಡುವ ಸಾಮರ್ಥ್ಯವಿದೆಯೋ ಅವರಿಗೆ ಅವಕಾಶ ನೀಡಬೇಕು ಎಂದು ಗಂಭೀರ್ ಹೇಳಿದ್ದಾರೆ.
ಧೋನಿ ಭಾರತದ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಹಾಗಂತ ತಂಡದ ಎಲ್ಲಾ ಶ್ರೇಯಸ್ಸನ್ನು ಧೋನಿಗೆ ನೀಡುವುದು, ವಿಫಲತೆಯನ್ನೂ ಧೋನಿ ತಲೆಗೆ ಕಟ್ಟುವುದು ಸರಿಯಲ್ಲ. ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ, ದ್ರಾವಿಡ್ ನಾಯಕತ್ವದಲ್ಲೂ ಭಾರತ ಸರಣಿ ಗೆಲುವು ದಾಖಲಿಸಿದೆ ಎಂದು ಗಂಭೀರ್ ಹೇಳಿದ್ದಾರೆ.