ಸೋಲು ಮರೆತು ಇಂಗ್ಲೆಂಡ್ ಕ್ರಿಕೆಟಿಗನಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಲು ಮುಂದಾದ ನ್ಯೂಜಿಲೆಂಡ್..!

Published : Jul 19, 2019, 05:14 PM IST
ಸೋಲು ಮರೆತು ಇಂಗ್ಲೆಂಡ್ ಕ್ರಿಕೆಟಿಗನಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಲು ಮುಂದಾದ ನ್ಯೂಜಿಲೆಂಡ್..!

ಸಾರಾಂಶ

ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದವೇ ಅದ್ಭುತ ಪ್ರದರ್ಶನ ತೋರುವ ಮೂಲಕ ಇಂಗ್ಲೆಂಡ್ ಚೊಚ್ಚಲ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಬೆನ್ ಸ್ಟೋಕ್ಸ್‌ಗೆ ಇದೀಗ ಕಿವೀಸ್ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಲು ಮುಂದಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ವೆಲ್ಲಿಂಗ್ಟನ್[ಜು.19]: ಇಂಗ್ಲೆಂಡ್ ವಿಶ್ವಕಪ್ ಗೆಲುವಿನ ರೂವಾರಿ ಆಲ್ರೌಂಡರ್ ಬೆನ್ ಸ್ಟೋಕ್ಸ್, ನ್ಯೂಜಿಲೆಂಡ್ ವರ್ಷದ ಕ್ರಿಕೆಟಿಗನಾಗಿ ನಾಮನಿರ್ದೇಶನಗೊಂಡಿದ್ದಾರೆ. ಇದರ ಜತೆಗೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಕೂಡಾ ವರ್ಷದ ಕ್ರಿಕೆಟಿಗನಾಗಿ ನಾಮನಿರ್ದೇಶನಗೊಂಡಿದ್ದಾರೆ.

ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಅಜೇಯ 84 ರನ್ ಬಾರಿಸುವ ಮೂಲಕ ಪಂದ್ಯ ಟೈ ಆಗುವಂತೆ ಮಾಡುವಲ್ಲಿ ಯಶಸ್ವಿಯಾದರು. ಅಲ್ಲದೇ ಸೂಪರ್ ಓವರ್’ನಲ್ಲೂ ಬೌಂಡರಿ ಬಾರಿಸುವ ಮೂಲಕ 15 ರನ್ ಆಗುವಂತೆ ಮಾಡಿದ್ದರು. ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಕೂಡಾ 15 ರನ್ ಬಾರಿಸಿತು. ಅಂತಿಮವಾಗಿ ಅತಿ ಹೆಚ್ಚು ಬೌಂಡರಿ ಬಾರಿಸಿದ್ದ ಆದಾರದಲ್ಲಿ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಯಿತು.

ವಿಲನ್ ಈಗ ಹೀರೋ; ಹೀರೋ ಆಗಿದ್ದವ ಝಿರೋ: ಇದು ವಿಶ್ವಕಪ್ ಕತೆ!

ನ್ಯೂಜಿಲೆಂಡ್’ನಲ್ಲಿ ಜನಿಸಿದ ಬೆನ್ ಸ್ಟೋಕ್ಸ್, 12 ವರ್ಷದವರಿದ್ದಾಗ ತಮ್ಮ ಕುಟುಂಬದೊಂದಿಗೆ ಇಂಗ್ಲೆಂಡ್’ಗೆ ತೆರಳಿದ್ದರು. ಸ್ಟೋಕ್ಸ್ ತಂದೆ ಗಿರಾರ್ಡ್ ರಗ್ಬಿ ಆಟಗಾರರಾಗಿದ್ದು, ಇಂಗ್ಲೆಂಡ್ ತಂಡದ ಕೋಚ್ ಆಗಲು ಅಲ್ಲಿಗೆ ತೆರಳಿದ್ದರು. ಆ ಬಳಿಕ ತಂದೆ ಗಿರಾರ್ಡ್ ಹಾಗೂ ಹಾಗು ಡೆಬ್ ವಾಪಾಸ್ ನ್ಯೂಜಿಲೆಂಡ್’ಗೆ ಮರಳಿ ಕ್ರಿಸ್ಟ್’ಚರ್ಚ್’ನಲ್ಲಿ ಜೀವನ ಮುಂದುವರೆಸಿದರು. ಆದರೆ ಬೆನ್ ಸ್ಟೋಕ್ಸ್ ಮಾತ್ರ ಇಂಗ್ಲೆಂಡ್’ನಲ್ಲೇ ಉಳಿದರು.

ಸ್ಟೋಕ್ಸ್ ಅವರನ್ನು ನ್ಯೂಜಿಲೆಂಡ್ ವರ್ಷದ ಕ್ರಿಕೆಟಿಗನಾಗಿ ನಾಮನಿರ್ದೇಶನ ಮಾಡಿರುವುದರ ಬಗ್ಗೆ ಮಾತನಾಡಿದ ಮುಖ್ಯ ತೀರ್ಪುಗಾರ ಕ್ಯಾಮರೋನ್ ಬೆನ್ನೆಟ್, ’ಸ್ಟೋಕ್ಸ್ ನ್ಯೂಜಿಲೆಂಡ್ ಪರ ಆಡದೇ ಇರಬಹುದು. ಆದರೆ ಅವರ ಪೋಷಕರು ವಾಸಿಸುತ್ತಿರುವ ಕ್ರಿಸ್ಟ್’ಚರ್ಚ್’ನಲ್ಲಿ ಬೆನ್ ಸ್ಟೋಕ್ಸ್ ಜನಿಸಿದ್ದು. ಅದಕ್ಕೆ ದೇಶದ ಕೆಲವರು ಸ್ಟೋಕ್ಸ್‌ನನ್ನು ನಮ್ಮವನೆ ಎಂದು ಭಾವಿಸುತ್ತಾರೆ ಎಂದಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕ್ರೈಸ್ಟ್‌ಚರ್ಚ್ ಪವಾಡ: ಕಿವೀಸ್ ಎದುರು ಐತಿಹಾಸಿಕ ಡ್ರಾ ಸಾಧಿಸಿದ ವೆಸ್ಟ್ ಇಂಡೀಸ್!
20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!