ರಾಷ್ಟ್ರೀಯ ಉದ್ದೀಪನಾ ನಿಗ್ರಹ ಘಟಕ 6 ತಿಂಗಳು ಸ್ತಬ್ಧ

By Kannadaprabha News  |  First Published Aug 25, 2019, 3:31 PM IST

 ಭಾರತದ ರಾಷ್ಟ್ರೀಯ ಉದ್ದೀಪನಾ ಪರೀಕ್ಷಾ ಪ್ರಯೋಗಾಲಯವನ್ನು ವಿಶ್ವ ಉದ್ದೀಪನಾ ನಿಗ್ರಹ ಘಟಕ ಅಮಾನತು ಮಾಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 


ನವದೆಹಲಿ: ಭಾರತದ ರಾಷ್ಟ್ರೀಯ ಉದ್ದೀಪನಾ ಪರೀಕ್ಷಾ ಪ್ರಯೋಗಾಲಯ (ಎನ್ ಡಿಟಿಎಲ್) ಮಾನ್ಯತೆಯನ್ನು ವಿಶ್ವ ಉದ್ದೀಪನಾ ನಿಗ್ರಹ ಘಟಕ (ವಾಡಾ) ಮುಂದಿನ 6 ತಿಂಗಳ ಕಾಲ ಅಮಾನತಿನಲ್ಲಿಟ್ಟಿರುವ ಹಿನ್ನೆಲೆಯಲ್ಲಿ ಭವಿಷ್ಯದ ಬಗ್ಗೆ ಸ್ಪಷ್ಟತೆ ಕೋರಿ ಭಾರತೀಯ ಕ್ರಿಕೆಟ್ ನಿಯತ್ರಣ ಮಂಡಳಿ, ರಾಷ್ಟ್ರೀಯ ಉದ್ದೀಪನಾ ನಿಗ್ರಹ ಘಟಕ (ನಾಡಾ)ಗೆ ಪತ್ರ ಬರೆದಿದೆ.

ದುಲೀಪ್‌ ಟ್ರೋಫಿ ವೇಳೆ ಕ್ರಿಕೆಟಿಗರಿಗೆ ಡೋಪಿಂಗ್ ಟೆಸ್ಟ್‌

Latest Videos

undefined

ನಾಡಾದ ಪ್ರಧಾನ ನಿರ್ದೇಶಕ ಮತ್ತು ಸಿಇಒಗೆ ಬರೆಯಲಾದ ಪತ್ರದಲ್ಲಿ, ಇದಕ್ಕೂ ಮೊದಲು ದೇಸಿ ಟೂರ್ನಿಗಳಲ್ಲಿ ಎನ್‌ಡಿಟಿಎಲ್ ಸಂಗ್ರಹಿಸಿದ ಮಾದರಿ ರಕ್ತ ಮತ್ತು ಮೂತ್ರದ ಸ್ಯಾಂಪಲ್ ಗಳ ಬಗ್ಗೆಯೂ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಒಲಿಂಪಿಕ್ ಗೇಮ್ಸ್ ಆರಂಭವಾಗಲೂ ಇನ್ನೂ 1 ವರ್ಷ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ಎನ್‌ಡಿಟಿಎಲ್ ಅಮಾನತು ಶಿಕ್ಷೆಗೆ ಒಳಗಾಗಿರುವುದು ನಾಡಾವನ್ನು ಚಿಂತೆಗೀಡು ಮಾಡಿದೆ.

ಕೊನೆಗೂ ನಾಡಾ ವ್ಯಾಪ್ತಿಗೆ ಸೇರಿದ ಬಿಸಿಸಿಐ!

ವಾಡಾದ ಅಧಿಕಾರಿಗಳು ಪರಿಶೀಲನೆ ನಡೆಸಲು ಬಂದಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಉದ್ದಿಪನಾ ಪರೀಕ್ಷಾ ಪ್ರಯೋಗಾಲಯವು ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿರಲಿಲ್ಲ ಎನ್ನುವುದು ತಿಳಿದು ಬಂದಿದೆ. ಮಾರ್ಗದರ್ಶಿ
ಸೂತ್ರಗಳ ಅನ್ವಯ, ಉದ್ದೀಪನಾ ಪರೀಕ್ಷಾ ಪ್ರಯೋಗಾಲಯಗಳು ಅಂತಾರಾಷ್ಟ್ರೀಯ ದರ್ಜೆಯದ್ದಾಗಿವೆಯೇ ಇಲ್ಲವೇ ಎಂಬುದರ ಬಗ್ಗೆ ಸ್ಪಷ್ಟತೆ ನೀಡದ ಹಿನ್ನೆಲೆಯಲ್ಲಿ ಮುಂದಿನ ಆರು ತಿಂಗಳ ಕಾಲ ಎನ್‌ಡಿಟಿಎಲ್ ಮಾನ್ಯತೆಯನ್ನು ವಾಡಾ ರದ್ದುಗೊಳಿಸಿದೆ. ಇದನ್ನು ಪ್ರಶ್ನಿಸಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದೆ
ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಶುಕ್ರವಾರ ಹೇಳಿದ್ದರು. 
 

click me!