ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ 57ನೇ ಪಂದ್ಯದಲ್ಲಿ ಅಂಕಪಟ್ಟಿ ನಂ.1 ಸ್ಥಾನದಲ್ಲಿದ್ದ ಜೈಪುರ ತಂಡಕ್ಕೆ ಆಘಾತ ನೀಡುವಲ್ಲಿ ತಮಿಳ್ ತಲೈವಾಸ್ ಯಶಸ್ವಿಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ಆ.24]: ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಬಲಿಷ್ಠ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ತಮಿಳ್ ತಲೈವಾಸ್ 21-24 ಅಂತರದ ಜಯ ದಾಖಲಿಸಿದೆ. ನಂ.1 ಸ್ಥಾನದಲ್ಲಿದ್ದ ಜೈಪುರ ವಿರುದ್ಧ 12ನೇ ಸ್ಥಾನದಲ್ಲಿದ್ದ ತಮಿಳ್ ತಲೈವಾಸ್’ಗೆ ಶರಣಾಗಿದೆ. ಈ ಗೆಲುವಿನೊಂದಿಗೆ ತಲೈವಾಸ್ ತಂಡ 9ನೇ ಸ್ಥಾನಕ್ಕೇರಿದೆ.
PKL 7: ಬೆಂಗಳೂರು ಬುಲ್ಸ್‌ಗೆ ಸೋಲಿನ ಶಾಕ್ ಕೊಟ್ಟ ದಬಾಂಗ್ ಡೆಲ್ಲಿ
ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಜೈಪುರ ಮೊದಲಾರ್ಧದಲ್ಲಿ ಅಂಕಗಳ ಗಳಿಕೆಯಲ್ಲಿ ಮುನ್ನಡೆ ಸಾಧಿಸುವಲ್ಲಿ ಸಫಲವಾಯಿತು. ಮೊದಲಾರ್ಧ ಮುಕ್ತಾಯದ ವೇಳೆಗೆ ಜೈಪುರ ನಿರೀಕ್ಷೆಯಂತೆಯೇ 14-11 ಅಂಕಗಳ ಮುನ್ನಡೆ ಸಾಧಿಸಿತು.
Game, set, match, !
It's not easy to tame but Siddharth 'Baahubali' Desai & Co. did so as they left it late to win !
Keep watching on Star Sports and Hotstar pic.twitter.com/q57Nm8ynwT
ಇನ್ನು ದ್ವಿತಿಯಾರ್ಧದಲ್ಲಿ ಮಿಂಚಿನ ಪ್ರದರ್ಶನ ತೋರಿದ ತಲೈವಾಸ್ ತಂಡ ನಿರಂತರ ಅಂಕ ಗಳಿಸುವ ಮೂಲಕ ಜೈಪುರದ ಮೇಲೆ ಒತ್ತಡ ಹೇರುತ್ತಾ ಸಾಗಿತು. ಕೊನೆಯ ಕ್ಷಣದವರೆಗೂ ಜಯದ ಮಾಲೆ ಯಾರಿಗೆ ಎನ್ನುವುದು ಖಚಿತವಾಗಿರಲಿಲ್ಲ. ಕಡೆಯ ನಿಮಿಷದಲ್ಲಿ ತಲೈವಾಸ್ ಪರ ಡು-ಆರ್-ಡೈ ರೇಡ್’ನಲ್ಲಿ ಫರಾದ್ ಮಿಲ್’ಗರ್ಧನ್ ಅಂಕ ಗಳಿಸುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದಿತ್ತರು.
ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ಪ್ರಕಟ!
ತಮಿಳ್ ತಲೈವಾಸ್ ಪರ ವಿಶಾಲ್ ಭಾರದ್ವಾಜ್ 8 ಅಂಕ ಪಡೆದರೆ, ರಾದ್ ಮಿಲ್’ಗರ್ಧನ್ 4 ಹಾಗೂ ಸಿದ್ದಾರ್ಥ್ ದೇಸಾಯಿ ಮತ್ತು ಅಬ್ಜೋರ್ ಮಿಘಾನಿ ತಲಾ 3 ಅಂಕ ಪಡೆಯುವ ಮೂಲಕ ತಂಡದ ಗೆಲುವಿಗೆ ಕಾಣಿಕೆ ನೀಡಿದರು.
ಅಂಕಿ-ಅಂಶ:
* ಫರ್ಹಾದ್ ಮಿಲ್’ಗರ್ಧನ್ 50ನೇ ಪ್ರೊ ಕಬಡ್ಡಿ ಪಂದ್ಯವನ್ನಾಡಿದರು.
* ಫರ್ಹಾದ್ ಮಿಲ್’ಗರ್ಧನ್ 100 ಅಂಕ ಕಲೆಹಾಕಿದ ಸಾಧನೆ ಮಾಡಿದರು.
* ದೀಪಕ್ ನಿವಾಸ್ ಹೂಡಾ ಪ್ರೊ ಕಬಡ್ಡಿ ಟೂರ್ನಿಯಲ್ಲಿ 1,600 ಅಂಕ ಕಲೆಹಾಕಿದ ಸಾಧನೆ ಮಾಡಿದರು.