ಅಂತಾರಾಜ್ಯ ಅಥ್ಲೆ​ಟಿಕ್ಸ್‌ ಕೂಟ: ವಿಶ್ವ ಚಾಂಪಿ​ಯ​ನ್‌​ಶಿ​ಪ್‌​ಗೆ ಅರ್ಹತೆ ಪಡೆದ ಶ್ರೀಶಂಕ​ರ್‌

By Kannadaprabha NewsFirst Published Jun 19, 2023, 9:35 AM IST
Highlights

* ಹಂಗೇ​ರಿ​ಯ ಬೂಡಾ​ಪೆ​ಸ್ಟ್‌​ನಲ್ಲಿ ನಡೆ​ಯ​ಲಿ​ರುವ ಅಥ್ಲೆ​ಟಿಕ್ಸ್‌ ವಿಶ್ವ ಚಾಂಪಿ​ಯನ್‌ಶಿಪ್‌ಗೆ ಅರ್ಹತೆ ಪಡೆ​ದ ಶ್ರೀಶಂಕ​ರ್‌
* ವಿಶ್ವ ಚಾಂಪಿ​ಯ​ನ್‌​ಶಿ​ಪ್‌ಗೆ ಅರ್ಹತೆ ಪಡೆ​ಯ​ಲು 8.25 ಮೀ. ದೂರ ಜಿಗಿ​ಯ​ಬೇ​ಕಿತ್ತು
*  ಶ್ರೀಶಂಕರ್‌ 8.41 ಮೀ. ದೂರಕ್ಕೆ ಜಿಗಿದು ಅಗ್ರ​ಸ್ಥಾನದೊಂದಿಗೆ ಫೈನ​ಲ್‌​ಗೇ​ರಿ​ದರು

ಭುವ​ನೇ​ಶ್ವ​ರ(ಜೂ.19): ಭಾರ​ತದ ತಾರಾ ಲಾಂಜ್‌​ಜಂಪ್‌ ಪಟು ಶ್ರೀಶಂಕರ್‌ ಮುರಳಿ ಆಗ​ಸ್ಟ್‌​ನಲ್ಲಿ ಹಂಗೇ​ರಿ​ಯ ಬೂಡಾ​ಪೆ​ಸ್ಟ್‌​ನಲ್ಲಿ ನಡೆ​ಯ​ಲಿ​ರುವ ಅಥ್ಲೆ​ಟಿಕ್ಸ್‌ ವಿಶ್ವ ಚಾಂಪಿ​ಯನ್‌ಶಿಪ್‌ಗೆ ಅರ್ಹತೆ ಪಡೆ​ದಿ​ದ್ದಾರೆ. ಭಾನು​ವಾರ ಇಲ್ಲಿ ನಡೆದ ರಾಷ್ಟ್ರೀಯ ಅಂತಾರಾಜ್ಯ ಅಥ್ಲೆ​ಟಿಕ್ಸ್‌ ಕೂಟ​ದ​ ಅರ್ಹತಾ ಸುತ್ತಿ​ನಲ್ಲಿ ಶ್ರೀಶಂಕರ್‌ 8.41 ಮೀ. ದೂರಕ್ಕೆ ಜಿಗಿದು ಅಗ್ರ​ಸ್ಥಾನದೊಂದಿಗೆ ಫೈನ​ಲ್‌​ಗೇ​ರಿ​ದರು. 

ವಿಶ್ವ ಚಾಂಪಿ​ಯ​ನ್‌​ಶಿ​ಪ್‌ಗೆ ಅರ್ಹತೆ ಪಡೆ​ಯ​ಲು 8.25 ಮೀ. ದೂರ ಜಿಗಿ​ಯ​ಬೇ​ಕಿತ್ತು. ಇದನ್ನು ಮುರಳಿ ಮೊದಲ ಪ್ರಯ​ತ್ನ​ದಲ್ಲೇ ಸಾಧಿ​ಸಿ​ದರೂ ಕೇವಲ 1 ಸೆಂ. ಮೀ. ಅಂತ​ರ​ದಲ್ಲಿ ರಾಷ್ಟ್ರೀಯ ದಾಖ​ಲೆ​ಯಿಂದ ವಂಚಿ​ತ​ರಾ​ದರು. ಮಾರ್ಚ್‌ನಲ್ಲಿ ಕರ್ನಾ​ಟ​ಕದ ಬಳ್ಳಾ​ರಿ​ಯಲ್ಲಿ ನಡೆ​ದಿದ್ದ ಅಥ್ಲೆ​ಟಿಕ್ಸ್‌ ಕೂಟ​ದಲ್ಲಿ ಜೆಸ್ವಿನ್‌ ಆಲ್ಡಿರನ್‌ 8.42 ಮೀ. ದೂರಕ್ಕೆ ಜಿಗಿ​ದು ರಾಷ್ಟ್ರೀಯ ದಾಖಲೆ ಬರೆ​ದಿ​ದ್ದ​ರು.

Latest Videos

ಜಾವೆಲಿನ್‌: ಮನು ಫೈನ​ಲ್‌​ಗೆ

ಪುರು​ಷರ ಜಾವೆ​ಲಿನ್‌ ಎಸೆ​ತ​ದಲ್ಲಿ ಕರ್ನಾ​ಟ​ಕದ ಡಿ.ಪಿ.​ಮನು ಫೈನಲ್‌ ಪ್ರವೇ​ಶಿ​ಸಿ​ದ್ದಾರೆ. ಅರ್ಹತಾ ಸುತ್ತಿ​ನಲ್ಲಿ ಅವರು 76.21 ಮೀ. ದೂರ​ಕ್ಕೆ ಎಸೆದು 5ನೇ ಸ್ಥಾನಿ​ಯಾ​ದರು. ಇದೇ ವೇಳೆ ಮಹಿ​ಳೆ​ಯ​ರ 400 ಮೀ. ಹರ್ಡಲ್ಸ್‌ನಲ್ಲಿ ಸಿಂಚಲ್‌ ಕಾವೇ​ರಮ್ಮ, ಪುರುಷರ ವಿಭಾ​ಗ​ದಲ್ಲಿ ಪಿ.ಯ​ಶಸ್‌, 200 ಮೀ. ಓಟದಲ್ಲಿ ಶಶಿ​ಕಾಂತ್‌ ವೀರೂ​ಪಾಕ್ಷ, ಪುರು​ಷರ ಲಾಂಗ್‌ ಜಂಪ್‌ನಲ್ಲಿ ಸಿದ್ಧಾಥ್‌ರ್‍ ಮೋಹನ್‌, ಎಸ್‌.ಲೋ​ಕೇಶ್‌ ಫೈನಲ್‌ ಪ್ರವೇ​ಶಿ​ಸಿ​ದ್ದಾರೆ. ಕೂಟದ ಕೊನೆ ದಿನ​ವಾದ ಸೋಮ​ವಾರ ಫೈನಲ್‌ ಸ್ಪರ್ಧೆ​ಗಳು ನಡೆ​ಯ​ಲಿ​ವೆ.

Wrestlers Protest ಬಬಿತಾರಿಂದ ಕುಸ್ತಿ ಹೋರಾಟಕ್ಕೆ ಧಕ್ಕೆ: ಸಾಕ್ಷಿ ಮಲಿಕ್

ರಾಜ್ಯದ ಸಂದೇಶ್‌ಗೆ ಏಷ್ಯಾಡ್‌ ಅರ್ಹ​ತೆ

ರಾಷ್ಟ್ರೀಯ ಅಂತಾ​ರಾಜ್ಯ ಅಥ್ಲೆ​ಟಿಕ್ಸ್‌ ಚಾಂಪಿ​ಯ​ನ್‌​ಶಿ​ಪ್‌​ನಲ್ಲಿ ಕರ್ನಾ​ಟ​ಕ ಮತ್ತೆ​ರಡು ಪದಕ ಬಾಚಿ​ಕೊಂಡಿದೆ. ಜೊತೆಗೆ ರಾಜ್ಯದ ಜೆಸ್ಸಿ ಸಂದೇಶ್‌ ಹೈಜಂಪ್‌ನಲ್ಲಿ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಗಿಟ್ಟಿ​ಸಿ​ಕೊಂಡಿ​ದ್ದಾರೆ. ಶನಿ​ವಾರ ಪುರು​ಷರ ವಿಭಾ​ಗದ ಸ್ಪರ್ಧೆ​ಯಲ್ಲಿ ಸಂದೇ​ಶ್‌ 2.24 ಮೀ. ಎತ್ತ​ರಕ್ಕೆ ನೆಗೆದು ಬೆಳ್ಳಿ ಗೆದ್ದರೆ, ಮಹಾ​ರಾ​ಷ್ಟ್ರದ ಸರ್ವೇಶ್‌ ಕೂಡಾ 2.24 ಎತ್ತ​ರಕ್ಕೆ ನೆಗೆದು ಚಿನ್ನ ಪಡೆ​ದರು. ಏಷ್ಯನ್‌ ಗೇಮ್ಸ್‌ಗೆ ಅರ್ಹ​ತೆ ಪಡೆ​ಯ​ಲು 2.24 ಮೀ. ಎತ್ತರ ನೆಗೆ​ಯ​ಬೇ​ಕಿದ್ದು, ಇಬ್ಬ​ರೂ ಕೂಟಕ್ಕೆ ಪ್ರವೇಶ ಪಡೆ​ದರು. ಇನ್ನು, ಮಹಿ​ಳೆ​ಯರ ಪೋಲ್‌ ವಾಲ್ಟ್‌​ನ​ಲ್ಲಿ ರಾಜ್ಯದ ಸಿಂಧುಶ್ರೀ 3.80 ಮೀ. ಎತ್ತ​ರಕ್ಕೆ ನೆಗೆದು ಬೆಳ್ಳಿ ಜಯಿ​ಸಿ​ದರು.

ಜ್ಯೋತಿಗೆ 2ನೇ ಚಿನ್ನ

ಮಹಿ​ಳೆ​ಯರ 100 ಮೀ. ಹರ್ಡ​ಲ್ಸ್‌​ನಲ್ಲಿ 12.92 ಸೆಕೆಂಡ್‌​ಗ​ಳಲ್ಲಿ ಕ್ರಮಿ​ಸಿದ ಆಂಧ್ರದ ಜ್ಯೋತಿ ಯರ್ರಾಜಿ ಕೂಟದ 2ನೇ ಚಿನ್ನ ಗೆಲ್ಲು​ವು​ದರ ಜೊತೆಗೆ ಏಷ್ಯನ್‌ ಗೇಮ್ಸ್‌ಗೂ ಅರ್ಹತೆ ಗಿಟ್ಟಿ​ಸಿ​ದರು. ಈ ಸ್ಪರ್ಧೆ​ಯಲ್ಲಿ ಕರ್ನಾ​ಟ​ಕದ ಮೇಧಾ ರಾಜೇಶ್‌ ಕಾಮ​ತ್‌​(13.89 ಸೆ.) 4ನೇ ಸ್ಥಾನಕ್ಕೆ ತೃಪ್ತಿ​ಪ​ಟ್ಟರು. 2022ರ ಕಾಮನ್‌ವೆಲ್ತ್‌ ಗೇಮ್ಸ್‌ನ ಹೈಜಂಪ್‌ನಲ್ಲಿ ಕಂಚು ಗೆದ್ದಿದ್ದ ತೇಜ​ಸ್ವಿನ್‌ ಶಂಕರ್‌ ಈಗ ಡೆಕಾ​ಥ್ಲಾನ್‌ ಸ್ಪರ್ಧಿಯಾ​ಗಿದ್ದು, ಅಂತಾ​ರಾಜ್ಯ ಕೂಟದಲ್ಲಿ ಚಿನ್ನ ಗೆದ್ದ ದೆಹಲಿ ಅಥ್ಲೀಟ್‌ ಏಷ್ಯಾಡ್‌ಗೆ ಅರ್ಹತೆ ಪಡೆ​ದ​ರು.

ಲೂಝಾನ್‌ ಡೈಮಂಡ್‌ ಲೀಗ್‌: ನೀರಜ್‌ ಸ್ಪರ್ಧೆ

ನವ​ದೆ​ಹ​ಲಿ: ಗಾಯ​ದಿಂaದ ಚೇತ​ರಿ​ಸಿ​ಕೊಂಡಿ​ರುವ ಒಲಿಂಪಿಕ್‌ ಜಾವೆ​ಲಿನ್‌ ಥ್ರೋ ಚಾಂಪಿ​ಯನ್‌ ನೀರಜ್‌ ಚೋಪ್ರಾ ಜೂ.30ರಂದು ಸ್ವಿಜರ್‌ಲೆಂಡ್‌ನ ಲೂಝಾನ್‌ನಲ್ಲಿ ನಡೆ​ಯ​ಲಿ​ರುವ ಡೈಮಂಡ್‌ ಲೀಗ್‌ನಲ್ಲಿ ಸ್ಪರ್ಧಿ​ಸ​ಲಿ​ದ್ದಾರೆ ಎಂದು ಆಯೋ​ಜ​ಕರು ತಿಳಿ​ಸಿ​ದ್ದರೆ. ತಮ್ಮ ಸ್ಪರ್ಧೆ ಬಗ್ಗೆ ನೀರಜ್‌ ಇನ್ನೂ ಅಧಿ​ಕೃತ ಮಾಹಿತಿ ಹಂಚಿ​ಕೊಂಡಿಲ್ಲ. ಮೇ 5ರಂದು ನಡೆ​ದಿದ್ದ ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್‌ ಮೊದಲ ಸ್ಥಾನ ಪಡೆ​ದಿ​ದ್ದ​ರು.

click me!