ನ್ಯಾಷನಲ್ ಗೇಮ್ಸ್‌ನಲ್ಲಿ ಹಾಶಿಕಾ ರಾಮಚಂದ್ರಗೆ ಒಲಿದ 6ನೇ ಚಿನ್ನ
ಶುಕ್ರವಾರ ಮತ್ತೆರಡು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಹಾಶಿಕಾ ಶೈನಿಂಗ್
ಕರ್ನಾಟಕದ ಪಾಲಾದ ಈಜಿನಲ್ಲಿ 8, ಯೋಗಾಸನದಲ್ಲಿ 2 ಪದಕ
ಅಹಮದಾಬಾದ್(ಅ.08): ಕರ್ನಾಟಕದ 14 ವರ್ಷದ ಹಾಶಿಕಾ ರಾಮಚಂದ್ರ 36ನೇ ರಾಷ್ಟ್ರೀಯ ಕ್ರೀಡಾಕೂಟದ ಶ್ರೇಷ್ಠ ಈಜುಪಟುವಾಗಿ ಹೊರಹೊಮ್ಮಿದ್ದಾರೆ. ಶುಕ್ರವಾರ ಮತ್ತೆರಡು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಹಾಶಿಕಾ ಗಮನ ಸೆಳೆದರು. ಕೂಟದಲ್ಲಿ ಅವರು 6 ಚಿನ್ನ, 1 ಕಂಚಿನ ಪದಕ ಗೆದ್ದಿದ್ದಾರೆ.
ಶುಕ್ರವಾರ ಕರ್ನಾಟಕ ಈಜಿನಲ್ಲಿ 8, ಯೋಗಾಸನದಲ್ಲಿ 2 ಪದಕಗಳನ್ನು ಜಯಿಸಿತು. 21 ಚಿನ್ನ, 21 ಬೆಳ್ಳಿ, 33 ಕಂಚಿನೊಂದಿಗೆ ಒಟ್ಟು 75 ಪದಕ ಗೆದ್ದಿದ್ದು ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಮಹಿಳೆಯರ 400 ಮೀ. ಫ್ರೀ ಸ್ಟೈಲ್‌ನಲ್ಲಿ ಹಾಶಿಕಾ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದರು. 200 ಮೀ. ವೈಯಕ್ತಿಕ ಮೆಡ್ಲೆಯಲ್ಲಿ ಹಾಶಿಕಾಗೆ ಚಿನ್ನ ಒಲಿಯಿತು. ಪುರುಷರ 50 ಮೀ. ಬ್ಯಾಕ್ ಕ್‌ನಲ್ಲಿ ಶ್ರೀಹರಿ ನಟರಾಜ್ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದರೆ, ಇದೇ ಸ್ಪರ್ಧೆಯಲ್ಲಿ ಎಸ್.ಶಿವಾ ಕಂಚು ಪಡೆದರು.
200 ಮೀ. ವೈಯಕ್ತಿಕ ಮೆಡ್ಲೆಯಲ್ಲಿ ಶಿವಾಗೆ ಬೆಳ್ಳಿ ಒಲಿಯಿತು. ಇನ್ನು 400 ಮೀ. ಫ್ರೀ ಸ್ಟೈಲ್‌ನಲ್ಲಿ ಅನೀಶ್ ಗೌಡ ಕಂಚಿಗೆ ತೃಪ್ತಿಪಟ್ಟರು. ಮಹಿಳೆಯರ 50 ಮೀ. ಬ್ಯಾಕ್‌ಸ್ಟೊ್ರೕಕ್ ಸ್ಪರ್ಧೆಯಲಿ ರಿಧಿಮಾ ವೀರೇಂದ್ರಕುಮಾರ್ ಬೆಳ್ಳಿ ಗೆದ್ದರು. ದಿನದ ಸ್ಪರ್ಧೆಯಲ್ಲಿ 8ನೇ ಪದಕ 4*100 ಮೀ. ಫ್ರೀ ಸ್ಟೈಲ್ ರಿಲೇಯಲ್ಲಿ ದೊರೆಯಿತು. ಶಾಂಭವ್, ನೀನಾ, ರುಜುಲಾ ಹಾಗೂ ಶ್ರೀಹರಿ ಅವರನ್ನೊಳಗೊಂಡ ತಂಡ ಚಿನ್ನ ಜಯಿಸಿತು.
Pro Kabaddi League: ಪ್ರೊ ಕಬಡ್ಡಿ ಟೂರ್ನಿಗೆ ಭರ್ಜರಿ ಚಾಲನೆ, ದಬಾಂಗ್ ಡೆಲ್ಲಿ ಶುಭಾರಂಭ
ಇದಕ್ಕೂ ಮುನ್ನ ಯೋಗಾಸನದಲ್ಲಿ ರಾಜ್ಯಕ್ಕೆ 2 ಕಂಚು ದೊರೆಯಿತು. ಪುರುಷರ ಸಾಂಪ್ರದಾಯಿಕ ವಿಭಾಗದಲ್ಲಿ ಮೊಹಮದ್ ಫಿರೋಜ್, ಮಹಿಳೆಯರ ಸಾಂಪ್ರದಾಯಿಕ ವಿಭಾಗದಲ್ಲಿ ನಿರ್ಮಲಾ ಶುಭಾಷ್ ಪದಕ ಗೆದ್ದರು.
ಇಂಡಿಯನ್ ಸೂಪರ್ ಲೀಗ್: ಕೇರಳ ಶುಭಾರಂಭ
ಕೊಚ್ಚಿ: 9ನೇ ಆವೃತ್ತಿಯ ಐಎಸ್‌ಎಲ್‌ನಲ್ಲಿ ಕಳೆದ ಆವೃತ್ತಿಯ ರನ್ನರ್-ಅಪ್, ಮಾಜಿ ಚಾಂಪಿಯನ್ ಕೇರಳ ಬ್ಲಾಸ್ಟರ್ಸ್ ಶುಭಾರಂಭ ಮಾಡಿದೆ. ಶುಕ್ರವಾರ ನಡೆದ ಈಸ್ಟ್ ಬೆಂಗಾಲ್ ವಿರುದ್ಧದ ಪಂದ್ಯದಲ್ಲಿ 3-1 ಗೋಲುಗಳಲ್ಲಿ ಗೆಲುವು ಸಾಧಿಸಿತು. ಕೇರಳ ಪರ ಏಡ್ರಿಯಾನ್(72 ನೇ ನಿಮಿಷ), ಇವಾನ್(82, 89ನೇ ನಿ.,) ಗೋಲು ಬಾರಿಸಿದರು. ಈಸ್ಟ್ ಬೆಂಗಾಲ್ ಪರ ಅಲೆಕ್ಸ್(88ನೇ ನಿ.,) ಏಕೈಕ ಗೋಲು ಗಳಿಸಿದರು.
ಹರ್ಮನ್‌ಪ್ರೀತ್ ವರ್ಷದ ಶ್ರೇಷ್ಠ ಹಾಕಿ ಆಟಗಾರ
ನವದೆಹಲಿ: ಭಾರತ ಪುರುಷರ ಹಾಕಿ ತಂಡದ ಉಪನಾಯಕ, ಢಿಪೆಂಡರ್ ಹರ್ಮನ್‌ಪ್ರೀತ್ ಸಿಂಗ್ ಸತತ 2ನೇ ಬಾರಿ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್(ಎಫ್‌ಐಎಚ್)ನ ವಾರ್ಷಿಕ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಈ ಸಾಧನೆ ಮಾಡಿದ ವಿಶ್ವದ 4ನೇ ಆಟಗಾರ ಎನಿಸಿಕೊಂಡಿದ್ದಾರೆ.
26 ವರ್ಷದ ಹರ್ಮನ್‌ಪ್ರೀತ್ 2021-21ರ ಸಾಲಿನ ಪ್ರೊ ಲೀಗ್ ಟೂರ್ನಿಯಲ್ಲಿ 16 ಪಂದ್ಯಗಳಲ್ಲಿ 18 ಗೋಲು ಬಾರಿಸಿದ್ದರು. ಅಲ್ಲದೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ, ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ್ದರು. ನೆದರ್ಲೆಂಡ್‌್ಸನ ಫೆಲಿಸ್ ಆಲ್ಬರ್ಸ್ ಶ್ರೇಷ್ಠ ಮಹಿಳಾ ಆಟಗಾರ್ತಿ ಪ್ರಶಸ್ತಿ ಪಡೆದಿದ್ದಾರೆ.