ಮಯಾಂಕ್ ಕೈಬಿಟ್ಟು, ಡೆಲ್ಲಿ ಬ್ಯಾಟ್ಸ್‌ಮನ್ ಖರೀದಿಸಿದ ಮುಂಬೈ !

By Web Desk  |  First Published Jul 31, 2019, 5:11 PM IST

2020ರ ಐಪಿಎಲ್ ಟೂರ್ನಿಗೆ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಸಿದ್ಧತೆ ಆರಂಭಿಸಿದೆ. ತಂಡದ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ರಿಲೀಸ್ ಮಾಡಿರುವ ಮುಂಬೈ ತಂಡ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟ್ಸ್‌ಮನ್ ಆಯ್ಕೆ ಮಾಡಿಕೊಂಡಿದೆ.


ಮುಂಬೈ(ಜು.31): ಐಪಿಎಲ್ ಟೂರ್ನಿಗೆ ಕೆಲ ಫ್ರಾಂಚೈಸಿಗಳು ಈಗಾಗಲೇ ಪ್ಲಾನಿಂಗ್ ಶುರು ಮಾಡಿದೆ. ಇದರಲ್ಲಿ ಹಾಲಿ ಚಾಂಪಿಯನ್ ಮುಂಬೈ ಈಗಾಗಲೇ ಒಂದು ಬದಲಾವಣೆ ಕೂಡ ಮಾಡಿದೆ. 2020ರಲ್ಲಿ ಚಾಂಪಿಯನ್ ಪಟ್ಟ  ಉಳಿಸಿಕೊಳ್ಳಲು ಮುಂಬೈ ಸಜ್ಜಾಗಿದೆ. ಇದಕ್ಕಾಗಿ ತಂಡ ಯುವ ಲೆಗ್ ಸ್ಪಿನ್ನರ್ ಮಯಾಂಕ್ ಮಾರ್ಕಂಡೆಯನ್ನು ಕೈಬಿಟ್ಟು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟ್ಸ್‌ಮನ್ ಖರೀದಿ ಮಾಡಲಾಗಿದೆ.

ಇದನ್ನೂ ಓದಿ: IPL ಹರಾಜು ನಿಷೇಧಿಸಲು ಆಗ್ರಹಿಸಿದವನಿಗೆ 25 ಸಾವಿರ ದಂಡ!

Tap to resize

Latest Videos

undefined

ಟ್ರಾನ್ಸ್‌ಫರ್ ಡೀಲ್ ಮೂಲಕ ಮುಂಬೈ ಇಂಡಿಯನ್ಸ್,  ಮಯಾಂಕ್ ಮಾರ್ಕಂಡೆ ರಿಲೀಸ್ ಮಾಡಿ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಶೆರ್ಫಾನೆ ರುದ್‍ಫೋರ್ಡ್‌ರನ್ನು ಖರೀದಿ ಮಾಡಿದೆ. ಮಯಾಂಕ್ ಅತ್ಯುತ್ತಮ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದಾರೆ. ಮಯಾಂಕ್ ಉತ್ತಮ ಕ್ರಿಕೆಟ್ ಭವಿಷ್ಯವಿದೆ. ಆದರೆ ಅನಿವಾರ್ಯವಾಗಿ ಮಯಾಂಕ್‌ರನ್ನು ತಂಡದಿಂದ ರಿಲೀಸ್ ಮಾಡುತ್ತಿದ್ದೇವೆ ಎಂದು ಮುಂಬೈ ಇಂಡಿಯನ್ಸ್ ಮಾಲೀಕ ಆಕಾಶ್ ಅಂಬಾನಿ ಹೇಳಿದ್ದಾರೆ.

ಇದನ್ನೂ ಓದಿ: IPL ಟೂರ್ನಿಯಲ್ಲಿ ಮಹತ್ತರ ಬದಲಾವಣೆ; 8ರ ಬದಲು 10 ತಂಡ?

ಆಲ್ರೌಂಡರ್ ಪ್ರದರ್ಶನದ ಮೂಲಕ ರುದ್‌ಫೋರ್ಡ್ ಎಲ್ಲರ ಗಮನಸೆಳೆದಿದ್ದಾರೆ. ಇದೀಗ ರುದ್‌ಫೋಡ್ ಮುಂಬೈ ಇಂಡಿಯನ್ಸ್ ಕುಟುಂಬ ಸೇರಿಕೊಂಡಿರುವುದು ಸಂತಸ ತಂದಿದೆ ಎಂದು ಅಕಾಶ್ ಹೇಳಿದ್ದಾರೆ. 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸ್ಪಿನ್ನರ್ ಕೊರತೆ ಅನುಭವಿಸಿತು. ಇದೀಗ ಮಯಾಂಕ್ ಸೇರ್ಪಡೆಯಿಂದ ಡೆಲ್ಲಿ ತಂಡ ಸ್ಪಿನ್ ವಿಭಾಗ ಬಲಿಷ್ಠವಾಗಿದೆ.

click me!