
ಹೈದರಾಬಾದ್[ಏ.29]: ಪ್ಲೇ-ಆಫ್‌ಗೇರಲು ಪೈಪೋಟಿಗೆ ಬಿದ್ದಿರುವ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಸೋಮವಾರ ಇಲ್ಲಿ ನಡೆಯಲಿರುವ 12ನೇ ಸುತ್ತಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಎರಡೂ ತಂಡಗಳು 11 ಪಂದ್ಯಗಳಿಂದ 10 ಅಂಕ ಗಳಿಸಿವೆ. ನೆಟ್ ರನ್‌ರೇಟ್ ಆಧಾರದ ಮೇಲೆ ಸನ್‌ರೈಸರ್ಸ್ 4ನೇ ಸ್ಥಾನದಲ್ಲಿದ್ದರೆ, ಪಂಜಾಬ್ 5ನೇ ಸ್ಥಾನದಲ್ಲಿದೆ. ಎರಡೂ ತಂಡಗಳಿಗೆ ಈ ಪಂದ್ಯ ಮಹತ್ವದಾಗಿದ್ದು, ಗೆಲ್ಲುವ ತಂಡಕ್ಕೆ 4ನೇ ಸ್ಥಾನ ಸಿಗಲಿದೆ.
ಕೆಕೆಆರ್ ವಿರುದ್ಧ ತಿರುಗಿಬಿದ್ದ ಆ್ಯಂಡ್ರೆ ರಸೆಲ್..!
ಡೇವಿಡ್ ವಾರ್ನರ್‌ಗಿದು ಈ ಆವೃತ್ತಿಯ ಕೊನೆ ಪಂದ್ಯ. ಈ ಪಂದ್ಯದ ಬಳಿಕ ಅವರು ವಿಶ್ವಕಪ್ ತಯಾರಿಗಾಗಿ ಆಸ್ಪ್ರೇಲಿಯಾಕ್ಕೆ ತೆರಳಲಿದ್ದಾರೆ. ಮಧ್ಯಮ ಕ್ರಮಾಂಕದ ಸಮಸ್ಯೆಗೆ ಪರಿಹಾರ ಹುಡುಕಲು ಸನ್‌ರೈಸರ್ಸ್ ಸತತ ವೈಫಲ್ಯ ಕಾಣುತ್ತಿದೆ. ಮತ್ತೊಂದೆಡೆ ಪಂಜಾಬ್ ಸಹ ತನ್ನ ಅಗ್ರ ಕ್ರಮಾಂಕದ ಮೇಲೆ ಅತಿಯಾಗಿ ಅವಲಂಬಿತಗೊಂಡಿದೆ. ನಿರ್ಣಾಯಕ ಹಂತದಲ್ಲಿ ಎರಡೂ ತಂಡಗಳ ಬೌಲರ್‌ಗಳು ಲಯ ಕಳೆದುಕೊಂಡಿದ್ದಾರೆ.
ಪಿಚ್ ರಿಪೋರ್ಟ್
ಹೈದರಾಬಾದ್ ಮೊದಲೆರಡು ಪಂದ್ಯಗಳಲ್ಲಿ 200ಕ್ಕೂ ಹೆಚ್ಚು ಮೊತ್ತಕ್ಕೆ ಸಾಕ್ಷಿಯಾದರೂ, ಕೊನೆ 4 ಪಂದ್ಯಗಳಲ್ಲಿ ಇಲ್ಲಿನ ಪಿಚ್‌ನಲ್ಲಿ ಸಾಧಾರಣ ಮೊತ್ತ ದಾಖಲಾಗಿದೆ. ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ದೊರೆಯುವ ಸಾಧ್ಯತೆ ಹೆಚ್ಚು.
ಒಟ್ಟು ಮುಖಾಮುಖಿ: 13
ಸನ್‌ರೈಸರ್ಸ್: 09
ಪಂಜಾಬ್: 04
ಸಂಭವನೀಯ ಆಟಗಾರರ ಪಟ್ಟಿ
ಸನ್‌ರೈಸರ್ಸ್: ವಾರ್ನರ್, ವಿಲಿಯಮ್ಸನ್(ನಾಯಕ), ಪಾಂಡೆ, ವಿಜಯ್, ಶಕೀಬ್, ಹೂಡಾ, ಸಾಹ, ರಶೀದ್, ಭುವನೇಶ್ವರ್, ಸಿದ್ಧಾಥ್, ಖಲೀಲ್.
ಪಂಜಾಬ್: ರಾಹುಲ್, ಗೇಲ್, ಮಯಾಂಕ್, ಮಿಲ್ಲರ್, ಪೂರನ್, ಮನ್‌ದೀಪ್, ಅಶ್ವಿನ್ (ನಾಯಕ), ವಿಲಿಯೊನ್, ಎಂ.ಅಶ್ವಿನ್, ಅಂಕಿತ್, ಶಮಿ.
ಸ್ಥಳ: ಹೈದರಾಬಾದ್
ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.