
ಮುಂಬೈ(ಮೇ.01): ನಾಯಕ ರೋಹಿತ್ ಶರ್ಮಾ (56 ರನ್) ಅವರ ಅಮೋಘ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ, ಸೋಮವಾರ ಇಲ್ಲಿ ನಡೆದ ಐಪಿಎಲ್ ಟಿ20 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು.
ಆಡಿದ 10 ಪಂದ್ಯಗಳಿಂದ 16 ಅಂಕ ಕಲೆಹಾಕಿದ ಮುಂಬೈ ಪ್ಲೇ ಆಫ್ ಸುತ್ತಿಗೆ ಪ್ರವೇಶ ಖಚಿತಪಡಿಸಿಕೊಂಡರೆ, ಆಡಿದ 11 ಪಂದ್ಯಗಳಲ್ಲಿ 8ನೇ ಸೋಲು ದಾಖಲಿಸಿದ ಆರ್‌ಸಿಬಿ, ಪ್ಲೇ ಆ್ ಸುತ್ತಿನಿಂದ ಬಹುತೇಕ ಹೊರಬಿದ್ದಂತಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್‌ಗಳಿಸಿತ್ತು. ಈ ಸುಲಭದ ಗುರಿ ಬೆನ್ನಟ್ಟಿದ ಮುಂಬೈ ಇನ್ನೂ ಒಂದು ಎಸೆತ ಇರುವಂತೆಯೇ ಕೇವಲ 5 ವಿಕೆಟ್ ನಷ್ಟಕ್ಕೆ 163 ರನ್‌ಗಳಿಸುವ ಮೂಲಕ ಜಯ ಸಾಧಿಸಿತು.
ಆರಂಭಿಕ ಆಘಾತ
ಮುಂಬೈ ತಂಡ ಪಾರ್ಥಿವ್ ಪಟೇಲ್ ಅವರನ್ನು ಮೊದಲ ಎಸೆತದಲ್ಲೇ ಕಳೆದುಕೊಂಡಿತು. ಆದರೆ ನಂತರ ಬಂದ ಜೋಸ್ ಬಟ್ಲರ್ (21 ಎಸೆತಗಳಲ್ಲಿ 33) ಮತ್ತು ನಿತೀಶ್ ರಾಣಾ (28 ಎಸೆತಗಳಲ್ಲಿ 27 ರನ್) 61 ರನ್ ಜೊತೆಯಾಟದ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ಬಳಿಕ ಕ್ರೀಸ್‌ಗೆ ಬಂದ ನಾಯಕ ರೋಹಿತ್ ಶರ್ಮಾ, ಪೊಲ್ಲಾರ್ಡ್ ಜೊತೆಗೂಡಿ ಆರಂಭದಿಂದಲೇ ಹೊಡೆಬಡೆಯ ಆಟದ ಮೂಲಕ ಯಾವುದೇ ಹಂತದಲ್ಲೂ ತಂಡ ಒತ್ತಡಕ್ಕೆ ಸಿಗದಂತೆ ನೋಡಿಕೊಂಡರು.
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಹೋಯಿತು. ಹೀಗಾಗಿ 180ರ ಆಸುಪಾಸು ತಲುಪಬಹುದಾಗಿದ್ದ ಸ್ಕೋರ್ 162ಕ್ಕೆ ಸೀಮಿತಗೊಂಡಿತು. ಆರ್‌ಸಿಬಿ ಪರ ಎಬಿಡಿ ವಿಲಿಯರ್ಸ್ 43, ಪವನ್ ನೇಗಿ 35, ಕೇದಾರ್ ಜಾಧವ್ 28, ಕೊಹ್ಲಿ 20 ರನ್ ಹೊಡೆದು ಗಮನ ಸೆಳೆದರು.
ಸ್ಕೋರ್
ಆರ್'ಸಿಬಿ: 162/08(20/20)
ಮುಂಬೈ ಇಂಡಿಯನ್ಸ್: 165/5(19.5/20)
ಪಂದ್ಯಶ್ರೇಷ್ಠ: ರೋಹಿತ್ ಶರ್ಮಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.