ಆಫ್ಘನ್ ಕ್ರಿಕೆಟಿಗ ಶಹಜಾದ್ ಅಮಾನತು

By Suvarna Web DeskFirst Published May 1, 2017, 2:47 PM IST
Highlights

ಶಹಜಾದ್ ಉದ್ದೇಶಪೂರ್ವಕವಾಗಿಯೇ ನಿಷೇಧಿತ ಉದ್ದೀಪನ ಮದ್ದು ಸೇವಿಸಿರುವುದು ಖಚಿತವಾದರೆ ಅವರನ್ನು 4 ವರ್ಷಗಳ ಕಾಲ ನಿಷೇಧಗೊಳಿಸಬಹುದು.

ಲಂಡನ್(ಮೇ.01): ಉದ್ದೀಪನ ಮದ್ದು ನೀತಿ ಉಲ್ಲಂಘಿಸಿದ ಆರೋಪದ ಮೇಲೆ ಆಫ್ಘಾನಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ಶಹಜಾದ್ ಅವರನ್ನು ಐಸಿಸಿ ತಾತ್ಕಾಲಿಕವಾಗಿ ಅಮಾನತುಗೊಳಿಸಿದ್ದು, ಏ.26ರಿಂದಲೇ ಇದು ಪೂರ್ವಾನ್ವಯವಾಗಲಿದೆ ಎಂದು ತಿಳಿಸಿದೆ.

ಜ.17ರಂದು ದುಬೈನಲ್ಲಿ ಶಹಜಾದ್ ಅವರ ಮೂತ್ರದ ಮಾದರಿಯನ್ನು ಪಡೆದು, ಸಾಲ್ಟ್ ಲೇಕ್ ಸಿಟಿಯಲ್ಲಿರುವ ವಾಡಾದಿಂದ ಮಾನ್ಯತೆ ಪಡೆದಿರುವ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಇದೀಗ ಅದರ ಫಲಿತಾಂಶ ಲಭ್ಯವಾಗಿದ್ದು, ಶಹಜಾದ್ ದೇಹದಲ್ಲಿ ನಿಷೇಧಿತ ಅನೋಬಾಲಿಕ್ ವಿಭಾಗಕ್ಕೆ ಸೇರಿದ ವಸ್ತು ಪತ್ತೆಯಾಗಿದೆ ಎಂದು ಐಸಿಸಿ ಹೇಳಿದೆ.

ಸದ್ಯ ಶಹಜಾದ್‌ರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದ್ದು, ಅವರ ಮೇಲೆ ಯಾವುದೇ ಶಿಸ್ತುಕ್ರಮಕೈಗೊಂಡಿಲ್ಲ. ಶಹಜಾದ್ ಉದ್ದೇಶಪೂರ್ವಕವಾಗಿಯೇ ನಿಷೇಧಿತ ಉದ್ದೀಪನ ಮದ್ದು ಸೇವಿಸಿರುವುದು ಖಚಿತವಾದರೆ ಅವರನ್ನು 4 ವರ್ಷಗಳ ಕಾಲ ನಿಷೇಧಗೊಳಿಸಬಹುದು. ಒಂದೊಮ್ಮೆ ಅವರು ತಮಗೆ ಅರಿವಿಲ್ಲದಂತೆ ನಿಷೇಧಿತ ಮದ್ದು ಸೇವಿಸಿರುವುದು ಸಾಬೀತಾದರೆ 2 ವರ್ಷಗಳ ಕಾಲ ನಿಷೇಧ ಹೇರಬಹುದಾಗಿದೆ ಎಂದು ಐಸಿಸಿ ತಿಳಿಸಿದೆ.

ಆಫ್ಘಾನಿಸ್ತಾನ ತಂಡ ಧೋನಿ ಎಂದೇ ಕರೆಯಲ್ಪಡುವ ಶೆಹಜಾದ್, ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

click me!