ಮೈದಾನದಲ್ಲೇ ಕೊನೆಯುಸಿರೆಳೆದ ಮುಂಬೈ ಬ್ಯಾಟ್ಸ್‌ಮನ್!

Published : Dec 25, 2018, 04:55 PM ISTUpdated : Dec 25, 2018, 05:12 PM IST
ಮೈದಾನದಲ್ಲೇ ಕೊನೆಯುಸಿರೆಳೆದ ಮುಂಬೈ ಬ್ಯಾಟ್ಸ್‌ಮನ್!

ಸಾರಾಂಶ

ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದ ಮುಂಬೈ ಕ್ರಿಕೆಟರ್ ವೈಭವ್ ಕೇಸರ್ಕರ್ ಹೃದಯಾಘಾತದಿಂದ ಕೊನೆಯುಸಿರೆಳೆದ ದುರಂತ ಘಟನೆ ನಡೆದಿದೆ. ಭರ್ಜರಿ ಬೌಂಡರಿ, ಸಿಕ್ಸರ್ ಸಿಡಿಸಿ ಅಬ್ಬರಿಸಿದ ವೈಭವ್ ಹೃದಯಾಘಾತಕ್ಕೆ ತುತ್ತಾಗಿ ಪ್ರಾಣ ಬಿಟ್ಟಿದ್ದಾರೆ.

ಮುಂಬೈ(ಡಿ.25): ಮುಂಬೈ ಲೋಕಲ್ ಕ್ರಿಕೆಟ್‌ನಲ್ಲಿ ಗಮನಸೆಳೆದಿರುವ ಯುವ ಬ್ಯಾಟ್ಸ್‌ಮನ್ ವೈಭವ್ ಕೇಸರ್ಕರ್ ಹೃದಯಾಘಾತದಿಂದ ಪ್ರಾಣ ಬಿಟ್ಟಿದ್ದಾರೆ. ಬ್ಯಾಟಿಂಗ್ ಮಾಡುವ ವೇಳೆ ವೈಭವ್ ಹೃದಯಾಘಾತಕ್ಕೆ ತುತ್ತಾಗಿದ್ದರು. ಆದರೆ ಇದನ್ನೂ ಲೆಕ್ಕಿಸದೇ ವೈಭವ್ ಬೌಂಡರಿ-ಸಿಕ್ಸರ್ ಸಿಡಿಸಿ ಮಿಂಚಿದ್ದರು.

ಇದನ್ನೂ ಓದಿ: ಇಂಡೋ-ಆಸಿಸ್ ಬಾಕ್ಸಿಂಗ್ ಡೇ ಟೆಸ್ಟ್- ಏನಿದರ ವಿಶೇಷತೆ?

ಬ್ಯಾಟಿಂಗ್ ಬಳಿಕ ಫೀಲ್ಡಿಂಗ್ ಇಳಿದ 24 ವರ್ಷದ ವೈಭವ್ ತೀವ್ರ ಎದೆ ನೋವಿನಿಂದ ಬಳಲಿದರು. ತಕ್ಷಣವೇ ವೈಭವ್ ಅವರನ್ನ ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಯಿತು. ಅಷ್ಟರಲ್ಲೇ ವೈಭವ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಎಂದೇ ವೈಭವ್ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ: 170ಕೀ.ಮಿ ವೇಗದಲ್ಲಿ ಅಪಘಾತ-ಪವಾಡ ಸದೃಶ್ಯ ಬದುಕುಳಿದ F3 ಚಾಲಕಿ!

ಟೆನಿಸ್ ಬಾಲ್ ಟೂರ್ನಮೆಂಟ್‌ ಯೂಟ್ಯೂಬ್‌ನಲ್ಲಿ ಲೈವ್ ನೀಡಲಾಗಿತ್ತು. ಈ ವೇಳೆ ವೈಭವ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆಯೇ ಎದೆ ನೋವಿನಿಂದ ಬಳಲುತ್ತಿರುವುದ ಸ್ಪಷ್ಟವಾಗಿ ಗೋಚರಿಸಿತ್ತು. ಬಡ ಕುಟಂಬದಿಂದ ಬಂದಿರುವ ವೈಭವ್ ಟೀಂ ಇಂಡಿಯಾ ಪರ ಆಡೋ ಕನಸು ಕಂಡಿದ್ದರು. ಆದರೆ ಲೆದರ್ ಬಾಲ್ ಹಾಗೂ ಕ್ಲಬ್ ಕ್ರಿಕೆಟ್‌ನಲ್ಲಿ ಸೇರಲು ಆರ್ಥಿಕ ಸಂಕಷ್ಟ ಎದುರಾಗಿತ್ತು. ಹೀಗಾಗಿ ವೈಭವ್ ಟೆನಿಸ್ ಬಾಲ್ ಕ್ರಿಕೆಟ್‌ ಆಡುತ್ತಿದ್ದರು. ದಿಢೀರ್ ವೈಭವ್ ಅವರನ್ನ ಕಳೆದುಕೊಂಡಿರುವ ಕುಟುಂಬ ದಿಕ್ಕೇ ತೋಚದಂತಾಗಿದೆ. 
ಇದನ್ನೂ ಓದಿ: ಐಪಿಎಲ್‌ನಿಂದ 100 ಕೋಟಿ ಸಂಪಾದಿಸಿದ ಟೀಂ ಇಂಡಿಯಾ ಕ್ರಿಕೆಟರ್ಸ್!

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2027 ಮಿನಿ ಹರಾಜಿಗೆ ಹೆಸರು ನೋಂದಾಯಿಸಿದ ತಂದೆ-ಮಗ..! ದಿಗ್ಗಜ ಕ್ರಿಕೆಟಿಗ, ಮತ್ತವರ ಮಗನ ನಡುವಿನ ವಯಸ್ಸಿನ ಅಂತರ ಇಷ್ಟೊಂದಾ?
IND vs NZ 2nd Test: ನ್ಯೂಜಿಲೆಂಡ್ ವಿರುದ್ಧ ಸರಣಿ ಗೆಲ್ಲಲು ಭಾರತಕ್ಕೆ ಲಾಸ್ಟ್ ಚಾನ್ಸ್; ಕ್ರೈಸ್ಟ್‌ಚರ್ಚ್ ಟೆಸ್ಟ್ ಯಾವಾಗ ಆರಂಭ?