ಇಂಡೋ-ಆಸಿಸ್ ಬಾಕ್ಸಿಂಗ್ ಡೇ ಟೆಸ್ಟ್- ಏನಿದರ ವಿಶೇಷತೆ?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯವನ್ನ ಬಾಕ್ಸಿಂಗ್ ಡೇ ಟೆಸ್ಟ್ ಎಂದೇ ಕರೆಯಲಾಗುತ್ತಿದೆ. ಅಷ್ಟಕ್ಕೂ ಈ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಅನ್ನೋ ಹೆಸರು ಬಂದಿದ್ದು ಹೇಗೆ? ಬಾಕ್ಸಿಂಗ್ ಡೇ ಪಂದ್ಯ ಶುರುವಾಗಿದ್ದು ಯಾವಾಗ? ಇಲ್ಲಿದೆ ಸಂಪೂರ್ಣ ವಿವರ.


ಮೆಲ್ಬೋರ್ನ್(ಡಿ.25): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯಕ್ಕೆ ಉಭಯ ತಂಡಗಳು ಭರ್ಜರಿ ಸಿದ್ಧತೆ ನಡೆಸುತ್ತಿದೆ. ನಾಳೆ(ಡಿ.26)ರಂದು ಆರಂಭವಾಗಲಿರುವ ಈ ಟೆಸ್ಟ್ ಪಂದ್ಯ ಭಾರತ ಹಾಗೂ ಆಸಿಸ್ ತಂಡಗಳಿಗೂ ಮುಖ್ಯವಾಗಿದೆ. ಈ ಟೆಸ್ಟ್  ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಎಂದೇ ಗುರುತಿಸಿಕೊಂಡಿದೆ.

ಅಷ್ಟಕ್ಕೂ ಈ ಟೆಸ್ಟ್ ಪಂದ್ಯಕ್ಕೆ ಬಾಕ್ಸಿಂಗ್ ಡೇ ಪಂದ್ಯ ಎಂದು ಹೆಸರು ಬರಲು ಕಾರಣವಿದೆ. ಇಂಗ್ಲೆಂಡ್ ಹಾಗೂ ಹಲವು ದೇಶಗಳಲ್ಲಿ ಕ್ರಿಸ್‌ಮಸ್ ಮರುದಿನ ಅಂದರೆ ಡಿಸೆಂಬರ್ 26ರ ರಜಾದಿನವನ್ನೂ ಬಾಕ್ಸಿಂಗ್ ಡೇ ಎಂದು ಆಚರಿಸಲಾಗುತ್ತೆ. ಸಾರ್ವಜನಿಕ ರಜಾ ದಿನವಾಗಿದೆ. ಇದೇ ದಿನವನ್ನ ಐರ್ಲೆಂಡ್‌ ಹಾಗೂ ಸ್ಪೇನ್‌ನ ಕ್ಯಾಟಲೋನಿಯಾ ರೀಜನ್‌ನಲ್ಲಿ ಸೈಂಟ್ ಸ್ಟೀಫನ್ ಡೇ ಎಂದು ಆಚರಿಸಲಾಗುತ್ತಿದೆ.

Latest Videos

ಇದನ್ನೂ ಓದಿ: ಮೆಲ್ಬರ್ನ್ ಟೆಸ್ಟ್’ಗೆ ಟೀಂ ಇಂಡಿಯಾ ಪ್ರಕಟ: 2 ಬದಲಾವಣೆ

ರೋಮೆನಿಯಾ, ಹಂಗೇರಿ, ಜರ್ಮನಿ, ಪೊಲೆಂಡ್, ನೆದರ್ಲೆಂಡ್ಸ್ ಸೇರಿದಂತೆ ಕೆಲ ದೇಶಗಳಲ್ಲಿ ಡಿಸೆಂಬರ್ 26ರನ್ನು ಸೆಕೆಂಡ್ ಕ್ರಿಸ್‌ಮಸ್ ಡೇ ಎಂದು ಆಚರಿಸಲಾಗುತ್ತಿದೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ಕ್ರಿಸ್‌ಮಸ್ ಮರುದಿನ ಬಾಕ್ಸಿಂಗ್ ಡೇ ದಿನ. ಹೀಗಾಗಿ ಈ ದಿನ ನಡೆಯುವ ಟೆಸ್ಟ್ ಪಂದ್ಯಕ್ಕೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಅನ್ನೋ ಹೆಸರು ಬಂದಿದೆ. ವಿಶೇಷ ಅಂದರೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನ ಮೆಲ್ಬೋರ್ನ್‌ ಕ್ರಿಕೆಟ್ ಮೈದಾನದಲ್ಲೇ ಆಯೋಜಿಸಲಾಗುತ್ತೆ.

ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್’ಗೆ ಆಸ್ಟ್ರೇಲಿಯಾ ತಂಡ ಪ್ರಕಟ; 1 ಮೇಜರ್ ಬದಲಾವಣೆ

1950 ರಿಂದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಆರಂಭಗೊಂಡಿದೆ. ಆದರೆ ಡಿಸೆಂಬರ್ 22 ರಿಂದ 27ರ ವರಗೆ ನಡೆಯುತ್ತಿದ್ದ ಈ ಪಂದ್ಯದ ನಾಲ್ಕನೇ ದಿನವನ್ನ(ಡಿ.26) ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತಿತ್ತು. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಮೊದಲ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಆಡಿತ್ತು. ಪಂದ್ಯದ ನಾಲ್ಕನೇ ದಿನ ಅಂದರೆ ಬಾಕ್ಸಿಂಗ್ ಡೆ ದಿನ ಬರೋಬ್ಬರಿ 60,486 ಮಂದಿ ಪಂದ್ಯ ವೀಕ್ಷಿಸಿದ್ದರು. 

ಇದನ್ನೂ ಓದಿ: ಮೆಲ್ಬರ್ನ್ ಟೆಸ್ಟ್: ದ್ರಾವಿಡ್‌ ದಾಖಲೆ ಮುರೀತಾರಾ ವಿರಾಟ್‌?

ಡಿಸೆಂಬರ್ 22 ರಿಂದ 27 ರವರೆಗಿದ್ದ ಈ ಟೆಸ್ಟ್ ಪಂದ್ಯದ ದಿನಾಂಕವನ್ನ 1980ರಲ್ಲಿ ಬದಲಾಯಿಸಲಾಯಿತು.  ಬಾಕ್ಸಿಂಗ್ ಡೇ ದಿನ(ಡಿ.26) ಟೆಸ್ಟ್ ಕ್ರಿಕೆಟ್ ಆಯೋಜಿಸಲು 1980ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿತು. ಬಳಿಕ ಪ್ರತಿ ವರ್ಷ ಡಿಸೆಂಬರ್ 26 ರಂದು ಆಸ್ಟ್ರೇಲಿಯಾ ಬಾಕ್ಸಿಂಗ್ ಡೇ ಪಂದ್ಯ ಆಯೋಜಿಸುತ್ತಿದೆ. 

ಇಂಗ್ಲೆಂಡ್, ಭಾರತ, ಸೌತ್ಆಫ್ರಿಕಾ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಪಾಕಿಸ್ತಾನ ತಂಡಗಳು ಬಾಕ್ಸಿಂಗ್ ಡೆ ಟೆಸ್ಟ್ ಪಂದ್ಯ ಆಡಿದೆ. ಭಾರತ ಮೊದಲು ಬಾಕ್ಸಿಂಗ್ ಡೆ ಟೆಸ್ಟ್ ಪಂದ್ಯ ಆಡಿದ್ದು 1985ರಲ್ಲಿ. ಈ ಪಂದ್ಯದಲ್ಲಿ ಭಾರತ ಡ್ರಾ  ಸಾಧಿಸಿತ್ತು. ಇದುವರೆಗೆ ಆಸ್ಟ್ರೇಲಿಯಾ ವಿರುದ್ದದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿಲ್ಲ. 

ಇದನ್ನೂ ಓದಿ: ಆಸಿಸ್ ತಂಡ ಸೇರಿಕೊಂಡ 7 ವರ್ಷದ ಸ್ಪಿನ್ನರ್ - ಕೊಹ್ಲಿ ಔಟ್ ಮಾಡಲು ಅಭ್ಯಾಸ!

ಭಾರತ - ಆಸ್ಟ್ರೇಲಿಯಾ ಬಾಕ್ಸಿಂಗ್ ಡೇ ಟೆಸ್ಟ್
ಪಂದ್ಯ - 7
ಭಾರತ ಗೆಲುವು - 0
ಆಸ್ಟ್ರೇಲಿಯಾ ಗೆಲುವು- 5
ಡ್ರಾ - 2

2014ರಲ್ಲಿ ಭಾರತ-ಆಸ್ಟ್ರೇಲಿಯಾ ಕೊನೆಯ ಬಾರಿಗೆ ಬಾಕ್ಸಿಂಗ್ ಡೆ ಟೆಸ್ಟ್ ಪಂದ್ಯ ಆಡಿತ್ತು. ಈ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ.  ಆಸ್ಟ್ರೇಲಿಯಾ ಒಟ್ಟು 42 ಬಾಕ್ಸಿಂಗ್ ಡೆ ಟೆಸ್ಟ್ ಪಂದ್ಯ ಆಡಿದೆ. ಇದರಲ್ಲಿ 24 ಪಂದ್ಯದಲ್ಲಿ ಗೆಲುವು ಸಾಧಿಸಿದೆ. 

click me!